ಬೆಳ್ತಂಗಡಿ, ಜು. 20 : ತಾಲೂಕಿನಇಂದಬೆಟ್ಟು ಗ್ರಾಮದ ಕಜೆ ಎಂಬಲ್ಲಿ ನಿಧಿಗಾಗಿ ಶೋಧ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಜು. 19ರ ರಾತ್ರಿ ಕಜೆ ಹೊನ್ನಪ್ಪ ಗೌಡ ಅವರ ಜಾಗದಲ್ಲಿ ನಿಧಿಗಾಗಿ ಶೋಧ ಕಾರ್ಯ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು, ಅವರ ಮಗ ಸುದರ್ಶನ ಗೌಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.


