ಕನ್ಯಾಡಿ, ಜು. 20 : ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಜುಲೈ 29 ಗುರುಪೂರ್ಣಿಮೆಯಿಂದ ಸೆಪ್ಟೆಂಬರ್ 14 ರ ತನಕ ನಡೆಯುವ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಚಾತುರ್ಮಾಸ್ಯ ವ್ರತಾಚರಣೆಯ ಆಮಂತ್ರಣ ಬಿಡುಗಡೆ ಸಮಾರಂಭ ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ನಡೆಯಿತು.
ಆಮಂತ್ರಣ ಬಿಡುಗಡೆಗೊಳಿಸಿ ಆಶೀರ್ವಚನ ಹಾಗೂ ಚಾತುರ್ಮಾಸ್ಯದ ಕಾರ್ಯಕ್ರಮದ ವಿವರ ನೀಡಿದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ‘ಲೋಕ ಕಲ್ಯಾಣಕ್ಕಾಗಿ ಚಾತುರ್ಮಾಸ್ಯ ವ್ರತಾಚರಣೆ ನಡೆಯುತ್ತಿದೆ. ಆ ಮೂಲಕ ಜನರಿಗೆ ಸಂಸ್ಕಾರ ಕೊಡುವ ಕಾರ್ಯವಾಗುತ್ತದೆ. ವ್ರತಾಚರಣೆಯಲ್ಲಿ ಜನ ಕಲ್ಯಾಣ ಯೋಚನೆ ಮಾಡುತ್ತಾ ಆಧ್ಯಾತ್ಮಿಕ ವಿಚಾರ ಸಾರುವ ಕಾರ್ಯವಾಗುವುದು’ ಎಂದರು.
ವ್ರತಾಚರಣೆಯಿಂದ ಆತ್ಮಶಕ್ತಿ ಬಲವರ್ಧನೆಯಾಗುವುದು. ಆಧ್ಯಾತ್ಮಕ ಸಿದ್ಧಾಂತವನ್ನು ಜನಮಾನಸಕ್ಕೆ ಬಿತ್ತರಿಸಿ ಹೊಸ ಚೈತನ್ಯ ಮೂಡಿಸುವ ಕಾರ್ಯವಾಗುವುದು. ನಮ್ಮ ಯುವ ಸಮುದಾಯಕ್ಕೆ ಸಂಸ್ಕಾರ ಶಿಕ್ಷಣ ಅಗತ್ಯವಿದ್ದು ಚಾತುರ್ಮಾಸ್ಯದ ಮೂಲಕ ಅದಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗುವುದು’ ಎಂದರು.
‘ಸೆ.3 ರಂದು ಶ್ರೀಗಳ ಪಟ್ಟಾಭಿಷೇಕ ವರ್ಧಂತಿ ಮಹೋತ್ಸವವೂ ಬಿಳಿಶಿಲೆ ದೇವಸ್ಥಾನದಲ್ಲಿಯೇ ವೈಭವದಿಂದ ನಡೆಯಲಿದ್ದು, ನವೆಂಬರ್ 25 ರಂದು ಹರಿದ್ವಾರ ಶಾಖಾ ಮಠದ ದಶಮಾನೋತ್ಸವ ಸಂಭ್ರಮಾಚರಣೆ ಹರಿದ್ವಾರ ಶಾಖಾ ಮಠದಲ್ಲಿ ನಡೆಯಲಿದೆ’ ಎಂದು ಅವರು ತಿಳಿಸಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಕಾರ್ಯಾಧ್ಯಕ್ಷತೆಯಲ್ಲಿ ಚಾತುರ್ಮಾಸ್ಯ ವ್ರತಾಚರಣಾ ಸಮಿತಿ ಈಗಾಗಲೇ ವ್ರತಾಚರಣೆಯ ಯಶಸ್ಸಿನಲ್ಲಿ ಕಾರ್ಯಪ್ರವೃತ್ತವಾಗಿದ್ದು ಮಹಾಮಂಡಲೇಶ್ವರ 1008 ಸದ್ಗುರು 1008 ಶ್ರೀ ಬ್ರಹ್ಮಾನಂದ ಸರಸ್ವತಜೀ ಮಹಾರಾಜರವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಧರ್ಮಸಭೆಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಉದ್ಘಾಟಿಸಲಿದ್ದು, ಸಂಸದರಾದ ಬಿ.ವೈ ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವ ಆರ್.ವಿ.ದೇಶಪಾಂಡೆ, ಶ್ರೀ ಜಿ ಶಂಕರ್ ಸೇರಿದಂತೆ ಮಾಜಿ ಸಚಿವರು, ಶಾಸಕರುಗಳು, ಉದ್ಯಮಿಗಳು, ಕ್ಷೇತ್ರದ ಟ್ರಸ್ಟಿಗಳು ಭಾಗವಹಿಸಲಿದ್ದಾರೆ. 48 ದಿನಗಳಲ್ಲಿ ನಡೆಯುವ ಚಾತುರ್ಮಾಸ್ಯ ವೃತಾಚರಣೆ ಪ್ರಯುಕ್ತ ಪ್ರತಿದಿನ ಸಾಯಂಕಾಲ 5.30ರಿಂದ ರಾತ್ರಿ 9.30ರ ವರೆಗೆ ಧಾರ್ಮಿಕ, ಸಾಂಸ್ಕೃಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗುರುದೇವ ಮಠದ ಟ್ರಷ್ಟಿ ಮಂಗಳೂರು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಗುರುದೇವ ಮಠದ ಟ್ರಷ್ಟಿ ಚಿತ್ತರಂಜನ್ ಮಂಗಳೂರು, ಶಿರಸಿ ಶಾಸಕ ಭೀಮಣ್ಣ ಟಿ ನಾಯ್ಕ, ಕ್ಷೇತ್ರದ ಟ್ರಸ್ಟಿಗಳಾದ ನಿವೃತ್ತ ಎಸ್ ಪಿ ಪೀತಾಂಬರ ಹೇರಾಜೆ ಬೆಳ್ತಂಗಡಿ , ಚಂದ್ರ ಎಸ್.ಕೆ ಸಾಗರ, ಹೆಚ್, ಆರ್ ನಾಯ್ಕ ಕುಮಟಾ, ಕೆ. ಎಂ. ನಾಗೇಶ್ ಕುಮಾರ್ ಮಾತನಾಡಿ ಚಾತುರ್ಮಾಸ್ಯ ವ್ರತಾಚರಣೆಗೆ ಎಲ್ಲರ ಸಹಕಾರದ ಅಗತ್ಯವಿದೆ. ಆ ಮೂಲಕ ವರ್ತಾಚರಣೆಯ ಯಶಸ್ಸಿನಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ರಾಮ ಕ್ಷೇತ್ರ ರಿಲೀಜಿಯಸ್ ಟ್ರಸ್ಟ್ ಮತ್ತು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ವಿಜಯ ಕುಮಾರ್ ಸೊರಕೆ ಪುತ್ತೂರು, ಚಿದಾನಂದ ಮೂರ್ತಿ ಮಂಗಳೂರು, ರವಿದಾಸ್ ಬೆಂಗಳೂರು, ಕೆ.ಸಂಜೀವ ಪೂಜಾರಿ ಬಿರ್ವ ಸೆಂಟರ್ ಬಂಟ್ವಾಳ, ರಘುನಾಥ ಮಾಬೆನ್ ಉಡುಪಿ, ಪ್ರಶಾಂತ್ ಎಂ. ಪಾರೆಂಕಿ ಪುರುಷೋತ್ತಮ ಡಿ.ಎ. ಧರ್ಮಸ್ಥಳ, ಪಿ. ರಾಜೇಶ್ ಪೂಜಾರಿ ಮೂಡುಕೋಡಿ, ಬೇಬಿ ಕುಂದರ್ ಭಂಟ್ವಾಳ, ತಿಮ್ಮಪ್ಪ ಗೌಡ ಬೆಳಾಲು, ವಕೀಲ ಅನಿಲ್ ಕುಮಾರ್ ಬೆಳ್ತಂಗಡಿ, ಬಾಲಕೃಷ್ಣ ಎ. ಶೆಟ್ಟಿ ಸವಣಾಲು .ಯತೀಶ್ ಸುವರ್ಣ, ತುಕಾರಾಮ್ ಸಾಲಿಯಾನ್, ಆರ್ಲ, ದೇವಿಪ್ರಸಾದ್ ಬರೆಮೇಲು, ಜಯಪ್ರಕಾಶ್ ಬಂಟ್ವಾಳ, ಲೋಕೇಶ್ ಶಾಂತಿ, ಮಹೇಶ್ ಶಾಂತಿ ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕ ಶ್ರೀ ರಾಮ ಕ್ಷೇತ್ರ ರಿಲೀಜಿಯಸ್ ಟ್ರಷ್ಠಿ ಕೇಶವ ಬಂಗೇರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


