ಬೆಳ್ತಂಗಡಿ : ಕಾಲೇಜ್ ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ಹೊಸ ತಿರುವು : ಕಥೆ ಕಟ್ಟಿದಳೇ ವಿದ್ಯಾರ್ಥಿನಿ?

ಬೆಳ್ತಂಗಡಿ, ಫೆ. 10 : ಇಲ್ಲಿಯ ಜೂನಿಯರ್ ಕಾಲೇಜು ಹಿಂದುಗಡೆ ರಸ್ತೆಯಲ್ಲಿ ಮುಸುಕುಧಾರಿಗಳ ತಂಡವೊಂದು ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿ, ಚೂರಿಯಿಂದ ತಿವಿದ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದ್ದು, ಇದೊಂದು ಕಟ್ಟು ಕಥೆ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಸುದೇಮುಗೇರು ಸಮೀಪದ ವಿದ್ಯಾರ್ಥಿನಿ ಕಾಲೇಜಿಗೆ ಹೋಗಲೆಂದು ನಿನ್ನೆ ಬೆಳಿಗ್ಗೆ ಸುಮಾರು 8.45ಕ್ಕೆ ತನ್ನ ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ಬೆಳ್ತಂಗಡಿ ಜೂನಿಯ‌ರ್ ಕಾಲೇಜಿನ ಹಿಂಭಾಗದಲ್ಲಿ ಸುದೇಮುಗೇರು ಸಮೀಪ ರಸ್ತೆ ತಿರುವಿನಲ್ಲಿ ಕಾರಿನಲ್ಲಿ ಬಂದ ಮೂರು ಮಂದಿ ಮುಸುಕುಧಾರಿಗಳ ತಂಡ ದ್ವಿಚಕ್ರವಾಹವನ್ನು ತಡೆಗಟ್ಟಿ ವಿದ್ಯಾರ್ಥಿನಿಯನ್ನು ಎಳೆದೊಯ್ಯಲು ಯತ್ನಿಸಿದರೆನ್ನಲಾಗಿದೆ.

ಈ ಸಂದರ್ಭ ವಿದ್ಯಾರ್ಥಿನಿ ಪ್ರತಿರೋಧ ತೋರಿದಾಗ ಮುಸುಕುಧಾರಿಗಳು ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಸ್ಕೂಟರ್ ಸವಾರ ಹಾರ್ನ್ ಮಾಡಿದ್ದನ್ನು ಕೇಳಿಸಿಕೊಂಡ ತಂಡ ಅಲ್ಲಿಂದ ಪರಾರಿಯಾಯಿಂತೆಂದು ಗಾಯಾಳು ವಿದ್ಯಾರ್ಥಿನಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ವಿದ್ಯಾರ್ಥಿನಿಯ ಕೈಗೆ ಗಾಯವಾಗಿದ್ದು, ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದರು.

ಇದೀಗ ಪ್ರಕರಣ ಹೊಸ ತಿರುವುವನ್ನು ಪಡೆದುಕೊಂಡಿದ್ದು, ವಿದ್ಯಾರ್ಥಿನಿಗೆ ಕಾಲೇಜಿಗೆ ಹೋಗಲು ಇಷ್ಟವಿರಲಿಲ್ಲ. ಇದಕ್ಕಾಗಿ ವಿದ್ಯಾರ್ಥಿನಿ ಈ ಕಟ್ಟುಕತೆಯನ್ನು ಕಟ್ಟಿ, ಬ್ಲಡ್ ನಿಂದ ಕೈಗೆ ಗೀರಿ ಕೊಂಡಿದ್ದಳು ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ, ಬೆಳ್ತಂಗಡಿ

ಉಪ್ಪಿನಂಗಡಿ : ಲಾವಣ್ಯ ಹತ್ಯೆಗೆ ಚೇತನ್ ತಲ್ವಾರ್ ಖರೀದಿಸಿದ್ದು ಉಪ್ಪಿನಂಗಡಿ ಕೃಷಿ ಕೇಂದ್ರದಿಂದ !

ಟಾಪ್ ಸುದ್ದಿಗಳು

ಮುಂಬೈ : ಭಾರತದಲ್ಲಿ ಸದ್ದು ಮಾಡುತ್ತಿದೆ “ರಾಮಾಯಣ” ಸಿನಿಮಾ – ಯಶ್ ಪಾತ್ರಕ್ಕೆ ಪಾತ್ರಕ್ಕೆ ಕನ್ನಡಿಗರು ಫಿದಾ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಧರ್ಮಸ್ಥಳ : ಬುರುಡೆ ಪ್ರಕರಣ – ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರ ಪುರುಷರದ್ದು ! ಎಫ್ ಎಸ್ ಎಲ್ ವರದಿಯಲ್ಲಿ ದೃಢ

⚠️ Contents are protected on this website.