ಕುದುರೆಮುಖ ರಾಷ್ಟ್ರೀಯ ಉದ್ಯಾನವನ : ಸ್ವಯಂ ಪ್ರೇರಿತ ಪುನರ್ವಸತಿಗೆ ಒಲವು ಹೊಂದಿರುವ ಕುಟುಂಬಗಳು ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಅರಣ್ಯ ಸಚಿವರ ಭೇಟಿ

ಬೆಳ್ತಂಗಡಿ, ಮೇ 09 : ತಾಲೂಕಿನ ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸವಾಗಿರುವ 9 ಕುಟುಂಗಳು ಸ್ವಯಂ ಪ್ರೇರಿತ ಪುನರ್ವಸತಿಗೆ ಒಲವು ಹೊಂದಿದ್ದು. ಈಗಾಗಲೇ ಕಡತಗಳು ಸಿದ್ಧಪಡಿಸಿ ಅಂದಾಜು ಮೊತ್ತವನ್ನು ಸರ್ಕಾರಕ್ಕೆ  ಸಲ್ಲಿಸಿರುತ್ತಾರೆ. ದಕ್ಷಿಣ ಕನ್ನಡ   ಜಿಲ್ಲಾಧಿಕಾರಿಯವರ ಸಮಕ್ಷಮದಲ್ಲಿ ಮುಕ್ತಾಯದ ಹಂತಕ್ಕೆ ಬಂದಿರುತ್ತದೆ.

ಈ ಬಗ್ಗೆ  ಸ್ವಯಂ ಪ್ರೇರಿತ ಪುನರ್ವಸತಿಗೆ ಒಲವು ಹೊಂದಿರುವ  ಕುಟುಂಬಗಳು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಶಿವರಾಂ ನೇತೃತ್ವದಲ್ಲಿ  ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು  ಭೇಟಿ ಮಾಡಿ ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸವಾಗಿರುವ 9 ಕುಟುಂಭಗಳ ಪುನರ್ವಸತಿಗೆ, ಅಂದಾಜು ಮೊತ್ತ 10 ಕೋಟಿ ರೂಪಾಯಿ ಅನುದಾನವನ್ನು  ಮಂಜೂರು ಗೊಳಿಸುವಂತೆ  ಮನವಿಯನ್ನು ಸಲ್ಲಿಸಲಾಯಿತು. ಮನವಿಗೆ ಸಚಿವರು ಪೂರಕವಾಗಿ ಸ್ಪಂದಿಸಿದರು. 

Advertisement



ಈ ಸಂದರ್ಭದಲ್ಲಿ ಕರ್ನಾಟಕ ಪರಿಸರ  ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶಾಲೆಟ್ ಪಿಂಟೊ,
ಮಲವಂತಿಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ  ಕೆ ಯು ಮೊಹಮ್ಮದ್, ಫಲಾನುಭವಿಗಳಾದ  ಸಂತೋಷ್ ಗೌಡ, ನಾರಾಯಣ ಮಲೆಕುಡಿಯ, ಬಾಲಕೃಷ್ಣ ಮಲೆಕುಡಿಯ, ಹರೀಶ್ ಮಲೆಕುಡಿಯ, ಪುರಂದರ ಗೌಡ  ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ನಾಳೆಯೂ (ಆ. 04) ಶಾಲಾ, ಪಿಯು ಕಾಲೇಜ್ ಗಳಿಗೆ ರಜೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಗುರುವಾಯನಕೆರೆ :  ಖಾಸಗಿ ಕಾಲೇಜ್ ವಿದ್ಯಾರ್ಥಿಯೋರ್ವ ಹಾಸ್ಟೆಲ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ – ಶ್ರೀರಾಜ್ ಶೆಟ್ಟಿ ಬಂಧನ

⚠️ Contents are protected on this website.