ಬೆಂಗಳೂರು : ವಕೀಲನಿಗೆ ಗುಂಡಿಕ್ಕಿ ಹತ್ಯೆ – ಮನೆಯಲ್ಲಿ ಬಾಡಿಗೆ ಇದ್ದವರಿಂದ ಶೂಟೌಟ್

ಬೆಂಗಳೂರು, ಅ. 19 : ವಕೀಲರೊಬ್ಬರಿಗೆ ಗುಂಡಿಟ್ಟು ಹತ್ಯೆಗೈದಿರುವ ಆತಂಕಕಾರಿ ಘಟನೆಯೊಂದು ಬೆಂಗಳೂರಿನ ವೈಟ್‌ಫೀಲ್ಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಬಳಿಕ ಸುತ್ತಮುತ್ತಲಿನ ಪ್ರದೇಶದ ಜನ ಆತಂಕಗೊಂಡಿದ್ದಾರೆ.

ಮಂಜುನಾಥ್‌ ಮೃತಪಟ್ಟ ವಕೀಲರು. ಮಂಜುನಾಥ್ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಬಿಹಾರ ಮೂಲದ ವ್ಯಕ್ತಿಗಳಿಂದಲೇ ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಅಲ್ಲದೇ ಬಾಡಿಗೆ ವಿಚಾರಕ್ಕೆ ಕಿರಿಕ್‌ ಆಗಿದೆ ಅನ್ನೋ ಶಂಕೆಯೂ ಇದೆ.

ಘಟನೆ ವಿವರ :

ಭಾನುವಾರ ತಡರಾತ್ರಿ 12 ಗಂಟೆ ಸುಮಾರಿಗೆ ಪಟ್ಟಂದೂರು ಅಗ್ರಹಾರದಲ್ಲಿ ವಾಸವಾಗಿರುವ ವಕೀಲ ಮಂಜುನಾಥ್ ಮತ್ತು ಅವರ ಪತ್ನಿ ಮನೆಯಲ್ಲಿದ್ದರು. ಈ ವೇಳೆ ಯಾರೋ ಮಂಜುನಾಥನಿಗೆ ಫೋನ್ ಮಾಡಿ ಬಾಡಿಗೆ ಕೊಡಬೇಕೆಂದು ಮನೆಯಿಂದ ಆಚೆಗೆ ಕರೆದಿದ್ದಾರೆ. ಮಂಜುನಾಥ್ ಮನೆಯಿಂದ ಆಚೆಗೆ ಬಂದ ತಕ್ಷಣ ಓರ್ವ ದುಡ್ಡುಕೊಡಲು ಮುಂದಾಗಿದ್ದಾನೆ, ಅದೇ ವೇಳೆ ಇನ್ನೊಬ್ಬನು ತಲೆಗೆ ಶೂಟ್ ಮಾಡಿದ್ದಾನೆ.

ತಕ್ಷಣವೇ ಮಂಜುನಾಥ್‌ ರನ್ನ ಮಣಿಪಾಲ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಿಕ ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ :  ಟೆಂಪೋ ಹಾಗೂ 2 ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ – ಸ್ಕೂಟ‌ರ್ ಸವಾರ ಸಾವು

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಇವರ ನೂತನ ಉತ್ಪನ್ನ ನೂತನ ತಂತ್ರಜ್ಞಾನದ “ಲಕ್ಷ್ಮೀದ್ವಾರ” ಲೋಕಾರ್ಪಣೆ

ಟಾಪ್ ಸುದ್ದಿಗಳು

ಬೆಳ್ತಂಗಡಿ : ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ವತಿಯಿಂದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ 7ನೇ ವರ್ಷದ ದೀಪಾವಳಿ ದೋಸೆ ಹಬ್ಬ-2026, ಸಹಸ್ರಾರು ಜನರು ಭಾಗಿ !