ಮಂಗಳೂರು : ಸುಂದರವಾದ ಫ್ಯಾಮಿಲಿ ಕಂಟೆಟ್ ಆಲ್ಬಮ್ ಸಾಂಗ್ “ಲವ್ ಇನ್ ಹೌಸ್ ಮ್ಯೂಸಿಕಲ್” ಸೆ. 26ಕ್ಕೆ ಬಿಡುಗಡೆ

ಮಂಗಳೂರು, ಸೆ. 21 : ಮ್ಯೂಸಿಕ್ ಪ್ರಿಯರಿಗೆ ಪಿಎಸ್ ಪ್ರೊಡಕ್ಷನ್ ಒಂದು ಸಂತಸದ ಸುದ್ದಿಯನ್ನು ನೀಡಿದೆ. ಒಂದು ಸುಂದರವಾದ ಫ್ಯಾಮಿಲಿ ಕಥೆಯನ್ನೊಳಗೊಂಡಂತಹ ಆಲ್ಬಮ್ ಸಾಂಗ್ “ಲವ್ ಇನ್ ಹೌಸ್ ಮ್ಯೂಸಿಕಲ್” ಸೆ. 26ಕ್ಕೆ ಬಿಡುಗಡೆಗೊಳ್ಳಲಿದೆ.

ಪಿಎಸ್ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗಿರುವ “ಲವ್ ಇನ್ ಹೌಸ್ ಮ್ಯೂಸಿಕಲ್” ಆಲ್ಬಮ್ ಸಾಂಗ್ ನ ಫಸ್ಟ್ ಪೋಸ್ಟರ್ ಎಲ್ಲೆಡೆ ಸದ್ದು ಮಾಡಿತ್ತು. ಅಲ್ಲದೇ, ಇದೀಗ ಟೀಸರ್ ಕೂಡ ಬಿಡುಗಡೆ ಆಗಿದ್ದು, ಮ್ಯೂಸಿಕ್ ಪ್ರಿಯರನ್ನು ಹುಚ್ಚೆಬ್ಬಿಸಿದೆ. ಸದ್ಯ ಇಡೀ ತಂಡದ ಮೇಲೆ ಜನತೆಯ ಕುತೂಹಲ ಹೆಚ್ಚಿದೆ. ಖ್ಯಾತ ಗಾಯಕ ಸಂತೋಷ್ ಬೇಂಕ್ಯಾ ಸ್ಟೋರಿ ಸ್ಕ್ರೀನ್ ಪ್ಲೆ, ಜಿತಿನ್ ಕುತ್ತಾರ್ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಹಾಡಿಗೆ ಪ್ರತೀಕ್ ಅಂಚನ್ ಸಂಗೀತ ನೀಡಿದ್ದು, ಸಂತೋಷ್ ಬೇಂಕ್ಯಾ, ಮನಿಶ್ ಪೂಜಾರಿ ಕೊಲ್ಯ, ಪುನೀತ್ ಕುಲಾಲ್ ಮಂಚಿ ಕಂಪೋಸ್ ಮಾಡಿದ್ದು ಅಧ್ಭುತವಾಗಿ ಮೂಡಿಬಂದಿದೆ.

ಖ್ಯಾತ ಗಾಯಕ ಸಂತೋಷ್ ಬೇಂಕ್ಯಾ ಈ ಹಾಡಿಗೆ ಧ್ವನಿಯಾಗಿದ್ದು ಎಲ್ಲರಲ್ಲೂ ಇನ್ನಷ್ಟು ಕೂತುಹಲ ಹೆಚ್ಚಿಸಿದೆ. ದೀಪ್ತಿ ಅಂಚನ್, ಕೃಷಿಕ ಬೆಂಗಳೂರು, ಸಾಕ್ಷಿ ಪೂಜಾರಿ, ಸಿಮಾ ಮಂಗಳೂರು, ಅಕ್ಷಯ್ ಕುತ್ತಾರ್, ಹೇಮಂತ್ ಕೊಲ್ಯ, ಮನೀಶ್ ಕೊಲ್ಯ, ಸಂತೋಷ್ ಬೇಂಕ್ಯಾ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೆ. 26ಕ್ಕೆ “Santhosh Benkya official Youtube” ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ವಿದೇಶ

ಜಪನ್ : ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ – ಪ್ಯಾರಾ ಈಜುಪಟು ಮೊಹಮ್ಮದ್ ಶಮ್ಸ್ ಜಪಾನ್‌ನಿಂದ ಗಡಿಪಾರು, ತಂಡಕ್ಕೆ ಮುಜುಗರ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಳಗಾವಿ : ಮನೆಯಲ್ಲಿ ವಿಜಯದಶಮಿ ಹಬ್ಬದ ಸಂಭ್ರಮದ ರಾತ್ರಿಯಂದು ಹರಿದಿತ್ತು ರಕ್ತ – ಹಬ್ಬದ ದಿನವೇ ಹೆಂಡತಿಗೆ ಚಟ್ಟ ಕಟ್ಟಿದ ಪತಿ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ನಾವೂರು ಕ್ಲಿನಿಕ್ ಗೆ ಬೆಂಕಿ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳಿರುವ ಶಂಕೆಯಿದೆ – ಗ್ರಾಮಸ್ಥರು