ಬೆಳ್ತಂಗಡಿ : ರೌಡಿಶೀಟರ್ ಮಹೇಶ್ ಶೆಟ್ಟಿ ತಿಮರೋಡಿ ಶರಣಾಗತಿಗೆ ಸಿದ್ಧತೆ – ಗಡಿಪಾರು ಫಿಕ್ಸ್ ?

ಬೆಳ್ತಂಗಡಿ, ಜು. 23 : ಉಜಿರೆಯ ರೌಡಿಶೀಟರ್ ಮಹೇಶ್ ಶೆಟ್ಟಿ ತಿಮರೋಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ 16-03-2026 ರಂದು ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಅವರು ಆರು ತಿಂಗಳ ಕಾಲ(16-03-2026 ರಿಂದ 16-09-2026 ರವರೆಗೆ) ಗಡಿಪಾರು ಆದೇಶ ಮಾಡಿದ ಬಳಿಕ ಪೊಲೀಸರ ಕೈಗೆ ಸಿಗದ ತಲೆಮರೆಸಿಕೊಂಡು ಸುಪ್ರೀಂ ಕೋರ್ಟ್ ವರೆಗೂ ಗಡಿಪಾರು ಆದೇಶದ ವಿರುದ್ಧ ಹೋರಾಟ ಮಾಡಿ ಯಾವುದೇ ಫಲ ಸಿಗದ ಕಾರಣದಿಂದ ಕೊನೆಗೂ ತಿಮರೋಡಿ ಶರಣಾಗತಿಗೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

Advertisement

ಸುಪ್ರೀಂ ಕೋರ್ಟ್ ನಲ್ಲಿ ಗಡಿಪಾರು ವಿರುದ್ಧ ಹಾಕಿದ್ದ ಅರ್ಜಿ ವಜಾಗೊಂಡ ಬಳಿಕ ಬೆಳ್ತಂಗಡಿ ಪೊಲೀಸರು ಗಡಿಪಾರು ಮಾಡಲು ತಿಮರೋಡಿಯ ಹುಡುಕಾಟವನ್ನು ಚುರುಕುಗೊಳಿಸಿದ ಬೆನ್ನಲ್ಲೇ ಬೆಳ್ತಂಗಡಿ ಪೊಲೀಸ್ ಠಾಣೆ ಬಿಟ್ಟು ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಠಾಣೆಯೊಂದಕ್ಕೆ ಇಂದು ಅಥವಾ ನಾಳೆ(ಜು.23 ಅಥವಾ ಜು.24) ತಿಮರೋಡಿ ಮಹೇಶ್ ಶೆಟ್ಟಿ ತೆರಳಿ ಶರಣಾಗತಿ ಆಗಿ ಬಳಿಕ ಗಡಿಪಾರು ಅಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊನೆ ಕ್ಷಣದಲ್ಲಿ ಶರಣಾಗತಿಯಾಗುವ ಪೊಲೀಸ್ ಠಾಣೆ ಬದಲಾವಣೆಯಾಗುವ ಸಾಧ್ಯತೆ ಇದೆ.

ಚಿಕ್ಕಮಗಳೂರು ಜಿಲ್ಲೆಯ ಪೊಲೀಸರಿಗೆ ಶರಣಾಗತಿಯಾದ್ರೆ ಬಳಿಕ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರು ತಿಮರೋಡಿಯನ್ನು ವಶಕ್ಕೆ ಪಡೆದು ಗಡಿಪಾರು ಪ್ರಕ್ರಿಯೆಯನ್ನು ಜಾರಿ ಮಾಡಿ ನೇರ ರಾಯಚೂರು ಜಿಲ್ಲೆಯ ಮಾನ್ಸಿ ತಾಲೂಕಿಗೆ ತಿಮರೋಡಿಯನ್ನು ಕರೆದುಕೊಂಡು ಹೋಗಿ ಮಾನ್ನಿ ಪೊಲೀಸ್ ಠಾಣೆಗೆ ಹಾಜರುಪಡಿಸಿ ಗಡಿಪಾರು ಹಸ್ತಾಂತರ ಪೂರ್ಣಗೊಳಿಸಲಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ರಧಾನಿಯವರ ಪೋಸ್ಟ್‌ಗೆ ನಿರ್ಬಂಧ ವಿವಾದ – ಫೇಸ್‌ಬುಕ್ ವಿರುದ್ಧ ಬಿಜೆಪಿ ಆಕ್ರೋಶ !

⚠️ Contents are protected on this website.