ಬೆಳ್ತಂಗಡಿ : ಗುಡುಗು ಸಹಿತ ಭಾರೀ ಗಾಳಿ ಮಳೆ – ಹಲವೆಡೆ ಭಾರಿ ಹಾನಿ

ಬೆಳ್ತಂಗಡಿ, ಏ. 21 : ತಾಲೂಕಿನಲ್ಲಿ ಸೋಮವಾರ ಸಂಜೆ ,ಗುಡುಗು ಸಹಿತ ಭಾರಿ ಗಾಳಿ ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಉಜಿರೆಯ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಬೃಹತ್ ಗಾತ್ರದ ರೆಂಬೆಯೊಂದು ಮುರಿದುಬಿದ್ದಿದೆ. ಕಾರಿಗೆ ಹಾನಿಯಾಗಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತರೊಬ್ಬರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

Advertisement

ಮುಂಡಾಜೆ ಗ್ರಾ. ಪಂ. ವ್ಯಾಪ್ತಿಯ ಚಾಮುಂಡಿ ನಗರ ಪರಿಸರದಲ್ಲಿ ರಾಮಕ್ಕ ಎಂಬವರ ಮನೆಗೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಈ ಪ್ರದೇಶದ ಇನ್ನೂ ನಾಲ್ಕು ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ದಿಡುಪೆ-ಮುಂಡಾಜೆ ರಸ್ತೆಯ ಕುರುಡ್ಯ ಎಂಬಲ್ಲಿ ರಸ್ತೆಗೆ ಮರ ಬಿದ್ದು ಸಂಚಾರ ವ್ಯತ್ಯಯ ಉಂಟಾಯಿತು. ಮಂಜುಶ್ರೀ ನಗರದ ಶ್ರೀಪತಿ ಆಚಾರ್ಯ ಎಂಬವರ ಮನೆ ಮೇಲೆ ತೆಂಗಿನ ಮರ ಮುರಿದುಬಿದ್ದು ಹಾನಿ ಉಂಟಾಗಿದೆ. ದಿನೇಶ್ ಆಚಾರ್ಯ ಎಂಬವರ ಕಾರಿನ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಕುಳೂರು ಪ್ರದೇಶದ ರಾಧಾ ಪೂಜಾರಿ ಎಂಬವರ ಮನೆಯ ಹೆಂಚುಗಳು ಗಾಳಿಗೆ ಹಾರಿಹೋಗಿವೆ. ಮನೆ ಪರಿಸರದಲ್ಲಿ ನಾಲ್ಕು ಮರಗಳು ಉರುಳಿ ಬಿದ್ದಿವೆ.

ಯಶೋದಾ ಎಂಬವರ ಮನೆಯ ಶೀಟುಗಳಿಗೆ ಹಾನಿ ಉಂಟಾಗಿದೆ. ಮುಂಡಾಜೆಯ ಜನತಾ ಕಾಲೋನಿಯಲ್ಲಿ ನಾಲ್ಕು ಮನೆಗಳಿಗೆ ಹಾನಿ ಸಂಭವಿಸಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ನೂರಾರು ಅಡಕೆ, ರಬ್ಬರ್ ಗಿಡಗಳು ಧರಾಶಾಹಿಯಾಗಿವೆ. ತಾಲೂಕಿನಾದ್ಯಂತ ವಿದ್ಯುತ್ ಪೂರೈಕೆ, ಅಂತರ್ಜಾಲ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ. ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದವರು, ಸ್ಥಳೀಯರು ಮರಗಳ ತೆರವಿಗೆ ಸಹಕಾರ ನೀಡಿದ್ದಾರೆ. ಉಜಿರೆ ಮತ್ತು ಇಂದಬೆಟ್ಟು ರಸ್ತೆಯ ಸಂಪರ್ಕ ಕೊಂಡಿಯಾಗಿರುವ ಅಂಬಡಬೆಟ್ಟು ಎಂಬಲ್ಲಿ ನೂತನ ಸೇತುವೆ ನಿರ್ಮಾಣವಾಗುತ್ತಿದ್ದು ಇಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ ಭಾರಿ ಮಳೆಗೆ ಕುಸಿದಿದೆ. ಇಲ್ಲಿ ಘನ ವಾಹನಗಳು ಓಡಾಡದ ಪರಿಸ್ಥಿತಿ ಎದುರಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ, ಬೆಳ್ತಂಗಡಿ

ಉಪ್ಪಿನಂಗಡಿ : ಲಾವಣ್ಯ ಹತ್ಯೆಗೆ ಚೇತನ್ ತಲ್ವಾರ್ ಖರೀದಿಸಿದ್ದು ಉಪ್ಪಿನಂಗಡಿ ಕೃಷಿ ಕೇಂದ್ರದಿಂದ !

ಟಾಪ್ ಸುದ್ದಿಗಳು

ಮುಂಬೈ : ಭಾರತದಲ್ಲಿ ಸದ್ದು ಮಾಡುತ್ತಿದೆ “ರಾಮಾಯಣ” ಸಿನಿಮಾ – ಯಶ್ ಪಾತ್ರಕ್ಕೆ ಪಾತ್ರಕ್ಕೆ ಕನ್ನಡಿಗರು ಫಿದಾ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಧರ್ಮಸ್ಥಳ : ಬುರುಡೆ ಪ್ರಕರಣ – ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರ ಪುರುಷರದ್ದು ! ಎಫ್ ಎಸ್ ಎಲ್ ವರದಿಯಲ್ಲಿ ದೃಢ

⚠️ Contents are protected on this website.