ಗಲ್ಫ್ ನಲ್ಲಿ ಮೋದಿ : ಪ್ರಧಾನಿ ವಿಮಾನಕ್ಕೆ F16 ಯುದ್ದ ವಿಮಾನದ ಬೆಂಗಾವಲು !

Advertisement

ಅಬುಧಾಬಿ, ಮೇ. 15 : ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಐದು ದಿನಗಳ ವಿದೇಶ ಪ್ರವಾಸ ಇಂದಿನಿಂದ (ಮೇ. 15) ಆರಂಭವಾಗಿದೆ. ಸಂಯುಕ್ತ ಅರಬ್ ಗಣರಾಜ್ಯ, ನೆದರ್ಲ್ಯಾಂಡ್, ಸ್ವೀಡನ್, ನಾರ್ವೇ ಮತ್ತು ಇಟೆಲಿ ದೇಶಕ್ಕೆ ಮೋದಿ ಪ್ರಯಾಣಿಸಲಿದ್ದಾರೆ. ಈ ಪ್ರವಾಸದ ಭಾಗವಾಗಿ, ಮೊದಲು ಮೋದಿ, ಅರಬ್ ಗಣರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರಿಗೊಂದು ಅಚ್ಚರಿಯ ಸ್ವಾಗತ ಕಾದಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿವರ ಏರ್ ಇಂಡಿಯಾ ಒನ್ ವಿಮಾನವು, ಅರಬ್ ಗಣರಾಜ್ಯದ ವಾಯುಪ್ರದೇಶ ಪ್ರವೇಶಿಸುತ್ತಿದ್ದಂತೆಯೇ, ಮೋದಿ ವಿಮಾನಕ್ಕೆ ಯುಎಇನ ಅತ್ಯಾಧುನಿಕ ಎಫ್-16, ಯುದ್ದ ವಿಮಾನವು ಬೆಂಗಾವಲಿಗೆ ನಿಂತಿದೆ. ಇದು, ದೆಹಲಿ ಮತ್ತು ಅಬುಧಾಬಿ ನಡುವಿನ ನಿಕಟ ಸಂಬಂಧದ ಸಂಕೇತ ಎಂದು ಯುಎಇ ಇದನ್ನು ಬಣ್ಣಿಸಿದೆ.

Advertisement

ಮಧ್ಯಪ್ರಾಚ್ಯ ಸಂಘರ್ಷದ ನಡುವೆ, ಯುಎಇ ದೇಶವು ಮೋದಿಯವರ ಐದು ರಾಷ್ಟ್ರಗಳ ಪ್ರವಾಸದ ಮೊದಲ ತಾಣವಾಗಿತ್ತು. ದೆಹಲಿಯಿಂದ ಹೊರಟ ಏರ್ ಇಂಡಿಯಾ ಒನ್ ವಿಮಾನವು, ಯುಎಇ ದೇಶದ ವಾಯುಪ್ರದೇಶಕ್ಕೆ ಆಗಮಿಸುತ್ತಿದ್ದಂತೆಯೇ, ಎರಡು ಎಫ್16 ಜೆಟ್ ವಿಮಾನಗಳು, ಪ್ರಧಾನಿ ವಿಮಾನಕ್ಕೆ ಬೆಂಗಾವಲಾಗಿ ನಿಂತವು. ಇದಾದ ನಂತರ, ಜಾಯೆದ್ ಅಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿಯವರಿಗೆ ಅದ್ದೂರಿ ಸ್ವಾಗತವನ್ನು ಕೋರಲಾಯಿತು. ಖುದ್ದು, ಅಧ್ಯಕ್ಷರೇ, ವಿಮಾನ ನಿಲ್ದಾಣದಲ್ಲಿ ಹಾಜರಿದ್ದು ಮೋದಿಯನ್ನು ಸ್ವಾಗತಿಸಿದ್ದಾರೆ. ಇದು, ಪ್ರಧಾನಿ ಮೋದಿಯವರಿಗೆ ಯುಎಇ ಅಧ್ಯಕ್ಷ ಮೊಹಮ್ಮದ್ ಬಿಜ್ ಜಾಯೆದ್ ಅಲ್ ನಹ್ಯಾನ್ ನೀಡಿದ ವಿಶೇಷ ಗೌರವವಾಗಿತ್ತು.

Advertisement

ಇರಾನ್ ಡ್ರೋನ್, ಕ್ಷಿಪಣಿ ಹೊಡೆದುರುಳಿಸಿದ್ದ ಎಫ್ 16

ಎಫ್ 16 ಡೆಸರ್ಟ್ ಫಾಲ್ಕನ್ ಯುದ್ದ ವಿಮಾನಗಳನ್ನು ಇರಾನ್ ಉಡಾಯಿಸಿದ್ದ ಡ್ರ‍ೋನ್ ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಲು ಬಳಸಿಕೊಳ್ಳಲಾಗಿತ್ತು. ಇದೇ ವಿಮಾನವನ್ನು, ಈಗ ಮೋದಿಯವರ ವಿಮಾನಕ್ಕೆ ಎಸ್ಕಾರ್ಟ್ ಆಗಿ ಯುಎಇ ಬಳಸಿಕೊಂಡಿದೆ. ಯುಎಇ ಅಧ್ಯಕ್ಷರು ಪ್ರಧಾನಿ ಮೋದಿಗೆ ಕೊಟ್ಟ ಈ ಗೌರವವು, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಇರುವ ಹೆಸರು ಮತ್ತು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ಯುಎಇ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಎಂಟನೇ ಯುಎಇ ಭೇಟಿ ಇದಾಗಿದೆ. ದೇಶವು, ಇರಾನ್’ನಿಂದ ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲಿ ಮೋದಿಯವರ ಭೇಟಿ ಮಹತ್ವವನ್ನು ಪಡೆದುಕೊಂಡಿದೆ. ಯುಎಇಯು ಈಗಾಗಲೇ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಡ್ರೋನ್ ದಾಳಿಯನ್ನು ಎದುರಿಸಿತ್ತು. ಇದರಲ್ಲಿ, ಬಹುತೇಕ ದಾಳಿಯನ್ನು ಯುಎಇ ಹೊಡೆದುರುಳಿಸಿತ್ತು. ತಮ್ಮ ಪ್ರವಾಸದ ವೇಳೆ, ನೀಡಿದ ವಿಶೇಷ ಗೌರವಕ್ಕೆ ಧನ್ಯವಾದವನ್ನು ಅರ್ಪಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ