ಚೆನ್ನೈ : ಮಾರಕಾಸ್ತ್ರದಿಂದ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದು ಬಳಿಕ ಮೃತದೇಹದ ಜೊತೆ ಸೆಲ್ಪಿ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿರುವ ಆಘಾತಕಾರಿ ಘಟನೆಯೊಂದು ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ. ಶ್ರೀಪ್ರಿಯಾ ಎಂಬಾಕೆಯೇ ಪತಿಯಿಂದಲೇ ಹತ್ಯೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಆರೋಪಿ ಪತಿ ಬಾಲಮುರುಗನ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕೌಟುಂಬಿಕ ಕಲಹದಿಂದ ಶ್ರೀಪ್ರಿಯಾ ಹಾಗೂ ಬಾಲಮುರುಗನ್ ಬೇರೆಬೇರೆಯಾಗಿ ವಾಸಿಸುತ್ತಿದ್ದರು. ಶ್ರೀಪ್ರಿಯಾ ಕೋಯಂಬತ್ತೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದರು, ಬಾಲಮುರುಗನ್ ತನ್ನ ಪತ್ನಿ ಶ್ರೀಪ್ರಿಯಾಳನ್ನು ಭೇಟಿಯಾಗಲು ಭಾನುವಾರ ಹಾಸ್ಟೆಲ್ ಬಂದಿದ್ದ ಈ ವೇಳೆ ಬಾಲಮುರುಗನ್ ಹರಿತವಾದ ಆಯುಧವನ್ನು ಹಿಡಿದುಕೊಂಡು ಬಂದಿದ್ದ ಭೇಟಿಯ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಈ ವೇಳೆ ಪತಿ ತನ್ನ ಕೈಯಲ್ಲಿದ್ದ ಹರಿತವಾದ ಆಯುಧದಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ನಡೆಯುತ್ತಿದ್ದಂತೆ ಹಾಸ್ಟೆಲ್ ನಲ್ಲಿದ್ದ ಮಂದಿ ಭಯಗೊಂಡು ಹೊರ ಓಡಿ ಬಂದಿದ್ದಾರೆ ಬಳಿಕ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಬಳಿಯಿದ್ದ ಆಯುಧವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಪತ್ನಿಯನ್ನು ಹತ್ಯೆಗೈದ ಪತಿ ತನ್ನ ಮೊಬೈಲ್ ನಿಂದ ಮೃತ ಪತ್ನಿಯ ಜೊತೆ ಸೆಲ್ಪಿ ತೆಗೆದು ಬಳಿಕ ವಾಟ್ಸಪ್ ಸ್ಟೇಟಸ್ ಹಾಕಿದ್ದಾನೆ. ಆರೋಪಿ ಬಾಲಮುರುಗನ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ವೇಳೆ ತನ್ನ ಪತಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದು ಇದರಿಂದ ನಾನು ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು ಪೊಲೀಸರು ಇನ್ನೂ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

