ಬೆಳ್ತಂಗಡಿ, ಅ. 15 : ಶ್ರೀ ಶಾರದ ಸೇವಾ ಟ್ರಸ್ಟ್ (ರಿ.), ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ನೆಲ್ಲಿಂಗೇರಿ ಅಂಡಿಂಜೆ – ಪೆರಾಡಿ, ಬೆಳ್ತಂಗಡಿ ತಾಲೂಕು ಹಾಗೂ ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ “ನೆಲ್ಲಿಂಗೇರಿ ಶಾರದೋತ್ಸವ ಸಂಭ್ರಮ” ಮತ್ತು ನೂತನ ಶ್ರೀ ಶಾರದಾ ರಂಗ ಮಂದಿರದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 17 ಮತ್ತು 18ರಂದು ನೆಲ್ಲಿಂಗೇರಿ ಮೈದಾನದಲ್ಲಿ ಅತ್ಯಂತ ವಿಜೃಂಭನೆಯಿಂದ ನಡೆಯಲಿದೆ.

ಶ್ರೀ ಶ್ರುತ ಸುಬ್ರಮಣ್ಯ ಭಟ್ ಮತ್ತು ಶ್ರೀ ಷಡ್ಡ ಕೃಷ್ಣ ಭಟ್ ಇವರ ಪೌರೋಹಿತ್ಯದಲ್ಲಿ ನೂತನ ಶ್ರೀ ಶಾರದಾ ರಂಗಮಂದಿರ ಉದ್ಘಾಟನೆ ಹಾಗೂ 10ನೇ ವರ್ಷದ “ಸಾರ್ವಜನಿಕ ಶ್ರೀ ಶಾರದೋತ್ಸವ” ಜರಗಲಿದೆ.

ದಿನಾಂಕ 17-10-2026ನೇ ಶನಿವಾರದಂದು ಬೆಳಿಗ್ಗೆ ಗಂಟೆ 6-00 ರಿಂದ ಶ್ರೀ ದೇವರ ವಿಗ್ರಹ ಪ್ರತಿಷ್ಠಾ ಮೆರವಣಿಗೆಯು ಶೆಟ್ಟಿ ಕಂಪೌಂಡ್ ಬಳಿಯಿಂದ “ಶ್ರೀ ಶಾರದಾ ಭಜನಾ ಮಂಡಳಿ ನೆಲ್ಲಿಂಗೇರಿ” ಇವರ ಕುಣಿತಾ ಭಜನೆಯೊಂದಿಗೆ ಹೊರಟು ನೆಲ್ಲಿಂಗೇರಿ ಮೈದಾನದವರೆಗೆ ನಡೆಯಲಿದೆ. ಬೆಳಿಗ್ಗೆ ಗಂಟೆ 7-00ಕ್ಕೆ ವಿಗ್ರಹ ಪ್ರತಿಷ್ಠೆ, ಬೆಳಿಗ್ಗೆ ಗಂಟೆ 8-00ಕ್ಕೆ ಗಣಹೋಮ, ಬೆಳಿಗ್ಗೆ ಗಂಟೆ 8-30ಕ್ಕೆ “ಶ್ರೀ ಶಾರದಾ ರಂಗ ಮಂದಿರದ ಉದ್ಘಾಟನೆ” ಬೆಳಿಗ್ಗೆ ಗಂಟೆ 9-00 ರಿಂದ ಭಜನಾ ಕಾರ್ಯಕ್ರಮ ಹಾಗೂ ಉದ್ಘಾಟನಾ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಂಜೆ ಗಂಟೆ 5-30ರಿಂದ ವಿಸರ್ಜನಾ ಮೆರವಣಿಗೆ ನಡೆಯಲಿದೆ.

ವಿಶೇಷ ಆಕರ್ಷಣೆ : ಶ್ರೀ ಶಾರದಾ ಕುಣಿತಾ ಭಜನಾ ಮಂಡಳಿ ನೆಲ್ಲಿಂಗೇರಿ ಹಾಗೂ ವಿವಿಧ ಭಜನಾ ತಂಡದವರ ಕುಣಿತ ಭಜನೆ, ಕೇರಳ ಚೆಂಡೆ, ನಾಸಿಕ್ ಬ್ಯಾಂಡ್ ಹಾಗೂ ಇತರ ವಿವಿಧ ವಿನೋಧವಳಿಗಳಿಂದ ವೈಭವದ ವಿಸರ್ಜನಾ ಮೆರವಣಿಗೆ ಹೊರಟು ಸಾವ್ಯ ಗ್ರಾಮದ ಸಾಂತ್ಯಾಲು ಸೇತುವೆ ಬಳಿ ವಿಸರ್ಜನೆ ಮಾಡಲಾಗುವುದು.

ರಾತ್ರಿ ಗಂಟೆ 8.00 ರಿಂದ ಶ್ರೀಮತಿ ಲಾವಣ್ಯ ವಿಶ್ವಾಸ್‌ದಾಸ್ ನಿರ್ಮಾಣ ಹಾಗೂ ನಿರ್ದೇಶನದ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾಬಳಗ ಉರ್ವ ಚಿಲಿಂಬಿ, ಮಂಗಳೂರು ಅಭಿನಯದ ‘ಸತ್ಯೋದ ಸಾದಿಗ್ ಧರ್ಮೊದ ಬೊಲ್ಪು’ ಅದ್ದೂರಿ ತುಳು ಜನಪದ ಸಿರಿ ನಾಟಕ “ಜೋಡು ಜೀಟಿಗೆ” ಎಂಬ ನಾಟಕ ಪ್ರದರ್ಶನ ಇರಲಿದೆ.


