ಕಲ್ಮಂಜ, ಜ. 04 : ಗ್ರಾಮದ ನಿಡಿಗಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ಸರ್ವಾಂಗೀಣ ಅಭಿವೃದ್ಧಿಗೆ ಒಟ್ಟು 47.15 ಲಕ್ಷ ಅನುದಾನವನ್ನು ಶಾಸಕ ಹರೀಶ್ ಪೂಂಜಾ ಒದಗಿಸಿದ್ದಾರೆ.
ಗ್ರಾಮದ ನಿಡಿಗಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಬಾವಣಿ ದುರಸ್ತಿ ರೂ. 3.00 ಲಕ್ಷ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನ ವಿಸ್ತರಣೆಗೆ ರೂ. 5.00 ಲಕ್ಷ, ಸರಕಾರಿ ಪ್ರೌಢಶಾಲೆಗೆ ನೂತನ ಕೊಠಡಿ ನಿರ್ಮಾಣ ರೂ. 17.15 ಲಕ್ಷ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಸಭಾಂಗಣಕ್ಕೆ ಟೈಲ್ಸ್ ಅಳವಡಿಕೆಗೆ ರೂ. 5.00 ಲಕ್ಷ, ನಿಡಿಗಲ್ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ರೂ. 17.00 ಲಕ್ಷ ಒದಗಿಸಿದ್ದಾರೆ.
ಶಾಸಕರು ವಿಶೇಷ ಮುತುವರ್ಜಿ ವಹಿಸಿ ಅನುದಾನ ಒದಗಿಸಿದ್ದಾಕ್ಕಾಗಿ ಶಾಲಾಡಳಿತ ಮಂಡಳಿ, ಶಾಲಭಿಮಾನಿಗಳು, ವಿದ್ಯಾರ್ಥಿ ಪೋಷಕರು ಹಾಗೂ ಊರವರು ಅಭಿನಂದನೆ ಸಲ್ಲಿಸಿದ್ದಾರೆ.


