ಐಪಿಎಲ್ ನಲ್ಲಿ ಮೊದಲ ಬಾರಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ವಿರಾಟ್ : ಲಖನೌ ತಂಡಡೆದುರು ಅಧಿಕಾರಯುತ ಜಯ ಸಾಧಿಸಿದ ಆರ್ ಸಿಬಿ

ಬೆಂಗಳೂರು, ಏ. 16 : ಭುವನೇಶ್ವರ ಕುಮಾರ್, ರಸಿಕ್ ಸಲಾಂ, ಜೋಶ್ ಹ್ಯಾಜಲ್ ವುಡ್ ಅವರ ಮೊನಚಾದ ಬೌಲಿಂಗ್ ಮತ್ತು ವಿರಾಟ್ ಕೊಹ್ಲಿ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ಜಯ ಸಾಧಿಸಿದೆ. ಈ ಮೂಲಕ ಆಢಿದ 5 ಪಂದ್ಯಗಳಲ್ಲಿ 4 ಜಯ ಗಳಿಸಿರುವ ರಜತ ಪಾಟೀದಾರ್ ಬಳಗವು 8 ಅಂಕಗಳನ್ನು ಸಂಪಾದಿಸಿದೆ. ಜೊತಗೆ ಅತ್ಯುನ್ನತ ರನ್ ರೇಟ್(1.503) ಆಧಾರದಲ್ಲಿ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

Advertisement

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 146 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಇದಕ್ಕುತ್ತರವಾಗಿ ರಾಯಲ್ ಚಾಲೆಂಜರ್ಸ್ ತಂಡವು ಇನ್ನೂ 29 ಎಸತೆತಗಳು ಬಾಕಿ ಉಳಿದಿರುವಂತೆ ಜಯಭೇರಿ ಬಾರಿಸಿತು.

ಇಂಪ್ಯಾಕ್ಟ್ ಪ್ಲೇಯರ್ ಆಗಿ ವಿರಾಟ್


ಐಪಿಎಲ್ ನಲ್ಲಿ ಮೊದಲ ಬಾರಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅವರು ಆರ್ ಸಿಬಿಗೆ ಅಗತ್ಯವಿದ್ದ ಇನ್ನಿಂಗ್ಸ್ ಕಟ್ಟಿದರು. ಉತ್ತಮ ಲಯದಲ್ಲಿದ್ದ ಅವರು ಆವೇಶ್ ಖಾನ್ ಬೌಲಿಂಗ್ ನಲ್ಲಿ ಎಡವಿ ಕೇವಲ 1 ರನ್ ನಿಂದ ಅರ್ಧಶತಕ ತಪ್ಪಿಸಿಕೊಂಡರು. ಔಟಾಗುವ ಮೊದಲು ಅವರು 34 ಎಸೆತಗಳಿಂದ 6 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ 49 ರನ್ ಗಳಿಸಿದ್ದರು. ಉಳಿದಂತೆ ನಾಯಕ ರಜತ್ ಪಾಟೀದಾರ್(13 ಎಸೆತದಿಂದ 27 ರನ್), ಜಿತೇಶ್ ಶರ್ಮಾ(9 ಎಸೆತದಲ್ಲಿ 23) ಅವರು ಬಿರುಸಿನ ಆಟವಾಡಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಲಖನೌ ಸೂಪರ್ ಜೈಂಟ್ಸ್ ತಂಡ ಆರ್ ಸಿಬಿಯ ರಸಿಕ್ ಸಲಾಂ, ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್ವುಡ್ ದಾಳಿಗೆ ತತ್ತರಿಸಿ ಕಡಿಮೆ ಮೊತ್ತಕ್ಕೆ ಆಲೌಟ್ ಆಯಿತು. ಮಿಚೆಲ್ ಮಾರ್ಷ್(32 ಎಸೆತದಲ್ಲಿ 40), ಆಯುಷ್ ಬದೋನಿ (24 ಎಸೆತದಲ್ಲಿ 38), ಮುಕುಲ್ ಚೌಧರಿ(28 ಎಸೆತದಲ್ಲಿ 39) ಉತ್ತಮ ಆಟ ಪ್ರದರ್ಶಿಸಿದರೂ ಉಳಿದ ಅಗ್ರ ಕ್ರಮಾಂಕ ಕುಸಿದಿದ್ದರಿಂದ ತಂಡದ ಮೊತ್ತ 150 ಸಹ ದಾಟಲಿಲ್ಲ. ಬಿರುಸಿನ ದಾಳಿ ನಡೆಸಿ ಲಖನೌ ಬ್ಯಾಟರ್ ಗಳನ್ನು ಕಾಡಿದ ಜೋಶ್ ಹೇಜಲ್ವುಡ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರಕಿತು.

ಸಂಕ್ಷಿಪ್ತ ಸ್ಕೋರ್

ಲಖನೌ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 146ಕ್ಕೆ ಆಲೌಟ್, ಮಿಚೆಲ್ ಮಾರ್ಷ್ 40(32), ಆಯುಷ್ ಬದೋನಿ 38(24), ಮುಕುಲ್ ಚೌಧರಿ 38(28), ಭುವನೇಶ್ವರ್ ಕುಮಾರ್ 27ಕ್ಕೆ 3, ರಸಿಕ್ ಸಲಾಂ 34ಕ್ಕೆ 4, ಜೋಶ್ ಹೇಜಲ್ವುಡ್ 20ಕ್ಕೆ 1, ಕೃನಾಲ್ ಪಾಂಡ್ಯ 38ಕ್ಕೆ2.

ರಾಯಲ್ ಚಾಲೆಂಜರ್ಸ್ ಬೆಂಗಳೂರು 15.1 ಓವರ್ ಗಳಲ್ಲಿ 149/5, ವಿರಾಟ್ ಕೊಹ್ಲಿ 49(34), ರಜತ್ ಪಾಟೀದಾರ್ 27(13), ಜಿತೇಶ್ ಶರ್ಮಾ 23(9), ಪ್ರಿನ್ಸ್ ಯಾದವ್ 32ಕ್ಕೆ 3, ಆವೇಶ್ ಖಾನ್ 23ಕ್ಕೆ 2.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

⚠️ Contents are protected on this website.