ಗುಜರಾತ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ‘ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದುಕೊಂಡ ರೂಪಶ್ರೀ ವರ್ಕಾಡಿ

ಗುಜರಾತ್‌, ಸೆ. 23 : ರಾಜ್ಯದ ಏಕ್ತಾ ನಗರದಲ್ಲಿ ಜರುಗಿದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ವಿಭಾಗಗಳಲ್ಲಿ ಒಟ್ಟು 92 ಮಂದಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಕನ್ನಡ ಹಾಗೂ ತುಳು ಚಿತ್ರರಂಗದ ಪ್ರತಿಭೆಗಳಿಗೆ ರಾಷ್ಟ್ರಪತಿಗಳ ಸಮ್ಮುಖದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಜನಪ್ರಿಯ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಒಡೆತನದ ‘ಪರಂವಃ ಪಿಕ್ಚರ್ಸ್’ ಮತ್ತು ಖ್ಯಾತ ‘ಕೆಆರ್‌ಜಿ ಸ್ಟುಡಿಯೋಸ್’ ಜಂಟಿ ನಿರ್ಮಾಣದ ‘ಮಿಥ್ಯ’ ಸಿನಿಮಾ ಮೂರು ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಿತು.

ಸುಮಂತ್ ಭಟ್ ಕಥೆ ಬರೆದು ನಿರ್ದೇಶಿಸಿರುವ ‘ಮಿಥ್ಯ’ ಚಿತ್ರದಲ್ಲಿನ ನಟನೆಗಾಗಿ ಬಾಲನಟ ಅತೀಶ್ ಎಸ್. ಶೆಟ್ಟಿಅತ್ಯುತ್ತಮ ಬಾಲ ಕಲಾವಿದ’ ಪ್ರಶಸ್ತಿಯನ್ನು ಸ್ವೀಕರಿಸಿದರು. ಅದೇ ರೀತಿ ಚಿತ್ರದಲ್ಲಿನ ಭಾವಪೂರ್ಣ ಅಭಿನಯಕ್ಕಾಗಿ ರೂಪಶ್ರೀ ವರ್ಕಾಡಿ ಅವರು ‘ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ಪಡೆದುಕೊಂಡರು. ಚಿತ್ರದಲ್ಲಿ ಪ್ರಕಾಶ್ ತೂಮಿನಾಡ್ ಸೇರಿದಂತೆ ಹಲವು ಕಲಾವಿದರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಕರಾವಳಿಯ ತುಳು ಚಿತ್ರರಂಗಕ್ಕೂ ಸಮಾರಂಭದಲ್ಲಿ ವಿಶೇಷ ಗೌರವ ಸಂದಿದ್ದು, ಶಿವಧ್ವಜ್ ಶೆಟ್ಟಿ ನಿರ್ದೇಶನದ ಹಾಗೂ ‘ಪಿಚ್ಚರ್ ಸ್ಟುಡಿಯೋ’ ನಿರ್ಮಾಣದ ‘ಇಂಬು’ ಚಿತ್ರತಂಡವು ‘ಅತ್ಯುತ್ತಮ ತುಳು ಸಿನಿಮಾ’ ವಿಭಾಗದ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿಸಿಕೊಂಡಿತು. ಸಿನಿಮಾ ಬರವಣಿಗೆ ವಿಭಾಗದಲ್ಲಿ (ಅತ್ಯುತ್ತಮ ಪುಸ್ತಕ), ಲೇಖಕ ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ ಅವರ ರಚನೆಯ ನಾನಿರುವುದೇ ನಿಮಗಾಗಿ ನಾಡಿರುವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ ಕೃತಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪುಸ್ತಕವನ್ನು ಮಿರರ್ ಬುಕ್ಸ್ ಪ್ರಕಾಶನ ಪ್ರಕಟಿಸಿದೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ವಿದೇಶ

ಜಪನ್ : ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ – ಪ್ಯಾರಾ ಈಜುಪಟು ಮೊಹಮ್ಮದ್ ಶಮ್ಸ್ ಜಪಾನ್‌ನಿಂದ ಗಡಿಪಾರು, ತಂಡಕ್ಕೆ ಮುಜುಗರ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಳಗಾವಿ : ಮನೆಯಲ್ಲಿ ವಿಜಯದಶಮಿ ಹಬ್ಬದ ಸಂಭ್ರಮದ ರಾತ್ರಿಯಂದು ಹರಿದಿತ್ತು ರಕ್ತ – ಹಬ್ಬದ ದಿನವೇ ಹೆಂಡತಿಗೆ ಚಟ್ಟ ಕಟ್ಟಿದ ಪತಿ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ನಾವೂರು ಕ್ಲಿನಿಕ್ ಗೆ ಬೆಂಕಿ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳಿರುವ ಶಂಕೆಯಿದೆ – ಗ್ರಾಮಸ್ಥರು