ಮಂಗಳೂರು, ಸೆ. 25 : ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ – ಕಾಲೇಜು ಕುಸ್ತಿ ಸ್ಪರ್ಧೆ ಯಲ್ಲಿ ಹಿರ್ಗಾನದ ಸಾಕ್ಷಿ ಶೆಟ್ಟಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಸುರತ್ಕಲ್‌ನ ಗೋವಿಂದ ದಾಸ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಸ್ಪರ್ಧೆಯಲ್ಲಿ ಹಿರ್ಗಾನ ರಾಜೀವನಗರ ನಿವಾಸಿ ಉಮೇಶ್ ಶೆಟ್ಟಿ ಹಾಗೂ ಸೌಮ್ಯ ಶೆಟ್ಟಿ ದಂಪತಿಗಳ ಪುತ್ರಿ ಸಾಕ್ಷಿ ಶೆಟ್ಟಿ ಚಿನ್ನದ ಪದಕ ಗೆದ್ದಿದ್ದಾರೆ. ಅವರಿಗೆ ಕುಟುಂಬಸ್ಥರು ಹಾಗೂ ಊರವರು ಅಭಿನಂದಿಸಿದ್ದಾರೆ.

