ಕಲ್ಮಂಜ : ಸಂಗಮ ಶ್ರೀ ಯುವಕ ಮಂಡಲ (ರಿ.) ವತಿಯಿಂದ “ಸಂಗಮ ಟ್ರೋಫಿ” ಕ್ರಿಕೆಟ್ ಪಂದ್ಯಾಟ

ಕಲ್ಮಂಜ, ಮಾ. 02 : ಸಂಗಮ ಶ್ರೀ ಯುವಕ ಮಂಡಲ (ರಿ.) ವತಿಯಿಂದ ಸಂಗಮ ಶ್ರೀ ಪ್ರೀಮಿಯರ್ ಲೀಗ್ (SPL) “ಸಂಗಮ ಟ್ರೋಫಿ-2026” ಕ್ರಿಕೆಟ್ ಪಂದ್ಯಾಟವು ಸಂಕಿಬೆಟ್ಟು ಮೈದಾನದಲ್ಲಿ ಮಾರ್ಚ್ 01ರಂದು ನಡೆಯಿತು. ಕ್ರಿಕೆಟ್ ಪಂದ್ಯಾಟವನ್ನು ಶ್ರೀ ವೆಂಕಟರಮಣ ಹೆಬ್ಬಾರ್, ಶ್ರೀ ಶ್ರೀನಿವಾಸ್ ರಾವ್, ಶ್ರೀ ಲಿಂಗಯ್ಯ ಶೆಟ್ಟಿಗಾರ್, ಶ್ರೀ ಸೀತಾರಾಂ ಭಟ್ ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.

Advertisement

ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ ವೆಂಕಟರಮಣ ಹೆಬ್ಬಾರ್ ಅವರು, ಸಂಗಮ ಶ್ರೀ ಯುವಕ ಮಂಡಲ (ರಿ.)ದ ಯುವಕರು ಊರಿನ ಅಭಿವೃದ್ಧಿಯ ದೃಷ್ಟಿಯಿಂದಲೂ ಬಹಳಷ್ಟು ಶ್ರಮವಹಿಸುತ್ತಿದ್ದಾರೆ. ಇಂದು ಆಯೋಜನೆಗೊಂಡಿರುವ ಈ ಕ್ರೀಡಾಕೂಟ ಅದು ಊರಿನ ಹಿರಿಮೆಯನ್ನು ಹೆಚ್ಚಿಸಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಆಯೋಜನೆಗೊಳ್ಳಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ, ಸಂಗಮ ಶ್ರೀ ಯುವಕ ಮಂಡಲ (ರಿ.) ಅಧ್ಯಕ್ಷರಾದ ಶ್ರೀ ಜಗನ್ನಾಥ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರವೀಣ್ ಗೌಡ ಕರಿಯನೆಲ ಉಪಸ್ಥಿತರಿದ್ದರು. ಶ್ರೀ ಸಾಂತಪ್ಪ ಎಂ. ಅವರು ಕಾರ್ಯಕ್ರಮ ನಿರೂಪಿಸಿದರು.

ಶಾಸಕ ಹರೀಶ್ ಪೂಂಜಾ ಭೇಟಿ :

ಬೆಳ್ತಂಗಡಿಯ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರು ಸಂಗಮ ಶ್ರೀ ಪ್ರೀಮಿಯರ್ ಲೀಗ್ (SPL) “ಸಂಗಮ ಟ್ರೋಫಿ” ಕ್ರಿಕೆಟ್ ಪಂದ್ಯಾಟಕ್ಕೆ ಆಗಮಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. “ಯುವ ಸಮುದಾಯವು ಒಗ್ಗಟ್ಟಿನಲ್ಲಿ ನಿಂತಾಗ ಊರಿನ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಅಲ್ಲದೆ, ಕ್ರೀಡಾಕೂಟಗಳ ಆಯೋಜನೆಯಿಂದಾಗಿ ಒಗ್ಗಟ್ಟು ಮತ್ತಷ್ಟು ಬಲಗೊಳ್ಳುತ್ತದೆ. ಸಂಗಮ ಶ್ರೀ ಯುವಕ ಮಂಡಲ (ರಿ.)ವು ಸಮಾಜಮುಖಿಯಾಗಿ ಕೆಲಸ ನಡೆಸುತ್ತಿರುವುದು ಸಂತೋಷದ ವಿಚಾರ ಎಂದರು.

ಸಂಗಮ ಶ್ರೀ ಕ್ರಿಕೆಟರ್ಸ್ A – ಚಾಂಪಿಯನ್

ಸಂಗಮ ಶ್ರೀ ಪ್ರೀಮಿಯರ್ ಲೀಗ್ (SPL) “ಸಂಗಮ ಟ್ರೋಫಿ-2026” ಕ್ರಿಕೆಟ್ ಪಂದ್ಯಾಟದಲ್ಲಿ ಸಂಗಮ ಶ್ರೀ ಕ್ರಿಕೆಟರ್ಸ್ A ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಮೃತ್ಯುಂಜಯ ಫ್ರೆಂಡ್ಸ್ – B ಒಂಜರೆಬೈಲು ತಂಡವು ದ್ವಿತೀಯ ಹಾಗೂ ಸಂಗಮ ಶ್ರೀ ಕ್ರಿಕೆಟರ್ಸ್ B ತಂಡವು ತೃತೀಯ ಸ್ಥಾನಿಯಾಗಿ ಹೊರಹೊಮ್ಮಿತು. ಮ್ಯಾನ್ ಆಫ್ ದಿ ಸೀರಿಸ್ ಶ್ರೀ ಅಶೋಕ್, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಶ್ರೀ ಬಾಲಕೃಷ್ಣ ಹಾಗೂ ಬೆಸ್ಟ್ ಬೌಲರ್ ಶ್ರೀ ರಕ್ಷಿತ್ ಅವರು ವೈಯಕ್ತಿಕ ಬಹುಮಾನಗಳನ್ನು ಪಡೆದುಕೊಂಡರು. ಶ್ರೀ ಬಾಲಕೃಷ್ಣ ಹಾಗೂ ಶ್ರೀ ಲೋಹಿತ್ ಕುಮಾರ್ ಅವರು ಪಂದ್ಯಾಟದ ನಿರೂಪಣೆಗೈದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.