ಮುಂಡಾಜೆ : ನಿವೃತ್ತ ಶಿಕ್ಷಕ ಶಂಕರ್ ತಾಮನ್ಕರ್ ರಿಂದ ಮಾದರಿ ಸೇವೆ – ತಂದೆ ದಿ. ನಾರಾಯಣ ತಾಮನ್ಕರ್ ಸವಿನೆನಪಿಗಾಗಿ ಅರ್ಹರಿಗೆ ಧನ ಸಹಾಯ

ಮುಂಡಾಜೆ, ಆ. 03 : ನಿವೃತ್ತ ಶಿಕ್ಷಕ, ಸಂಗೀತ ಗುರು, ಕವಿಗಳೂ ಆಗಿರುವ ಶಂಕರ್ ತಾಮನ್ಕರ್ ಮುಂಡಾಜೆ ತನ್ನ ತಂದೆ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ  ಮತ್ತು ಆರೋಗ್ಯ ಸಹಾಯವನ್ನು ಆ. 2 ರಂದು ಅರ್ಹರಿಗೆ ಹಸ್ತಾಂತರಿಸಿದರು.

ಶೈಕ್ಷಣಿಕ ಸಹಾಯದಡಿ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳನ್ನು ಅವರದ್ದೇ ಮಾನದಂಡವಾದ ಪ್ರತಿಭೆ, ಆರ್ಥಿಕ ಹಿಂದುಳಿದಿರುವಿಕೆಯಂತೆ ಗುರುತಿಸಿ 6 ಮಂದಿಗೆ 30 ಸಾವಿರ ರೂ.ಗಳು,  ಗರ್ಭಾವಸ್ಥೆಯಿಂದಲೇ ಅನಾರೋಗ್ಯಕ್ಕೆ ತುತ್ತಾಗಿ ಇದೀಗ ಚಿಕಿತ್ಸೆಯಲ್ಲಿರುವ ಪುಟಾಣಿ ಮಗುವಿನ ಚಿಕಿತ್ಸೆಗೆ, ವೈಯುಕ್ತಿಕ ಸಮಸ್ಯೆಗಳಿದ್ದರೂ ಸಮಾಜ‌ಸೇವೆಯಲ್ಲಿ ನಿತರರಾಗಿರುವ ವ್ಯಕ್ತಿಯೊಬ್ಬರಿಗೆ ಪ್ರೋತ್ಸಾಹಧನ, ಹಾಗೂ ಕ್ರೀಡಾ ಸಂಸ್ಥೆಗೆ ಸಹಾಯ ಎಂಬಂತೆ 17 ಸಾವಿರ, ಹೀಗೆ ಒಟ್ಟು 47 ಸಾವಿರ ರೂ. ಗಳನ್ನು ಅವರು ವಿತರಿಸಿದರು. ಮುಂಡಾಜೆಯ ಅವರ ‘ಪರಂಪರಾ’ ಮನೆಯಲ್ಲಿ ಈ ಸರಳ ಕಾರ್ಯಕ್ರಮ ನಡೆಯಿತು.

Advertisement


ಮುಂಡಾಜೆಯ ಉದ್ಯಮಿ ಹಾಗೂ ಸಮಾಜ ಸೇವಕ ಅರೆಕ್ಕಲ್ ರಾಮಚಂದ್ರ ಭಟ್, ನಿವೃತ್ತ ಬ್ಯಾಂಕ್ ಅಧಿಕಾರಿ ರಾಘವೇಂದ್ರ ತಾಮನ್ಕರ್ ಮೈಸೂರು, ಯಂಗ್ ಚಾಲೆಂಜರ್ಸ್ ಸಂಸ್ಥಾಪಕ ನಾಮದೇವ ರಾವ್, ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ಬಂಗೇರ, ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆ, ಶಂಕರ್ ತಾಮನ್ಕರ್ ಮತ್ತು ಪತ್ನಿ ಸ್ವಾತಿ ತಾಮನ್ಕರ್, ಪುತ್ರಿ ನವನಿ ತಾಮನ್ಕರ್, ಅಳಿಯ ಪ್ರವೀಣ್, ತಾಮನ್ಕರ್ ಬಂಧುಗಳಾದ ಪ್ರಸನ್ನ ತಾಮನ್ಕರ್, ಯಶ್ ತಾಮನ್ಕರ್, ಚೇತನ್ ತಾಮನ್ಕರ್ ಮೈಸೂರು, ವಾಸುದೇವ ಗೋಖಲೆ ಮುಂಡಾಜೆ ಮೊದಲಾದವರು ಉಪಸ್ಥಿತರಿದ್ದರು.

1996 ರಿಂದ ಸದ್ದಿಲ್ಲದೆ ನಡೆಯುತ್ತಿದೆ ಸೇವೆ

ಬಹುಮುಖ ಪ್ರತಿಭಾನ್ವಿತರಾಗಿರುವ ಶಂಕರ್ ತಾಮನ್ಕರ್ ಅವರು ಸರಕಾರಿ ಸೇವೆಗೆ ಸೇರಿದ 1996 ರಿಂದಲೇ ಸದ್ದಿಲ್ಲದೆ ಈ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. 1500 ರೂ. ನೆರವಿನಿಂದ ಆರಂಭಗೊಂಡದ್ದು ಇಂದು ದೊಡ್ಡ ಮೊತ್ತದವರೆಗೆ ಬೆಳೆದಿದೆ.‌ಅವರ ಸೇವೆಗೆ ಪುತ್ರಿ ಮತ್ತು ಅಳಿಯ ಕೂಡ ಸಾತ್ ನೀಡಲು ಆರಂಭಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಭಾರೀ ಮಳೆ ಹಿನ್ನೆಲೆ : ನಾಳೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ತುರ್ತು ಸಭೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಶಿವಮೊಗ್ಗ : ಭಾರೀ ಮಳೆ ತೀರ್ಥಹಳ್ಳಿ ಬಳಿ ಗುಡ್ಡ ಕುಸಿತ : 3 ವರ್ಷದ ಮಗು, ಅಪ್ಪ ಅಮ್ಮ ಸಾವು!

⚠️ Contents are protected on this website.