ಬೆಳ್ತಂಗಡಿ : ಮನೆಗೆ ಕಲ್ಲು ತೂರಿ, ಜೀವ ಬೆದರಿಕೆ ಆರೋಪ – ಪ್ರಕರಣ ದಾಖಲು !

ಬೆಳ್ತಂಗಡಿ, ಜು. 24 : ಮನೆಯೊಂದಕ್ಕೆ ಕಲ್ಲು ತೂರಿ, ಮಹಿಳೆಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಶಿಬಾಜೆ ಗ್ರಾಮದ ಅರಂಪಾದೆ ಎಂಬಲ್ಲಿ ನಡೆದಿದೆ. ಮಹಿಳೆ ನೀಡಿದ ದೂರಿನಂತೆ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಶಿಬಾಜೆ ಗ್ರಾಮದ ಅರಂಪಾದ ನಿವಾಸಿ ಎಲಿಯಮ್ಮ ತೋಮಸ್(60) ರವರ ಮಾಹಿತಿಯಂತೆ ಜುಲೈ 10 ರಂದು ರಾತ್ರಿ ಸುಮಾರು 9:50 ಗಂಟೆಗೆ ಆರೋಪಿಗಳಾದ ಮನೋಜ್ ಎನ್.ಕೆ. ಹಾಗೂ ತುಂಬತಾಜೆಯ ರಾಜು ಅವರು KA-01-MU-2405 ಸಂಖ್ಯೆಯ ಕಾರಿನಲ್ಲಿ ದೂರುದಾರರ ಮನೆ ಬಳಿ ಬಂದು ಮನೆಯ ಹಂಚಿನ ಮೇಲೆ ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಲ್ಲಿ ತಲವಾರು ಹಿಡಿದು ಮನೆಯೊಳಗೆ ನುಗ್ಗಿದ ಆರೋಪಿಗಳು, ಮೇಜಿನ ಮೇಲಿದ್ದ 2,900 ನಗದನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಇದನ್ನು ತಡೆಯಲು ಮುಂದಾದ ದೂರುದಾರರನ್ನು ತಳ್ಳಿಹಾಕಿ ಹಣವನ್ನು ಕೊಂಡೊಯ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ರಧಾನಿಯವರ ಪೋಸ್ಟ್‌ಗೆ ನಿರ್ಬಂಧ ವಿವಾದ – ಫೇಸ್‌ಬುಕ್ ವಿರುದ್ಧ ಬಿಜೆಪಿ ಆಕ್ರೋಶ !

⚠️ Contents are protected on this website.