ಬೆಳ್ತಂಗಡಿ, ಜು. 24 : ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಜು. 25ರಂದು ಉಚಿತ ಉದ್ಯೋಗ ಮಾರ್ಗದರ್ಶನ ಹಾಗೂ ಸಂದರ್ಶನ ತರಬೇತಿ ಕಾರ್ಯಗಾರವು ಬೆಳ್ತಂಗಡಿ ಶ್ರೀ ಮಂಜುನಾಥ ಕಲಾಭವನದಲ್ಲಿ ಬೆಳಗ್ಗೆ 9:30ಕ್ಕೆ ನಡೆಯಲಿದೆ.
ಉದ್ಯೋಗ ಪಡೆಯುವ ಮೊದಲ ಹೆಜ್ಜೆ ಇಲ್ಲಿಂದ ಆರಂಭಿಸಿ ಎಂಬ ಶೀರ್ಷಿಕೆ ಅಡಿಯಲ್ಲಿ ಉದ್ಯೋಗಾವಕಾಶಗಳ ಕುರಿತು ವಿಶೇಷ ಮಾರ್ಗದರ್ಶನದ ಕುರಿತು ವಿಶೇಷ ಕಾರ್ಯಾಗಾರ ನಡೆಯಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಶ್ರೀ ಎಂ. ವಿವೇಕ್ ಆಳ್ವ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಆಳ್ವಾಸ್ ಎಜುಕೇಶನ್ ಫೌಂಡೇಶನ್, ಮೂಡಬಿದ್ರಿ ವತಿಯಿಂದ ಆಗಸ್ಟ್ 7, 8 & 9 ರಂದು ನಡೆಯಲಿರುವ “ಆಳ್ವಾಸ್ ಪ್ರಗತಿ – 2026 ಬೃಹತ್ ಉದ್ಯೋಗ ಮೇಳ”ದ ಪೂರ್ವಭಾವಿಯಾಗಿ ಈ ಕಾರ್ಯಗಾರ ನಡೆಯಲಿದೆ.
ಕಾರ್ಯಾಗಾರದಲ್ಲಿ ಇಂಟರ್ವ್ಯೂ ಓರಿಯೆಂಟಷನ್ & ಟ್ರೈನಿಂಗ್, ರೆಸ್ಯೂಮ್ ತಯಾರಿಸುವ ಸರಿಯಾದ ವಿಧಾನ, HR ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸುವ ಕೌಶಲ್ಯ, ಗ್ರೂಪ್ ಡಿಸ್ಕಶನ್ ಹಾಗೂ ಕಮ್ಯುನಿಕೇಷನ್ ಸ್ಕಿಲ್ಸ್, ಉದ್ಯೋಗ ಪಡೆಯಲು ಅಗತ್ಯವಾದ ವ್ಯಕ್ತಿತ್ವ ವಿಕಸನದ ಕುರಿತು ಕಾರ್ಯಾಗಾರ ನಡೆಯಲಿದೆ.
ಈ ಕಾರ್ಯಾಗಾರದಲ್ಲಿ ಎಸ್ಎಸ್ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವೀಧರರು, ಡಿಗ್ರಿ ಅಂತಿಮ ವರ್ಷದ ವಿದ್ಯಾರ್ಥಿಗಳು, ಬೆಳ್ತಂಗಡಿ ತಾಲೂಕಿನ ಉದ್ಯೋಗಕಾಂಕ್ಷಿಗಳು ಭಾಗವಹಿಸಬಹುದು.
ಆಳ್ವಾಸ್ ಪ್ರಗತಿ ಉದ್ಯೋಗ ಮೇಳಕ್ಕೆ ನೋಂದಣಿ ಅವಕಾಶ
ಕಾರ್ಯಾಗಾರದಲ್ಲಿ 300+ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿರುವ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಕೊಳ್ಳುವ ಅವಕಾಶವಿದೆ.


