ಧ್ವನಿ ನ್ಯೂಸ್ ಚಾನೆಲ್ ನ ವಿಸ್ತೃತ ಭಾಗವಾಗಿ ಧ್ವನಿ ನ್ಯೂಸ್ ವೆಬ್ ಸೈಟ್ ಲೋಕಾರ್ಪಣೆ

Screenshot
Advertisement

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಯೂಟ್ಯೂಬ್ ಚಾನೆಲ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ “ಧ್ವನಿ ನ್ಯೂಸ್”ನ ವಿಸ್ತರಿಸಿದ ಭಾಗವಾಗಿ ಇಂದು www.dhwaninews.com ವೆಬ್ ಸೈಟ್ ಅನ್ನು ಲೋಕಾರ್ಪಣೆಗೊಳಿಸಿತು. ಉಜಿರೆ ಸಮೀಪದ ಕಾರಣಿಕ ಕ್ಷೇತ್ರವಾಗಿರುವ ಬೆಳಾಲು ಶ್ರೀ ಆರಿಕೋಡಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿ ಅವರು ವೆಬ್ ಸೈಟ್ ಅನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಲಾಯಿತು.

Advertisement

ಇನ್ನು, ಕನ್ಯಾಡಿಯ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯಾಶಿರ್ವಾದವನ್ನು ಪಡೆಯಲಾಯಿತು. ಈ ಸಂದರ್ಭದಲ್ಲಿ ಶುಭ ಹಾರೈಸಿದ ಸ್ವಾಮೀಜಿಗಳು, “ಮಾದ್ಯಮ ಸಂಸ್ಥೆಗಳು ಸಮಾಜವನ್ನು ಒಂದುಗೂಡಿಸುವ ಕಾರ್ಯಗಳನ್ನು ಮಾಡಬೇಕಿದೆ. ಸಮಾಜದ ಏಳಿಗೆಗಾಗಿ ಇಂದು ಧ್ವನಿ ನ್ಯೂಸ್ ವಿಸ್ತೃತ ಭಾಗವಾಗಿ ವೆಬ್ ಸೈಟ್ ಅನ್ನು ಲೋಕಾರ್ಪಣೆಗೊಳಿಸಿದ್ದು ಸಂತಸದ ವಿಚಾರ”ವೆಂದರು. ಈ ಸಂದರ್ಭದಲ್ಲಿ ಧ್ವನಿ ನ್ಯೂಸ್ ಸಂಪಾದಕರಾದ ಸುದೀಪ್ ಸಾಲ್ಯಾನ್ ಸೇರಿದಂತೆ, ಸಂಸ್ಥೆಯ ಸಿಬ್ಬಂದಿ ವರ್ಗದವರಾದ ಸಂತೋಷ್ ಬೇಂಕ್ಯ, ಮನೀಷ್, ಕಿರಣ್, ಸುದರ್ಶನ್, ಲೋಹಿತ್, ಯೋಗೀಶ್ ಉಪಸ್ಥಿತರಿದ್ದರು.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ