ಬೆಳ್ತಂಗಡಿ : ಯ೦ಗ್‌ ಬಾಯ್ಸ್ ಸವಣಾಲು ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಏ.18ರಂದು 2ನೇ ವರ್ಷದ “ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ”

ಬೆಳ್ತಂಗಡಿ, ಏ. 15 : ಯ೦ಗ್‌ ಬಾಯ್ಸ್ ಸವಣಾಲು, ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.) ಬೆಂಗಳೂರು, ದಕ್ಷಿಣ ಕನ್ನಡ ಅಮೆಚೂ‌ರ್ ಕಬಡ್ಡಿ ಅಸೋಸಿಯೇಶನ್ (ರಿ.), ಬೆಳ್ತಂಗಡಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.) ಇದರ ಸಹಭಾಗಿತ್ವದಲ್ಲಿ 2ನೇ ವರ್ಷದ ಪ್ರೌಢಶಾಲಾ ವಿಭಾಗದ ಬಾಲಕ/ಬಾಲಕಿಯರ ಆಹ್ವಾನಿತ ತಂಡಗಳ ಮತ್ತು 25 ವರ್ಷ ವಯೋಮಿತಿಯ ಪುರುಷರ “ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ-2026” ಏ.18 ಶನಿವಾರದಂದು ಸಂತೆಕಟ್ಟೆ ಸಮಾಜ ಮಂದಿರ (SDM Hall Belthangady) ದಲ್ಲಿ ನಡೆಯಲಿದೆ.

Advertisement

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಅಸ್ತ್ರ ಗ್ರೂಪ್ಸ್ ಸಿಇಒ ಶ್ರೀ ಲಂಚುಲಾಲ್ ಕೆ. ಎಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಗುರುನಾರಾಯಣ ಸೇವಾ ಸಂಘ (ರಿ.) ಬೆಳ್ತಂಗಡಿ ಇದರ ಅಧ್ಯಕ್ಷರಾದ ಶ್ರೀ ಜಯವಿಕ್ರಮ್ ಕಲ್ಲಾಪು, ಶ್ರೀ ಕಾಲಭೈರವೇಶ್ವರ ಸೌಹಾರ್ದ ಸಹಕಾರಿ, ಉಜಿರೆ ಇದರ ಅಧ್ಯಕ್ಷರಾದ ಶ್ರೀ ರಂಜನ್ ಜಿ. ಗೌಡ, ಸವಣಾಲು ಪ್ರಗತಿಪರ ಕೃಷಿಕರಾದ ಶ್ರೀ ಕೃಷ್ಣಪ್ಪ ಗೌಡ ದೇವಸ, ದ.ಕ ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕ  ಅಧ್ಯಕ್ಷರಾದ ಶ್ರೀ ಶೇಖರ ಕುಕ್ಕೇಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.

ಸಮಾರೋಪ ಸಮಾರಂಭದ ಉದ್ಘಾಟನೆಯನ್ನು  ಸ್ಪೀಕರ್ ಯು.ಟಿ. ಖಾದರ್ ಅವರು ನೆರವೇರಿಸಲಿದ್ದು, ಶಾಸಕ ಹರೀಶ್ ಪೂಂಜಾ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶ್ರೀ ಪ್ರತಾಪ್ ಸಿಂಹ ನಾಯಕ್ ವಿಧಾನ ಪರಿಷತ್ ಸದಸ್ಯರು, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಶ್ರೀ ರಕ್ಷಿತ್ ಶಿವರಾಂ, ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ರಾಕೇಶ್ ಮಲ್ಲಿ, ಶ್ರೀ ಸತೀಶ್ ಕಾಶಿಪಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು (ನಗರ), ಬೆಳ್ತಂಗಡಿ, ಶ್ರೀ ಮೋಹನ್ ಕುಮಾರ್ ಸಂಚಾಲಕರು, ಬದುಕು ಕಟ್ಟೋಣ ಬನ್ನಿ, ಶ್ರೀ ವೀರು ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.

ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನೆರವೇರಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ಈ ಕಬಡ್ಡಿ ಪಂದ್ಯಾಟ ಧ್ವನಿ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕೊರಂಜ ಮತ್ತು ಮಚ್ಚಿನ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ – ಶಾಸಕ ಹರೀಶ್ ಪೂಂಜಾ

⚠️ Contents are protected on this website.