ಉಡುಪಿ : ಸಾಸ್ತಾನ ಟೋಲ್‌ನಲ್ಲಿ ಯೋಧನಿಗೆ ಅವಮಾನ – ಕ್ಷಮೆ ಕೇಳಿದ ಸಿಬ್ಬಂದಿ

ಉಡುಪಿ, ಜ. 27 : ನಿವೃತ್ತ ಆರ್ಮಿ ಕಮಾಂಡರ್ ಶ್ಯಾಮರಾಜ ಅವರಿಗೆ ಟೋಲ್ ಗೇಟ್ ನಲ್ಲಿ ಅವಮಾನ ಮಾಡಿದ ಟೋಲ್ ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ.

ಜ.25ರ ರಾತ್ರಿ ಕೋಟ ಸಮೀಪದ ಸಾಸ್ತಾನದಲ್ಲಿ ಈ ಘಟನೆ ನಡೆದಿದ್ದು, ವಿನಾಯಿತಿ ನೀಡದೆ ಯೋಧನಿಗೆ ಅವಮಾನ ಮಾಡಲಾಗಿತ್ತು. ಈ ಬಗ್ಗೆ ಆರ್ಮಿ ಕಮಾಂಡರ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಗಣರಾಜ್ಯೋತ್ಸವ ದಿನವೇ ಯೋಧರಿಗೆ ಅವಮಾನ ಎಂದು ವಿಡಿಯೋ ವೈರಲ್ ಕೂಡಾ ಆಗಿತ್ತು. ದುರಂತವೊಂದರಲ್ಲಿ ಸೇನಾ ವಾಹನ 400 ಅಡಿಗೆ ಬಿದ್ದಾಗ ಪವಾಡ ಸದೃಶ್ಯವಾಗಿ ಆರ್ಮಿ ಕಮಾಂಡರ್ ಶ್ಯಾಮರಾಜ ಬದುಕುಳಿದಿದ್ದು, ವೀಲ್ ಚೇರ್ ಅವಲಂಬಿಸಿ ಜೀವನ ನಡೆಸುತ್ತಿದ್ದರು. ಆದರೆ ಟೋಲ್ ಸಿಬ್ಬಂದಿ ವಿನಾಯಿತಿ ನೀಡಿರಲಿಲ್ಲ.

ಈ ಬಗ್ಗೆ ಕ್ಷಮೆ ಯಾಚಿಸಿದ ಸಿಬ್ಬಂದಿಗಳು ಯೋಧರಿಗೆ ಟೋಲ್ ಗೇಟ್ ನಲ್ಲಿ ವಿನಾಯಿತಿ ಬಗ್ಗೆ ನನಗೆ ಸರಿಯಾದ ಮಾಹಿತಿ ಇರಲಿಲ್ಲ. ವಿನಾಯಿತಿ ಬಗ್ಗೆ ಮೇಲಾಧಿಕಾರಿಗಳಿಗೆ ವಿವರಗಳನ್ನು ಕಳುಹಿಸಿದ್ದೆ. ಅವರು ಖಚಿತಪಡಿಸುವುದು ತಡವಾದ ಕಾರಣ ಗೊಂದಲ ಉಂಟಾಯಿತು. ಸ್ಥಳದಲ್ಲೇ ಯೋಧರ ಬಳಿ ಕ್ಷಮೆ ಕೇಳಿದ್ದೇನೆ, ಈಗ ಮತ್ತೊಮ್ಮೆ ಕೇಳುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಬೆಳ್ತಂಗಡಿ : ನಾಳೆ ತಾಲೂಕಿನ ಅಂಗನವಾಡಿ, ಶಾಲಾ, ಪಿಯುಸಿ ಕಾಲೇಜುಗಳಿಗೆ ರಜೆ ಘೋಷಣೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

ತಾಲೂಕು, ಬೆಳ್ತಂಗಡಿ

ಮುಂಡಾಜೆ : ನಿವೃತ್ತ ಶಿಕ್ಷಕ ಶಂಕರ್ ತಾಮನ್ಕರ್ ರಿಂದ ಮಾದರಿ ಸೇವೆ – ತಂದೆ ದಿ. ನಾರಾಯಣ ತಾಮನ್ಕರ್ ಸವಿನೆನಪಿಗಾಗಿ ಅರ್ಹರಿಗೆ ಧನ ಸಹಾಯ

⚠️ Contents are protected on this website.