ಬೈಕ್ ಸವಾರನ ಮೇಲೆ ಕಾಡಾನೆ ದಾಳಿ – ಬೈಕ್ ಸವಾರ ಬಲಿ ! ರಾತ್ರಿ ಸಂಚರಿಸುವ ವಾಹನ ಸವಾರರೇ ಎಚ್ಚರ

ಚಾಮರಾಜನಗರ, ಡಿ. 18 : ಬೈಕ್ ಸವಾರನೋರ್ವನ ಮೇಲೆ ಕಾಡಾನೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವಜ್ಯಜೀವಿ ಧಾಮದ ವ್ಯಾಪ್ತಿಯ ಜಲ್ಲಿಪಾಳ್ಯದ ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ತಮಿಳುನಾಡಿನ ಮಾಕನಪಾಳ್ಯ ನಿವಾಸಿ ಶಿವಮೂರ್ತಿ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

Advertisement

ಶಿವಮೂರ್ತಿಯವರು ಹೂಗ್ಯ ಎಂಬಲ್ಲಿ ಕೂಲಿ ಕೆಲಸ ಮುಗಿಸಿ ಬುಧರಾತ್ರಿ ರಾತ್ರಿ ವೇಳೆ ಬೈಕಿನಲ್ಲಿ ಹನೂರು ತಾಲೂಕಿನ ಜಲ್ಲಿಪಾಳ್ಯದ ಮೂಲಕ ತಮಿಳುನಾಡಿನ ಮಾಕನಪಾಳ್ಯಕ್ಕೆ ತರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ಏಕಾಏಕಿ ದಾಳಿ ನಡೆಸಿ, ಕೊಂದು ಹಾಕಿದೆ ಎನ್ನಲಾಗಿದೆ. ದಾಳಿ ಬಳಿಕ ಇಡೀ ರಾತ್ರಿ ಕಾಡಾನೆ ಹಿಂಡು ಅಲ್ಲೇ ಬೀಡುಬಿಟ್ಟಿತ್ತು ಎನ್ನುವ ಆತಂಕಕಾರಿ ಮಾಹಿತಿ ಕೂಡಾ ಲಭ್ಯವಾಗಿದೆ.

ಇಂದು ಬೆಳಗ್ಗೆ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿರುವಾಗ ಪ್ರಕರಣ ಬೆಳಕಿಗೆ ಬಂದಿದ್ದು, ಜಲ್ಲಿಪಾಳ್ಯ ಕಳ್ಳಬೇಟೆ ಶಿಬಿರದಿಂದ ಎರಡು ಕಿಲೋ ಮೀಟ‌ರ್ ಹಾಗೂ ತಮಿಳುನಾಡು ಗಡಿಯಿಂದ 200 ಮೀಟ‌ರ್ ಅಂತರದಲ್ಲಿ ಘಟನೆ ನಡೆದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ರಾಜ್ಯ / ದೇಶ

ಫೆ.26ಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಭಾರತಕ್ಕೆ ಭೇಟಿ

ಕ್ರೀಡೆ, ತಾಲೂಕು, ಬೆಳ್ತಂಗಡಿ

ಬಂಗಾಡಿ : ಯುವ ಸಂಗಮ ಸೇವಾ ಸಮಿತಿ ಬೆಳ್ತಂಗಡಿ ವತಿಯಿಂದ “ಯುವ ಸಂಗಮ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾಟ

ಟಾಪ್ ಸುದ್ದಿಗಳು, ತಾಲೂಕು, ಪುತ್ತೂರು

ಪುತ್ತೂರು : ಏಕಾಏಕಿ ಅಸ್ವಸ್ಥಗೊಂಡ ಪ್ರಯಾಣಿಕ – ಬಸ್ ಅನ್ನು ಆಸ್ಪತ್ರೆಗೆ ಸಾಗಿಸಿ, ಮಾನವೀಯತೆ ಮೆರೆದ ಬಸ್ ಸಿಬ್ಬಂದಿ !

⚠️ Contents are protected on this website.