ಕೊಕ್ಕಡ, ಜ. 03 : ಗ್ರಾಮದ ಹಳ್ಳಿಂಗೇರಿ ನಿವಾಸಿ, ರಿಕ್ಷಾ ಚಾಲಕ ಅಜಯ್ ಕುಮಾರ್ (39) ಎಂಬವರು ಜ.2ರಂದು ಮಧ್ಯಾಹ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಕೊಕ್ಕಡ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ನೌಕರ ಕುಂಞಕಣ್ಣನ್ ಅವರ ಪುತ್ರರಾದ ಅಜಯ್ ಕುಮಾರ್ ಕೆಲವು ಸಮಯದ ಹಿಂದೆ ಸೌತಡ್ಕ ಅನ್ನಛತ್ರದಲ್ಲಿ ಕೆಲಸ ನಿರ್ವಹಿಸಿದ್ದರು.
ನಂತರ ಸ್ವಂತ ಆಟೋ ರಿಕ್ಷಾ ಖರೀದಿಸಿ ಬಾಡಿಗೆಗೆ ಓಡಾಟ ನಡೆಸುತ್ತಿದ್ದರು. ಜ.2ರಂದು ಮಧ್ಯಾಹ್ನ ಊಟದ ಬಳಿಕ ಮನೆಯಲ್ಲೇ ಇದ್ದ ಅಜಯ್ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಸಮಸ್ಯೆಗಳು ಎದುರಾದಾಗ ದುಡುಕಿ ನಿರ್ಧಾರ ಕೈಗೊಳ್ಳುವ ಬದಲು, ಸ್ನೇಹಿತರು ಅಥವಾ ಮನೆಯವರ ಬಳಿ ಸಮಸ್ಯೆಯ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ. ಅಗತ್ಯ ಬಿದ್ದರೆ ನುರಿತ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ.

