ಅಮೆರಿಕ – ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ – ತೆರೆದ ಹಾರ್ಮುಜ್‌ ಜಲಸಂಧಿ, ತೈಲ ಹೊತ್ತು ನಿಂತಿದ್ದ ಹಡಗುಗಳು ಪ್ರಯಾಣ ಶುರು !

Advertisement

ವಾಷಿಂಗ್ಟನ್‌, ಜೂ. 18 : ಮಧ್ಯಪ್ರಾಚ್ಯದಲ್ಲಿ ಯುದ್ಧ ಕೊನೆಗೊಳಿಸಲು ಕೆಲ ದಿನಗಳಿಂದ ನಡೆಯುತ್ತಿದ್ದ ಸಂಧಾನ ಮಾತುಕತೆ ಕೊನೆಗೂ ಯಶಸ್ಸು ಪಡೆದುಕೊಂಡಿದೆ.

Advertisement

ಅಮೆರಿಕ ಮತ್ತು ಇರಾನ್‌ ಮೂರು ತಿಂಗಳಿಗೂ ಹೆಚ್ಚು ಕಾಲ (108 ದಿನ) ನಡೆದ ಸಂಘರ್ಷ ಕೊನೆಗೊಳಿಸಲು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಚಿತಪಡಿಸಿದ್ದಾರೆ. ಈ ಒಪ್ಪಂದಕ್ಕೆ ಟ್ರಂಪ್ ಮತ್ತು ಇರಾನಿನ ಪ್ರತಿನಿಧಿಯಾಗಿ ಮಸೌದ್ ಪೆಜೆಶ್ಕಿಯಾನ್ ಡಿಜಿಟಲ್ ಮೂಲಕ ಸಹಿ ಹಾಕಿದ್ದಾರೆ

Advertisement

ಅಮೆರಿಕದ ಅಧಿಕಾರಿಯೊಬ್ಬರ ಪ್ರಕಾರ, ಅಧ್ಯಕ್ಷ ಟ್ರಂಪ್ ಫ್ರಾನ್ಸ್‌ನ ವರ್ಸೈಲ್ಸ್ ಅರಮನೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಜೊತೆಗಿನ ಔತಣ ಕೂಟದ ವೇಳೆ ಅಮೆರಿಕ-ಇರಾನ್ ಒಪ್ಪಂದದ ಮುದ್ರಿತ ಪ್ರತಿಗೆ ಅಧಿಕೃತವಾಗಿ ಸಹಿ ಹಾಕಿದರು. ಸಹಿ ಮಾಡಿದ ಒಪ್ಪಂದದ ಪ್ರತಿಗಳನ್ನ ಇರಾನ್ ಮತ್ತು ಮಧ್ಯಸ್ಥಿಕೆ ವಹಿಸುವ ದೇಶಗಳಿಗೆ ಕಳುಹಿಸಲಾಗಿದೆ.

ನಿಗದಿತ ಸಮಯದ ಪ್ರಕಾರ ನಾಳೆ (ಶುಕ್ರವಾರ) ಜಿನೇವಾದಲ್ಲಿ ಒಪ್ಪಂದಕ್ಕೆ ಸಹಿ ಮಾಡಲು ದಿನಾಂಕ ನಿಗದಿಪಡಿಸಲಾಗಿತ್ತು. ಆದ್ರೆ ಒಂದು ದಿನ ಮೊದಲೇ ಒಪ್ಪಂದಕ್ಕೆ ಸಹಿ ಮಾಡಿರುವುದು ಗಮನಾರ್ಹವಾಗಿದೆ.

ಇರಾನ್‌ ಕೂಡ ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ದೃಢಪಡಿಸಿದೆ. ಆದರೆ ಇದು ಅಮೆರಿಕದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದೆ. ಈಗ ಒಪ್ಪಂದದಲ್ಲಿ ಪ್ರಸ್ತಾಪಿಸಲಾದ ಅಂಶಗಳನ್ನ ಜಾರಿಗೆ ತರಬೇಕಿರುವುದು ನಿಜವಾದ ಅಗ್ನಿಪರೀಕ್ಷೆಯಾಗಿದೆ. ಒಪ್ಪಂದದ ಎಲ್ಲಾ ಅಂತಿಮ ನಿಯಮಗಳ ಮಾತುಕತೆ ನಡೆಸಲು ಇನ್ನೂ 60 ದಿನಗಳು ಬೇಕಾಗುತ್ತದೆ ಎಂದು ತಿಳಿಸಿದೆ.

ಒಟ್ಟಿನಲ್ಲಿ ಇರಾನ್‌ ಮತ್ತು ಅಮೆರಿಕ ಯುದ್ಧಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಮಾಡಿದ ಬೆನ್ನಲ್ಲೇ ಹಾರ್ಮುಜ್‌ ಜಲಸಂಧಿಯನ್ನ ತೆರೆಯಲಾಗಿದೆ. ಹಾಗಾಗಿ ಹಲವು ದಿನಗಳಿಂದ ತೈಲ ಹೊತ್ತು ನಿಂತಿದ್ದ ಹಡಗುಗಳು ಪ್ರಯಾಣ ಶುರು ಮಾಡಿವೆ ಎಂದು ವರದಿಗಳು ತಿಳಿಸಿವೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಬೆಳ್ತಂಗಡಿ : “ಎಸ್ ಯಾಂಡ್ ವಿ ಫ್ಯಾಮಿಲಿ ಬ್ಯೂಟಿ ಸಲೂನ್ ಮತ್ತು ಅಕಾಡೆಮಿ” ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವ ಸನ್ಮಾನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಮರಿಯಮ್ಮ ಕಾಂಗ್ರೆಸ್ ಸೇರ್ಪಡೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಚಿಕ್ಕಮಗಳೂರು : ಟಿಪ್ಪು ಸುಲ್ತಾನ್ ಬೃಹತ್ ಕಟೌಟ್‌ಗೆ “ನಾವು ಪಾಕಿಸ್ತಾನಿ ಮುಜಾಹಿದ್‌ಗಳು…” ಹಾಡು ಬಳಸಿ ರೀಲ್ಸ್ – ಪ್ರಕರಣ ದಾಖಲು

⚠️ Contents are protected on this website.