ವೇಣೂರು, ಅ. 24 : ಇತ್ತೀಚೆಗೆ ವೇಣೂರು ಸಮೀಪದ ಮೂಡುಕೋಡಿ ಪರಿಸರದಲ್ಲಿ ಸುರಿದ ಗಾಳಿ ಮಳೆಗೆ ಮಲ್ಲಿಕಾ ಅವರ ಮನೆಗೆ ಮರ ಬಿದ್ದು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿತ್ತು.
ವಿಷಯ ತಿಳಿದ ಕೂಡಲೇ ವೇಣೂರು ಪಂಚಾಯತ್ ವ್ಯಾಪ್ತಿಯ ರಾಜೇಶ್ ಪೂಜಾರಿ ಮೂಡುಕೋಡಿ ಅವರು ಶಾಸಕ ಹರೀಶ್ ಪೂಂಜ ಅವರ ಗಮನಕ್ಕೆ ತಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕ ಹರೀಶ್ ಪೂಂಜ ಅವರು ರಾಜೇಶ್ ಪೂಜಾರಿ ಅವರ ಮೂಲಕ ಬಿದ್ದ ಮರಗಳನ್ನು ತೆರವುಗೊಳಿಸಿ, ಹಾನಿಗೊಳಗಾದ ಮನೆಯನ್ನು ದುರಸ್ತಿಪಡಿಸಲು ಕ್ರಮ ಕೈಗೊಂಡರು.

ಅಲ್ಲದೆ, ಇದೇ ಪರಿಸರದಲ್ಲಿ ನಾಲೈದು ವಿದ್ಯುತ್ ಕಂಬಗಳು ಬಿದ್ದಿದ್ದು, ಅವುಗಳನ್ನು ಕೂಡ ಸರಿಪಡಿಸಲು ನೆರವಾದರು. ಸಂಕಷ್ಟದ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ನೆರವು ನೀಡಿದ ಶಾಸಕ ಹರೀಶ್ ಪೂಂಜ ಹಾಗೂ ರಾಜೇಶ್ ಪೂಜಾರಿ ಮೂಡುಕೋಡಿ ಅವರ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆರವು ನೀಡಿದ ಶಾಸಕರಿಗೆ ಮಲ್ಲಿಕಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

