ಹೊಸದಿಲ್ಲಿ, ಆ. 08 : ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಜನರಿಂದ ಬಂದ ದೇಣಿಗೆ ಹಣದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲವೆಂದು ಕೇಂದ್ರ ಸರಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಆದರೆ ರಾಮನ ದೇಗುಲಕ್ಕೆ ಬಂದ ಕಾಣಿಕೆಯಲ್ಲಿ ಮಾತ್ರ ಕಳ್ಳತನ ನಡೆದಿದೆ ಎನ್ನಲಾಗಿದೆ. ಸ್ವತಂತ್ರವಾಗಿ ಕೈಕೊಂಡ ಲೆಕ್ಕ ಪರಿ ಶೋಧನೆ ಯಲ್ಲಿ ಈ ವಿಚಾರ ಬಯಲಾಗಿದೆ.
ಮಂದಿರ ನಿರ್ಮಾಣಕ್ಕಾಗಿ ನೀಡಲಾದ 3,300 ಕೋ.ರೂ. ದೇಣಿಗೆ ಖರ್ಚಾದ ಲೆಕ್ಕಾಚಾರವನ್ನು ವಿ. ಶಂಕರ್ ಅಯ್ಯರ್ ಆ್ಯಂಡ್ ಕಂ. ಎಂಬ ಆಡಿಟಿಂಗ್ ಸಂಸ್ಥೆ ವತಿಯಿಂದ ಸ್ವತಂತ್ರವಾಗಿ ಪರಿಶೋಧನೆ ನಡೆಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಭೂಮಿ ಖರೀದಿಗಾಗಿ 400 ಕೋ. ರೂ., ದೇವಸ್ಥಾನ ನಿರ್ಮಾಣಕ್ಕಾಗಿ 1,800 ಕೋ. ರೂ.ಗಳನ್ನು ಖರ್ಚು ಮಾಡಲಾಗಿದೆ. ಜಾಗ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂಬ ಆರೋಪಗಳು ಸುಳ್ಳು. ಜಾಗ ಕೊಟ್ಟವರ ಅಧಿಕೃತ ಬ್ಯಾಂಕ್ ಖಾತೆಗೆ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧಿಕೃತ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ಉಲ್ಲೇಖೀಸಲಾಗಿದೆ.
ರಾಮಮಂದಿರ ಉದ್ಘಾಟನೆ ಬಳಿಕ ನಡೆದಿದೆ ಎನ್ನಲಾಗಿರುವ ಹುಂಡಿ ಹಣ ಸೋರಿಕೆಯ ತನಿಖೆ ಯನ್ನು ಪುನರ್‌ರಚಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಕ ನಡೆಸಲಾಗುತ್ತಿದೆ.



