ನವದೆಹಲಿ, ಆ. 08 : ಅರುಣಾಚಲ ಪ್ರದೇಶದ 27 ಸ್ಥಳಗಳನ್ನು ಸರ್ವೇ ಆಫ್ ಇಂಡಿಯಾದ ಅಧಿಕೃತ ನಕ್ಷೆಗಳಲ್ಲಿ ಔಪಚಾರಿಕವಾಗಿ ಗುರುತಿಸುವ ಮೂಲಕ ಭಾರತವು ಇಲ್ಲಿನ ಕೆಲವು ಸ್ಥಳಗಳ ಹೆಸರುಗಳನ್ನು ಪದೇ ಪದೆ ಬದಲಾಯಿಸಲು ಯತ್ನಿಸುತ್ತಿರುವ ಚೀನಾಗೆ ಶಾಕ್ ನೀಡಿದೆ.
ಬೀಜಿಂಗ್ ಝಂಗ್ನಾನ್ ಎಂದು ಉಲ್ಲೇಖಿಸುವ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾ ನಿಯತಕಾಲಿಕವಾಗಿ ಪ್ರಮಾಣೀಕೃತ ಹೆಸರುಗಳ ಪಟ್ಟಿಗಳನ್ನು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶ ಸರ್ಕಾರದೊಂದಿಗೆ ಸಮಾಲೋಚಿಸಿ ಈ ಪ್ರಕ್ರಿಯೆಯನ್ನು ನಡೆಸಲಾಗಿದೆ. ಈ ಸ್ಥಳಗಳ ನಿಖರವಾದ ಗುರುತಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾರ್ವಜನಿಕ ಜಾಗೃತಿಯನ್ನು ಸುಧಾರಿಸಲು ಉದ್ದೇಶಿಸಲಾಗಿದೆ
ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾ ಹೆಸರಿಡುತ್ತಿರುವ ಪ್ರಕ್ರಿಯೆ ವ್ಯರ್ಥ ಮತ್ತು ಅಸಂಬದ್ಧ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ಈ ವಾಸ್ತವವನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಚೀನಾಗೆ ಭಾರತ ತಿಳಿಸಿದೆ.



