ಬೀದ‌ರ್ : ಬಿಸಿಲಿನ ಝಳದಿಂದ ತಲೆತಿರುಗಿ ಕುಸಿದು ಬಿದ್ದು 20 ವರ್ಷದ ಯುವಕನೊಬ್ಬ ಸಾವು

ಬೀದ‌ರ್, ಏ. 20 : ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದ ರಸ್ತೆ ಬಳಿ ಬಿಸಿಲಿನ ತೀವ್ರತೆಗೆ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

Advertisement

ಉತ್ತರ ಪ್ರದೇಶದ ಮಿರ್ಜಾಪುರ್ ಪಲ್ಲಾ ಗ್ರಾಮದ ನಿವಾಸಿ ಮುಹಮ್ಮದ್ ಸಮೀರ್ (20) ಮೃತ ಯುವಕ ಎಂದು ತಿಳಿದು ಬಂದಿದೆ. ಕೆಲಸದ ನಿಮಿತ್ತ ಕೆಲ ದಿನಗಳ ಹಿಂದೆ ಕಮಲನಗರಕ್ಕೆ ಬಂದಿದ್ದನು ಎನ್ನಲಾಗಿದೆ.


ಎ.14ರಂದು ಬೆಳಿಗ್ಗೆ ತರಕಾರಿ ತರಲು ತೆರಳಿದ್ದ ಸಮೀರ್, ಮನೆಗೆ ವಾಪಸ್ಸಾಗುವ ವೇಳೆ ಬಿಸಿಲಿನ ಝಳದಿಂದ ತಲೆತಿರುಗಿ ಸಮೀಪದ ಮೆಕಾನಿಕ್ ಅಂಗಡಿಯಲ್ಲಿ ನೀರು ಕುಡಿದು ವಿಶ್ರಾಂತಿ ಪಡೆದಿದ್ದನು. ಬಳಿಕ ಮನೆಗೆ ತೆರಳುವಾಗ ಡಿಗ್ಗಿ ಗ್ರಾಮದ ರಸ್ತೆ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಬಿಸಿಲಿನ ಪರಿಣಾಮವೇ ಸಾವಿಗೆ ಕಾರಣ ಎಂದು ಮೃತನ ತಂದೆ ಲಯಿಕ್ ಅಹ್ಮದ್ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಮಲನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಮಡಿಕೇರಿ : ನಾಪತ್ತೆಯಾಗಿದ್ದ ಹಿಂದೂ ತಾಯಿ, ಮಗು – ಕೇರಳದ ಮದರಸವೊಂದರಲ್ಲಿ ಪತ್ತೆ ! ಲವ್ ಜಿಹಾದ್‌ ಆರೋಪ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಾಯ್ ಫ್ರೆಂಡ್ ಜೊತೆ ಸಲುಗೆಯಿಂದಿದ್ದಳು ಎಂದು ಸ್ನೇಹಿತೆಯ ಖಾಸಗಿ ಫೊಟೋ ವೈರಲ್ – ಶ್ವೇತಾ ಅರೆಸ್ಟ್ !

ಟಾಪ್ ಸುದ್ದಿಗಳು, ತಾಲೂಕು, ಪುತ್ತೂರು

ಪುತ್ತೂರು : ಶಿರಾಡಿ ಘಾಟಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೇ ಹಳಿ ಅಭಿವೃದ್ಧಿಗೆ ಜಂಟಿ ಸಮೀಕ್ಷೆ – ಕ್ಯಾ. ಚೌಟ

⚠️ Contents are protected on this website.