ಬೆಂಗಳೂರು : ಬ್ಯಾಗ್ ನಲ್ಲಿ ಬುರುಡೆ ಇದ್ದಿದ್ದೇ ಗೊತ್ತಿರಲಿಲ್ಲ – ದೆಹಲಿಯಲ್ಲಿದ್ದಾಗ ಕೆಟ್ಟ ಕನಸೊಂದು ಬಿದ್ದಿದ್ದು ನಿಜ : ಜಯಂತ್

ಬೆಂಗಳೂರು, ಡಿ. 30 : ಧರ್ಮಸ್ಥಳದ ವಿರುದ್ಧ ಮಾಡಲಾಗಿರುವ ಬುರುಡೆ ಷಡ್ಯಂತ್ರ ಪ್ರಕರಣಕ್ಕೀಗ ಮತ್ತೊಂದು ತಿರುವು ಸಿಕ್ಕಂತಾಗಿದೆ. ಈ ಹಿಂದೆ ಹಲವಾರು ಹೇಳಿಕೆಗಳನ್ನು ನೀಡಿರುವ ಆರೋಪಿ ಜಯಂತ್ ಟಿ ಇದೀಗ ಎಸ್ ಐಟಿಯಲ್ಲಿ ಉಲ್ಲೇಖಿಸಿರುವ ಹೇಳಿಕೆಗಳು ಸತ್ಯಕ್ಕೆ ದೂರವಾದ ವಿಚಾರ ಎಂದಿದ್ದಾರೆ. ದೆಹಲಿಗೆ ನಾನು ಬುರುಡೆಯೊಂದಿಗೆ ಹೋಗಿದ್ದೆನೆಂದು ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ ಐಟಿ) ಮುಂದೆ ಹೇಳಿರುವುದಾಗಿ ಪ್ರಕರಣದ ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಿರುವುದು ಹಾಗೂ ಆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾದ ವಿಚಾರ” ಎಂದು ಧರ್ಮಸ್ಥಳ ಪ್ರಕರಣ ಆರೋಪಿಯಾದ ಜಯಂತ್ ಅವರು ತಿಳಿಸಿದ್ದಾರೆ.

Advertisement

ಡಿ. 29ರಂದು ಮಾಧ್ಯಮಗಳಲ್ಲಿ ಕೆಲವು ಪ್ರಕಟಣೆಗಳು ಹೊರಬಂದಿದ್ದು , ಅದರಲ್ಲಿ ಎಸ್ಐಟಿಯ ಪ್ರಾಥಮಿಕ ವರದಿಯಲ್ಲಿ ಜಯಂತ್ ಅವರು ಬುರುಡೆಯೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾಗಿ ಎಸ್ ಐಟಿ ಮುಂದೆ ಹೇಳಿಕೆ ನೀಡಿರುವುದಾಗಿ ವರದಿಯಾಗಿತ್ತು. ಆ ವರದಿಗಳನ್ನು ಅವರು ಅಲ್ಲಗಲೆದಿದ್ದಾರೆ. ಜೊತೆಗೆ “ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿ ವರದಿಯಲ್ಲಿ ಉಲ್ಲೇಖಿಸಲಾಗಿರುವ, ನನ್ನದೆಂದು ಹೇಳಲಾಗಿರುವ ಕೆಲವು ವರದಿಗಳು ಅಸಲಿಗೆ ನಾನು ಹೇಳಿದ್ದಲ್ಲವೇ ಅಲ್ಲ. ಅದನ್ನು ಎಸ್ಐಟಿಯವರೇ ಬರೆದುಕೊಂಡಿರುವ ಹೇಳಿಕೆಗಳು” ಎಂದು ಆರೋಪಿಸಿದ್ದಾರೆ.

ನನಗೆ ಇತ್ತೀಚೆಗೆ ಎಸ್ ಐಟಿ ವತಿಯಿಂದ ಆರೋಪ ಪಟ್ಟಿಯ ದಾಖಲೆಯನ್ನು ನೀಡಲಾಗಿದೆ. ಮೊದಲು ನನಗೆ 4,50 ಪುಟಗಳಷ್ಟು ವರದಿಯನ್ನು ನೀಡಬೇಕು ಎಂದಿತ್ತು. ಆದರೆ, 1100 ವರದಿಯನ್ನು ನನಗೆ ನೀಡಲಾಗಿದೆ. ಅದನ್ನು ಓದಿದಾದ ನನಗೆ ಅಚ್ಚರಿಯಾಯಿತು. ನಾನು ನೀಡದ ಹೇಳಿಕೆಗಳನ್ನು ಅದರಲ್ಲಿ ಸೇರಿಸಲಾಗಿದೆ. ಸುಳ್ಳು ಹೇಳಿಕೆಗಳನ್ನು ಪಡೆದು ಅವರಷ್ಟಕ್ಕೇ ಬರೆದುಕೊಂಡಿದ್ದಾರೆ ಎಂದು ಈ ಹಿಂದೆಯೇ ನಾನು ನ್ಯಾಯಾಲಯಕ್ಕೆ ದೂರು ಕೊಟ್ಟಿದ್ದೆ. ಈಗ ಅದು ಖಚಿತವಾಗಿದೆ” ಎಂದು ಹೇಳಿದ್ದಾರೆ.

ಕೆಲವು ಮಾಧ್ಯಮ ವರದಿಗಳಲ್ಲಿ ಪ್ರಕಟವಾದಂತೆ, ತಾವು ಮಾನವ ತಲೆಬುರುಡೆಯೊಂದಿಗೆ ಪ್ರಯಾಣಿಸಿದ್ದು ನನಗೆ ತಿಳಿದಿರಲಿಲ್ಲ ಎಂದು ಜಯಂತ್ ಹೇಳಿದ್ದಾರೆ. ನನ್ನ ಕೈಗೆ ಒಂದು ಬ್ಯಾಗ್ ನೀಡಲಾಗಿತ್ತು. ಆ ಬ್ಯಾಗಿನೊಂದಿಗೆ ನೀವು ದೆಹಲಿಗೆ ಪ್ರಯಾಣಿಸಬೇಕು. ಅಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗಬೇಕು ಎಂದು ಹೇಳಲಾಗಿತ್ತು. ಅದರಂತೆಯೇ ನಾನು ದೆಹಲಿಗೆ ಆ ಬ್ಯಾಗಿನೊಂದಿಗೆ ಪ್ರಯಾಣಿಸಿದ್ದೆ. ಆದರೆ, ಅದರಲ್ಲಿ ಏನಿದೆ ಎಂಬುದು ನನಗೆ ನಿಜವಾಗಿಯೂ ಗೊತ್ತಿರಲಿಲ್ಲ ಎಂದು ಜಯಂತ್ ತಿಳಿಸಿದ್ದಾರೆ.

ಕನಸು ಬಿದ್ದಿದ್ದು ನಿಜ

ಇನ್ನು, ದೆಹಲಿಯಲ್ಲಿ ಲಾಡ್ಜ್ ಒಂದರಲ್ಲಿ ಮಲಗಿದ್ದಾಗ ನಿಮಗೆ ಕೆಟ್ಟ ಕನಸು ಬಿದ್ದಿದ್ದು ಹಾಗೂ ತಮ್ಮ ಮಂಚದ ಕೆಳಗೆ ಇರುವ ತಲೆಬುರುಡೆಯನ್ನು ಪಕ್ಕದ ಕೊಠಡಿಯಲ್ಲಿ ತಂಗಿದ್ದ ಸುಜಾತಾ ಭಟ್ (ಇವರೂ ಈ ಪ್ರಕರಣದ ಆರೋಪಿ) ಅವರ ರೂಮಿಗೆ ಸ್ಥಳಾಂತರಿಸಿದ ನಂತರ ನಿದ್ರೆ ಮಾಡಿದ್ದು ನಿಜವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಕನಸು ಬಿದ್ದಿದ್ದು ನಿಜ. ಆದರೆ, ಬ್ಯಾಗಿನಲ್ಲಿ ಬುರುಡೆ ಇದ್ದಿದ್ದೇ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಬಹುಶಃ ನಾನು ಧರ್ಮಸ್ಥಳದಲ್ಲಿ ನೊಂದವರ ಆತ್ಮಗಳಿಗೆ ನ್ಯಾಯ ಒದಗಿಸುವ ಸಲುವಾಗಿ ನಾನು ಹೋರಾಡುತ್ತಿದ್ದೇನೆ. ಆ ಕಾರಣಕ್ಕಾಗಿ ಆ ಆತ್ಮಗಳು ಬಂದು ನನ್ನನ್ನು ಸತ್ಯದ ಕಡೆಗೆ ಹೋರಾಡುವಂತೆ ಪ್ರೇರೇಪಿಸಿರಬಹುದು. ಆದರೆ, ಆ ಕನಸುಗಳಿಂದ ನಾನು ಬೆಚ್ಚಿದ್ದಂತೂ ಸತ್ಯ ಎಂದಿದ್ದಾರೆ. ಇದೇ ವೇಳೆ, ಅದು ಯಾವ ಕನಸು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಆ ಕನಸಿನ ಬಗ್ಗೆ ಈಗಲೇ ಹೇಳುವುದು ಸರಿಯಲ್ಲ. ನಾನು ಮುಂದೊಂದು ದಿನ ಆ ಕನಸಿನ ಬಗ್ಗೆ ವಿವರವಾಗಿ ಹೇಳುತ್ತೇನೆ” ಎಂದು ಅವರು ಹೇಳಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ರಾಜ್ಯ / ದೇಶ

ಫೆ.26ಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಭಾರತಕ್ಕೆ ಭೇಟಿ

ಕ್ರೀಡೆ, ತಾಲೂಕು, ಬೆಳ್ತಂಗಡಿ

ಬಂಗಾಡಿ : ಯುವ ಸಂಗಮ ಸೇವಾ ಸಮಿತಿ ಬೆಳ್ತಂಗಡಿ ವತಿಯಿಂದ “ಯುವ ಸಂಗಮ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾಟ

ಟಾಪ್ ಸುದ್ದಿಗಳು, ತಾಲೂಕು, ಪುತ್ತೂರು

ಪುತ್ತೂರು : ಏಕಾಏಕಿ ಅಸ್ವಸ್ಥಗೊಂಡ ಪ್ರಯಾಣಿಕ – ಬಸ್ ಅನ್ನು ಆಸ್ಪತ್ರೆಗೆ ಸಾಗಿಸಿ, ಮಾನವೀಯತೆ ಮೆರೆದ ಬಸ್ ಸಿಬ್ಬಂದಿ !

⚠️ Contents are protected on this website.