ಮೃತದೇಹ ಕೊಳೆಯದಂತೆ ಬಳಸುವ ರಾಸಾಯನಿಕ ಮೀನಿಗೆ ಬಳಕೆ – ಕೇರಳ ಆರೋಗ್ಯ ಇಲಾಖೆ ಎಚ್ಚರಿಕೆ !

ಪೆರ್ಮುದೆ, ಜೂ. 17 : ಮೀನುಗಾರಿಕಾ ನಿಷೇಧ ಆರಂಭಗೊಂಡರೂ ಮಾರುಕಟ್ಟೆಯಲ್ಲಿ ಮೀನುಗಳು ಲಭ್ಯವಿದೆ. ಆದರೆ ಬಹಳ ದುಬಾರಿಯಾದ ಹಳಸಿದ ಮೀನುಗಳು ಮಾರುಕಟ್ಟೆಗೆ ಬರುತ್ತಿವೆ. ಮೇಲ್ನೋಟಕ್ಕೆ ತಾಜಾ ಮೀನುಗಳಂತೆ ಕಾಣುವ ಇವುಗಳಲ್ಲಿ ಹೆಚ್ಚಿನವು ರಾಸಾಯನಿಕ ಪದಾರ್ಥ ಬೆರೆಸಿದ ಮೀನುಗಳಾಗಿವೆ. ಈ ಹಿನ್ನೆಲೆಯಲ್ಲಿ ಮೀನು ಪ್ರಿಯರಿಗೆ ಕೇರಳ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

Advertisement

ಕೆಲವು ವರ್ಷಗಳ ಹಿಂದೆ ಮೀನುಗಾರಿಕೆ ನಿಷೇಧ ಸಂದರ್ಭ ಆಹಾರ ಭದ್ರತಾ ವಿಭಾಗವು ಕೇರಳ ರಾಜ್ಯಾದ್ಯಂತ ವ್ಯಾಪಕ ತಪಾಸಣೆ ನಡೆಸಿತ್ತು. ಈ ಸಂದರ್ಭ ರಾಸಾಯನಿಕ ವಸ್ತುಗಳನ್ನು ಬೆರೆಸಿದ ಹಳಸಿದ ಮೀನುಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿ ನಾಶಪಡಿಸಲಾಗಿತ್ತು.

ರಾಸಯನಿಕ ಬಳಸಿ ಹಳಸಿದ ಮೀನುಗಳನ್ನು ಫ್ರೆಶ್‌ ?

ಕಣ್ಣುಗಳು ಕೆಂಪಾಗಿ ಬಣ್ಣ ಮಾಸಿದ ಮೀನುಗಳು ಹಳಸಿದ ಮೀನುಗಳು ಎಂದು ಆರೋಗ್ಯ ವಿಭಾಗ ಅಧಿಕಾರಿಗಳು ಹೇಳುತ್ತಾರೆ. ಸೂಕ್ಷ್ಮವಾಗಿ ಗಮನಿಸಿದರೆ ಇವು ಹಳಸಿದ ಮೀನುಗಳೆಂದು ಸುಲಭವಾಗಿ ಗುರುತಿಸಬಹುದಾಗಿದೆ. ಫೋರ್ಮಾಲಿನ್‌, ಅಮೋನಿಯಂ ರಾಸಾಯನಿಕ ಪದಾರ್ಥಗಳನ್ನು ಪ್ರಧಾನವಾಗಿ ಹಳಸಿದ ಮೀನುಗಳಲ್ಲಿ ಬಳಸಲಾಗುತ್ತದೆ.

ಫೋರ್ಮಾಲಿನ್‌ಗಳನ್ನು ಶವಾಗಾರಗಳಲ್ಲಿ ಮೃತದೇಹಗಳು ಕೊಳೆಯದಂತೆ ದಾಸ್ತಾನಿಡಲು ಬಳಸುತ್ತಾರೆ. ಇದನ್ನು ಬಳಕೆ ಮಾಡಿದರೆ ಮೀನುಗಳು ಹೆಚ್ಚು ದಿನಗಳ ಕಾಲ ಹಾಳಾಗದಂತೆ ಇರುತ್ತವೆ. ಆದರೆ ಫೋರ್ಮಾಲಿನ್‌ ಬೆರೆತ ಮೀನು ಸೇವಿಸುವುದು ಮನುಷ್ಯರಲ್ಲಿ ಕಿಡ್ನಿ ರೋಗದ ಸಮಸ್ಯೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಮೀನಲ್ಲಿ ಇಡುವ ಐಸ್‌ ಬೇಗನೇ ನೀರಾಗದಿರಲು ಅಮೋನಿಯಂ ಉಪಯೋಗಿಸಲಾಗುತ್ತದೆ. ಇದು ಮೀನಿಗೆ ತಾಜಾತನ ಹಾಗೂ ಹೊಸದರಂತೆ ಕಾಣಲು ನೆರವಾಗುತ್ತದೆ. ಅಮೋನಿಯಂ ಬೆರೆತ ಮೀನು ಸೇವಿಸುವುದು ಮಾನವನ ಕರುಳಿಗೆ ಹಾನಿಯುಂಟಾಗಲು ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಹಳಸಿದ ಮೀನುಗಳು ದುಬಾರಿ

ಕರ್ನಾಟಕ, ತಮಿಳುನಾಡು ರಾಜ್ಯಗಳಿಂದ ಆವಕವಾಗುವ ಇಂತಹ ಹಳಸಿದ ಮೀನುಗಳಿಗೆ ಮಾರುಕಟ್ಟೆಗಳಲ್ಲಿ ಭಾರೀ ಬೆಲೆ ಇದೆ. ರಾಸಾಯನಿಕ ಪದಾರ್ಥಗಳನ್ನು ಬೆರೆಸಿದ ದೊಡ್ಡ ಬೂತಾಯಿಗೆ ಕೆಜಿಗೆ 400 ರೂ., ಸಣ್ಣ ಬೂತಾಯಿಗೆ 200 ರೂ., ಐಸ್‌ ಬೆರೆಸಿದ ಸಣ್ಣ ಸಿಗಡಿಗೆ 300 ರೂ. ಇದೆ. ಹಳೆಯ ಮೀನುಗಳೆಂದು ತಿಳಿದಿದ್ದರೂ ಖರೀದಿದಾರರಿಗೆ ಕೊರತೆ ಇಲ್ಲದಿರುವುದರಿಂದ ಮಾರುಕಟ್ಟೆಗೆ ಇವು ಧಾರಾಳವಾಗಿ ಪ್ರವೇಶ ಪಡೆಯುತ್ತಿವೆ.

ಅಗ್ಗದ ಬೆಲೆಗೆ ಧಾರಾಳ ಲಭಿಸುತ್ತಿದ್ದ ಬೂತಾಯಿಗೆ ಈಗ ಕೆಜಿಗೆ 400 ರೂ. ಇದೆ. ಮೀನುಗಾರಿಕಾ ನಿಷೇಧ ಆರಂಭಗೊಂಡಂದಿನಿಂದ ಬೂತಾಯಿಗೆ 400 ರೂ. ಆಗಿದೆ. ಮೀನುಗಾರಿಕಾ ನಿಷೇಧ ಆರಂಭಗೊಳ್ಳುವ ಮೊದಲು ಬೂತಾಯಿ ದರ ಕೆಜಿಗೆ 360 ರೂ. ಇತ್ತು. ಇತ್ತೀಚೆಗಿನವರೆಗೆ ಕೆಜಿಗೆ 200 ರೂ.ಗೆ ಲಭಿಸುತ್ತಿದ್ದ ಬೂತಾಯಿಗೆ ಇಷ್ಟೊಂದು ಬೆಲೆ ಏರಿಕೆಯಾಗಿದೆ. ಜನಸಾಮಾನ್ಯರ ಇಷ್ಟದ ಬಂಗುಡೆ ಮೀನಿಗೆ ಕೂಡ ಕೆಜಿಗೆ 400 ರೂ. ಇದೆ.

ಮೀನುಗಾರಿಕೆ ನಿಷೇಧ ಹಾಗೂ ಪ್ರತಿಕೂಲ ಹವಾಮಾನ ಕಾರಣ ಮೀನುಗಾರಿಕೆ ನಡೆಸಲು ನಿಷೇಧ ಇರುವುದರಿಂದ ಬೆಲೆ ಏರಿಕೆಯಾಗಿದೆ. ಪಿಂಕ್‌ ಪೆರ್ಚ್(ಮದಿಮಾಲ್‌) 400 ರೂ., ಕರಿ ಮೀನು 400 ರೂ., ನಂಗ್‌ 400 ರೂ., ಕೊಲ್ಲತ್ತರು ಮೀನುಗಳಿಗೆ ಕೆಜಿಗೆ 300 ರೂ. ಇದೆ. ಹೊಳೆ ಮೀನುಗಳಿಗೆ ಕೆಜಿಗೆ 600 ರೂ.ನಿಂದ 850 ರೂ.ವರೆಗೆ ಇದೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಾಯ್ ಫ್ರೆಂಡ್ ಜೊತೆ ಸಲುಗೆಯಿಂದಿದ್ದಳು ಎಂದು ಸ್ನೇಹಿತೆಯ ಖಾಸಗಿ ಫೊಟೋ ವೈರಲ್ – ಶ್ವೇತಾ ಅರೆಸ್ಟ್ !

ಟಾಪ್ ಸುದ್ದಿಗಳು, ತಾಲೂಕು, ಪುತ್ತೂರು

ಪುತ್ತೂರು : ಶಿರಾಡಿ ಘಾಟಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೇ ಹಳಿ ಅಭಿವೃದ್ಧಿಗೆ ಜಂಟಿ ಸಮೀಕ್ಷೆ – ಕ್ಯಾ. ಚೌಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೊಳಕೆಯಲ್ಲಿ ಕಾರು – ಸ್ಕೂಟರ್ ಡಿಕ್ಕಿ –
ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು

⚠️ Contents are protected on this website.