ರೋಟಿ ತಯಾರಿಸುವಾಗ ಅದಕ್ಕೆ ಉಗುಳಿದ ವೀಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಜಾವೇದ್ ಅನ್ಸಾರಿಯ ಬಂಧನ

ಗಾಜಿಯಾಬಾದ್‌, ಜ. 09 : ರೆಸ್ಟೋರೆಂಟ್ ಕೆಲಸಗಾರನೊಬ್ಬ ರೋಟಿ ತಯಾರಿಸುವಾಗ ಅದರ ಮೇಲೆ ಉಗುಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಆರೋಪಿ ಕೆಲಸಗಾರ ಜಾವೇದ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

Advertisement

‘ಚಿಕನ್ ಪಾಯಿಂಟ್’ ಎಂಬ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ವೈರಲ್ ಆಗಿರುವ ವಿಡಿಯೋದಲ್ಲಿ, ಕೆಲಸಗಾರನೊಬ್ಬ ತಂದೂರಿನಲ್ಲಿ ರೋಟಿ ತಯಾರಿಸಿ ನಂತರ ಅದರ ಮೇಲೆ ಉಗುಳುತ್ತಿರುವುದನ್ನು ಕಾಣಬಹುದು. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಕೃತ್ಯವನ್ನು ರೆಕಾರ್ಡ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತವಾಗಿ ಹರಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಎಸಿಪಿ ಸೂರ್ಯಬಲಿ ಮೌರ್ಯ ಮಾತನಾಡಿ, ಜನವರಿ 8 ರಂದು ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಧಮಾನಪುರಂ ಔಟ್‌ಪೋಸ್ಟ್‌ನಲ್ಲಿ ಅಂಗಡಿಯ ಕೆಲಸಗಾರನೊಬ್ಬ ರೋಟಿ ತಯಾರಿಸುವಾಗ ಉಗುಳುತ್ತಿರುವ ವೀಡಿಯೊ ಗಮನಕ್ಕೆ ಬಂದಿದ್ದು ವೀಡಿಯೊವನ್ನು ಪರಿಶೀಲಿಸಿದ ನಂತರ, ಆರೋಪಗಳು ಪ್ರಾಥಮಿಕವಾಗಿ ನಿಜವೆಂದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ತತ್ ಕ್ಷಣ ಆರೋಪಿ ಕೆಲಸಗಾರ ಜಾವೇದ್ ಅನ್ಸಾರಿಯನ್ನು ಬಂಧಿಸಿದ್ದಾರೆ. ಅಧಿಕಾರಿಗಳು ಆತನ ವಿರುದ್ಧ ಸಂಬಂಧಿತ ಕಾನೂನು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಅಗತ್ಯ ಕಾನೂನು ಕ್ರಮಗಳನ್ನು ಪ್ರಾರಂಭಿಸಿದ್ದಾರೆ ಎಂದು ಎಸಿಪಿ ತಿಳಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಬೆಳ್ತಂಗಡಿ : ನಾಳೆ ತಾಲೂಕಿನ ಅಂಗನವಾಡಿ, ಶಾಲಾ, ಪಿಯುಸಿ ಕಾಲೇಜುಗಳಿಗೆ ರಜೆ ಘೋಷಣೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

ತಾಲೂಕು, ಬೆಳ್ತಂಗಡಿ

ಮುಂಡಾಜೆ : ನಿವೃತ್ತ ಶಿಕ್ಷಕ ಶಂಕರ್ ತಾಮನ್ಕರ್ ರಿಂದ ಮಾದರಿ ಸೇವೆ – ತಂದೆ ದಿ. ನಾರಾಯಣ ತಾಮನ್ಕರ್ ಸವಿನೆನಪಿಗಾಗಿ ಅರ್ಹರಿಗೆ ಧನ ಸಹಾಯ

⚠️ Contents are protected on this website.