ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾರಿಂದ ಅರ್ಹ ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ  ವಿತರಣೆ – ಲಂಚ ನೀಡಿದ್ದರೆ ಹಣ ವಾಪಸ್ ಕೊಡುತ್ತೇನೆಂದ ಶಾಸಕರು !

ಬೆಳ್ತಂಗಡಿ, ಜೂ. 4 :  ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಸಭೆ ಜೂ. 4 ರಂದು ನಡೆಯಿತು. ಸಭೆಯಲ್ಲಿ ಒಟ್ಟು 10  ಅರ್ಜಿಗಳ  ವಿಲೇಗೆ  ಪರಿಶೀಲನೆ ನಡೆಸಲಾಯಿತು.

Advertisement

ಈ ಸಂಧರ್ಭ ಶಾಸಕರು ಅರ್ಹ 28  ಮಂದಿ  ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ ವಿತರಿಸಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಅಯ್ಯೂಬ್ ಬಿ. ಕೆ., ವಿನುತಾ ರಜತ್ ಗೌಡ ಉಜಿರೆ ಹಾಗೂ ಶ್ರೀಧರ್ ಕಳೆಂಜ ಸಮಿತಿ ಕಾರ್ಯದರ್ಶಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ಉಪಸ್ಥಿತರಿದ್ದರು.

ಲಂಚ ನೀಡಬೇಡಿ :

ಸಭೆಯಲ್ಲಿ ಅರ್ಜಿದಾರರ ಬಳಿ ಶಾಸಕ ಹರೀಶ್ ಪೂಂಜರು ಕಡತ ವಿಲೇಗೆ ಅಧಿಕಾರಿಗಳಿಗೆ ಮಧ್ಯವರ್ತಿಗಳಿಗೆ ಹಣ ನೀಡಿದ್ದೀರಾ ಎಂದು ಪ್ರತಿಯೊಬ್ಬ ಅರ್ಜಿದಾರರ ಬಳಿ ಕೇಳಿದರು. ಹಣ ಪಾವತಿಸಿದ್ದಲ್ಲಿ ಆ ಮೊತ್ತವನ್ನು ವಾಪಸು ತೆಗಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಕ್ಷೇತ್ರ ಸಮಿತಿ ಬೆಳ್ತಂಗಡಿ ವತಿಯಿಂದ “ಆಟಿದ ಕಮ್ಮೆನ ಬೊಕ್ಕಗೊಬ್ಬು”

ಟಾಪ್ ಸುದ್ದಿಗಳು, ವಿದೇಶ

ಟೋಕಿಯೋ : ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಭೀಕರ ಸುನಾಮಿ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಖಾಸಗಿ ಬಸ್ – ಬೈಕ್ ಮಧ್ಯೆ ಅಪಘಾತ; ಪತಿ ಸಾವು, ಪತ್ನಿಗೆ ಗಂಭೀರ

⚠️ Contents are protected on this website.