ವಾಷಿಂಗ್ಟನ್ : ಯುದ್ಧ ಮುಂದುವರಿಯುವುದಾದರೆ ಇರಾನ್ ಬಳಿ ಇನ್ನೂ ಸಾವಿರಾರು ಕ್ಷಿಪಣಿಗಳು ಮತ್ತು ಕಾಮಿಕೇಜ್ ಡ್ರೋನ್‌ಗಳ ದಾಸ್ತಾನು ಇದೆ !

ವಾಷಿಂಗ್ಟನ್, ಏ. 22 : ಅಮೆರಿಕ ಮತ್ತು ಇಸ್ರೇಲ್ ಪಡೆಗಳು ವಾರಗಳ ಕಾಲ ತನ್ನ ಭೂಪ್ರದೇಶದ ಮೇಲೆ ತೀವ್ರವಾದ ವೈಮಾನಿಕ ದಾಳಿಗಳನ್ನು ನಡೆಸುತ್ತಿದ್ದರೂ, ಇರಾನ್ ಬಳಿ ಇನ್ನೂ ಸಾವಿರಾರು ಕ್ಷಿಪಣಿಗಳು ಮತ್ತು ಕಾಮಿಕೇಜ್ ಡ್ರೋನ್‌ಗಳ ದಾಸ್ತಾನು ಇದ್ದಿರುವುದಾಗಿ ಹೊಸ ಗುಪ್ತಚರ ದಳ ವರದಿ ತಿಳಿಸಿದ್ದು, ಇದು ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಲ್ಲಿ ಟ್ರಂಪ್ ಆಡಳಿತದ ವಿಜಯ ಎಂಬ ಘೋಷಣೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.

Advertisement

ಅದಕ್ಕಿಂತ ಅಚ್ಚರಿಯ ಸಂಗತಿ ಏನೆಂದರೆ ಕದನ ವಿರಾಮ ಘೋಷಣೆಗೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ರಕ್ಷಣಾ ಸಚಿವ ಪೀಟ್ ಹೆನ್ಸೆಥ್, ಅಮೆರಿಕ, ಇಸ್ರೇಲ್ ದಾಳಿಯಲ್ಲಿ ಇರಾನ್ ವಾಯುಪಡೆ ಧೂಳೀಪಟವಾಗಿರುವುದಾಗಿ ಹೇಳಿಕೆ ನೀಡಿದ್ದರು.

ಬಿಸಿನೆಸ್ ಇನ್ನೈಡರ್ ವರದಿಯ ಪ್ರಕಾರ, ರಕ್ಷಣಾ ಗುಪ್ತಚರ ಸಂಸ್ಥೆಯ ನಿರ್ದೇಶಕ ಮೆರೈನ್ ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ಜೇಮ್ಸ್ ಆಡಮ್ಸ್, ಟೆಹ್ರಾನ್ ಬಳಿ ಇನ್ನೂ “ಸಾವಿರಾರು” ಕ್ಷಿಪಣಿಗಳು ಮತ್ತು ಏಕಮುಖ ದಾಳಿ ಡ್ರೋನ್‌ಗಳನ್ನು ಹೊಂದಿದ್ದು, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ನೆಲೆಗಳು ಮತ್ತು ಅದರ ಮಿತ್ರರಾಷ್ಟ್ರಗಳಿಗೆ ನಿರಂತರ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ವಿಶ್ಲೇಷಿಸಿದ್ದಾರೆ.

ಕಳೆದ ವಾರದ ಸಿಎನ್‌ಎನ್ ತನಿಖಾ ವರದಿಯ ಈ ಹೇಳಿಕೆಗಳು ಮತ್ತಷ್ಟು ಸೇರ್ಪಡೆಯಾಗಿವೆ. ಇರಾನ್‌ ನ ಅರ್ಧದಷ್ಟು ಕ್ಷಿಪಣಿ ಉಡಾವಣಾ ಯಂತ್ರಗಳು ಇನ್ನೂ ಹಾಗೆಯೇ ಇವೆ ಮತ್ತು ಐದು ವಾರಗಳಿಗೂ ಹೆಚ್ಚು ಕಾಲ ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಪ್ರತಿದಿನ ದಾಳಿ ನಡೆಸುತ್ತಿದ್ದರೂ ಸಾವಿರಾರು ಏಕಮುಖ ದಾಳಿ ಡ್ರೋನ್‌ಗಳನ್ನು ಶಸ್ತ್ರಾಗಾರದಲ್ಲಿ ದಾಸ್ತಾನು ಹೊಂದಿರುವುದಾಗಿ ತಿಳಿಸಿತ್ತು.

ಟ್ರಂಪ್ ಹೇಳಿಕೆ ಸುಳ್ಳು:

ಎ.1ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ನ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಸಾಮರ್ಥ್ಯವನ್ನು ಧ್ವಂಸಗೊಳಿಸಲಾಗಿದೆ. ಅವರ ಶಸ್ತ್ರಾಸ್ತ್ರ ಕಾರ್ಖಾನೆಗಳು ಮತ್ತು ರಾಕೆಟ್ ಲಾಂಚರ್ಸ್ ಗಳನ್ನು ಸಂಪೂರ್ಣ ನಾಶಗೊಳಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು.

ಫೆಬ್ರವರಿ 28ರಿಂದ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಎಪಿಕ್ ಪ್ಯೂರಿ ಆಪರೇಶನ್ ಹೆಸರಿನಲ್ಲಿ ಇರಾನ್ ಮೇಲೆ ನಿರಂತರವಾಗಿ ಸಾವಿರಾರು ವೈಮಾನಿಕ ದಾಳಿ ನಡೆಸಿತ್ತು. ಆದರೆ ಇದೀಗ ಅಮೆರಿಕ ಗುಪ್ತಚರ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಇರಾನ್ ಬಳಿ ಇನ್ನೂ ಸಾವಿರಾರು ಕ್ಷಿಪಣಿ, ಡ್ರೋನ್ ಗಳ ದಾಸ್ತಾನು ಇದೆ ಎಂಬ ವರದಿ ಟ್ರಂಪ್ ಅವರ ಹೇಳಿಕೆ ಸುಳ್ಳೆಂದು ಸಾಬೀತು ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಮಡಿಕೇರಿ : ನಾಪತ್ತೆಯಾಗಿದ್ದ ಹಿಂದೂ ತಾಯಿ, ಮಗು – ಕೇರಳದ ಮದರಸವೊಂದರಲ್ಲಿ ಪತ್ತೆ ! ಲವ್ ಜಿಹಾದ್‌ ಆರೋಪ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಾಯ್ ಫ್ರೆಂಡ್ ಜೊತೆ ಸಲುಗೆಯಿಂದಿದ್ದಳು ಎಂದು ಸ್ನೇಹಿತೆಯ ಖಾಸಗಿ ಫೊಟೋ ವೈರಲ್ – ಶ್ವೇತಾ ಅರೆಸ್ಟ್ !

ಟಾಪ್ ಸುದ್ದಿಗಳು, ತಾಲೂಕು, ಪುತ್ತೂರು

ಪುತ್ತೂರು : ಶಿರಾಡಿ ಘಾಟಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೇ ಹಳಿ ಅಭಿವೃದ್ಧಿಗೆ ಜಂಟಿ ಸಮೀಕ್ಷೆ – ಕ್ಯಾ. ಚೌಟ

⚠️ Contents are protected on this website.