ಉಪ್ಪಿನಂಗಡಿ, ಜೂ. 17 : ಈಚರ್ ಲಾರಿಯಲ್ಲಿ ಅಮಾನುಷವಾಗಿ ಹಾಗೂ ಹಿಂಸಾತ್ಮಕವಾಗಿ 16 ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿರುವ ಘಟನೆ ಇಂದು ಬುಧವಾರ ನಸುಕಿನ ಜಾವ ನಡೆದಿದೆ.

ಹಾಸನ ಕಡೆಯಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಲಾರಿಯನ್ನು ಬಜರಂಗ ದಳದ ಮಾಹಿತಿಯ ನೆಲೆಯಲ್ಲಿ ನೆಕ್ಕಿಲಾಡಿಯಲ್ಲಿ ಗಸ್ತು ನಿರತ ಪೊಲೀಸರು ತಪಾಸಣೆಗೆ ಒಳಪಡಿಸಿದಾಗ ಅಕ್ರಮ ಸಾಗಾಟದ ಕೃತ್ಯ ಪತ್ತೆಯಾಗಿದೆ.
ಪತ್ತೆ ಕಾರ್ಯದ ವೇಳೆ ಓರ್ವ ಪರಾರಿ ಯಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


