ಮಂಗಳೂರು : ರಶ್ಮಿಕಾ ಅವರೊಂದಿಗೆ ಜೆ.ಪಿ.ತುಮಿನಾಡ್ ಹೊಸ ಬಾಳಿಗೆ ಕಾಲಿಟ್ಟ ‘ಸು ಫ್ರಮ್ ಸೋ’ ಚಿತ್ರ ನಟ ಜೆ.ಪಿ. ತುಮಿನಾಡ್

Advertisement

ಮಂಗಳೂರು, ಮೇ. 06 : ‘ಸು ಫ್ರಮ್ ಸೋ’ ಚಿತ್ರವನ್ನು ನಿರ್ದೇಶಿಸಿ ಸದ್ದು ಮಾಡಿದ್ದ ನಟ ಜೆ.ಪಿ.ತುಮಿನಾಡ್ ಅವರು ಬುಧವಾರ(ಮೇ6) ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನ ಪಿಲಿಕುಲದಲ್ಲಿರುವ ಸೌಟ್ ಭವನದಲ್ಲಿ ರಶ್ಮಿಕಾ ಅವರೊಂದಿಗೆ ಜೆ.ಪಿ.ತುಮಿನಾಡ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

Advertisement

ನಿರೂಪಕ ನಿರಂಜನ್ ದೇಶಪಾಂಡೆ, ನಟಿ ಸಂಧ್ಯಾ ಅರಕೆರೆ, ನಿರ್ದೇಶಕ ಶ್ರೀನಿಧಿ ಸೇರಿದಂತೆ ಅನೇಕರು ವಿವಾಹ ಸಂಭ್ರಮದಲ್ಲಿ ಭಾಗಿಯಾಗಿ ನವ ದಂಪತಿಗೆ ಶುಭ ಹಾರೈಸಿದ್ದಾರೆ.

Advertisement

ರಂಗಭೂಮಿ ಹಿನ್ನಲೆಯಿಂದ ಬಂದಿದ್ದ ಜೆ.ಪಿ.ತುಮಿನಾಡ್ ತುಮಿನಾಡ್ ಕಥೆ ಬರೆದು ಮೊದಲ ಬಾರಿಗೆ ನಿರ್ದೇಶಿಸಿದ ಹಾಸ್ಯ ಪ್ರಧಾನ ‘ಸು ಫ್ರಮ್ ಸೋ’ 2025 ರ ಭಾರತೀಯ ಚಿತ್ರ ರಂಗದ ಗಮನ ಸೆಳೆದು ಚಿತ್ರವಾಗಿತ್ತು. ಚಿತ್ರ 2025 ಜುಲೈ 25 ರಂದುಬಿಡುಗಡೆಯಾದ ನಂತರ ಸಕಾರಾತ್ಮಕ ವಿಮರ್ಶೆಗಳ ಮೂಲಕವೇ ದಿನದಿಂದ ದಿನಕ್ಕೆ ವಾಣಿಜ್ಯಕವಾಗಿ ಯಶಸ್ವಿಯಾಯಿತು.

ಪರ ಭಾಷಿಕರನ್ನೂ ಸೆಳೆದು ಯಶಸ್ವಿಯಾಗಿ ಡಬ್ ಆಯಿತು. ಸಾರ್ವಕಾಲಿಕ 7 ನೇ ಅತಿ ಹೆಚ್ಚು ಗಳಿಕೆಯ ಕನ್ನಡ ಚಿತ್ರ ಮತ್ತು ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಕನ್ನಡ ಚಿತ್ರಎನಿಸಿಕೊಂಡಿತು. ದೊಡ್ಡ ಸ್ಟಾರ್ ಗಳಿಲ್ಲದೆ 125 ಕೋಟಿ ಗೂ ಹೆಚ್ಚುಬಾಕ್ಸ್ ಆಫೀಸ್ ಕಲೆಕ್ಷನ್ ಕಂಡು ದಾಖಲೆ ಬರೆಯಿತು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ