ಬೆಳ್ತಂಗಡಿ : ಕಬಡ್ಡಿಯಲ್ಲಿ ರಾಜ್ಯಮಟ್ಟ ಹಾಗೂ ಮಿನಿ ಒಲಿಂಪಿಕ್ಸ್ ಕಬಡ್ಡಿ ಚಾಂಪಿಯನ್‌ಶಿಪ್ ಗೆ ಆಯ್ಕೆಯಾದ ಮುಂಡೂರು ನಿವಾಸಿ ರಿಷಿಕ ಅಂಚನ್

ಬೆಳ್ತಂಗಡಿ, ಅ. 25 : ತಾಲೂಕಿನ ಮುಂಡೂರು ನಿವಾಸಿ, ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ರಿಷಿಕ ಅಂಚನ್ ಅವರು ಕಬಡ್ಡಿಯಲ್ಲಿ ರಾಜ್ಯಮಟ್ಟ ಹಾಗೂ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಮಿನಿ ಒಲಿಂಪಿಕ್ಸ್ ಕಬಡ್ಡಿ ಚಾಂಪಿಯನ್‌ಶಿಪ್ – 2026ಕ್ಕೆ ಆಯ್ಕೆಯಾಗಿದ್ದಾರೆ.

ರಿಷಿಕ ಅಂಚನ್ ಅವರು ಅ. 16ರಂದು ಸೇಕ್ರೆಟ್ ಆರ್ಟ್ ಕಾಲೇಜು ಮಡಂತ್ಯಾರ್ ಇಲ್ಲಿ ನಡೆದ ಕಬಡ್ಡಿ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ರಾಜ್ಯಮಟ್ಟ ಹಾಗೂ  ಒಲಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ನ. 11 ರಂದು ಬೆಂಗಳೂರಿನ ಕಂಠೀರವ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ರಿಷಿಕ ಅಂಚನ್ ಮುಂಡೂರು ಗ್ರಾಮದ  ಕೊಡೆಕಲ್ ನಿವಾಸಿಯಾದ  ಶ್ರೀಮತಿ ಶಾಂಭವಿ ಶಿವಪ್ರಸಾದ್ ರವರ ಪುತ್ರಿಯಾಗಿದ್ದಾರೆ.

ಯುವವಾಹಿನಿಯಿಂದ ಅಭಿನಂದನೆ  :

ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಮಹಿಳಾ ಸಂಚಾಲನಾ ಸಮಿತಿಯ ಕಾರ್ಯದರ್ಶಿಯಾಗಿರುವ ಶ್ರೀಮತಿ ಶಾಂಭವಿ ಶಿವಪ್ರಸಾದ್, ಕೊಡೆಕ್ಕಲ್ ಇವರ ಪುತ್ರಿ ಕು. ರಿಷಿಕಾ ಅಂಚನ್ ಇವರು ಕರ್ನಾಟಕ ರಾಜ್ಯದ ಪ್ರತಿಷ್ಠಿತ ಮಿನಿ ಒಲಿಂಪಿಕ್ಸ್ ಕಬಡ್ಡಿ ಚಾಂಪಿಯನ್‌ಶಿಪ್ – 2026 ಕ್ಕೆ ಬೆಳ್ತಂಗಡಿ ತಾಲೂಕಿನಿಂದ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ಹಾಗೂ ಸಂತಸದ ಸಂಗತಿಯಾಗಿದೆ.

ಮುಂದಿನ ಸ್ಪರ್ಧೆಯಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ, ವಿಜಯದ ಕಿರೀಟವನ್ನು ಮುಡಿಗೇರಿಸಿಕೊಂಡು ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡುವಂತಾಗಲಿ. ಆಕೆಯ ಕ್ರೀಡಾ ಬದುಕು ಯಶಸ್ಸಿನ ಹೊಸ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲಿ ಎಂದು ಹಾರೈಸುತ್ತೇವೆ ಎಂದು ಯುವವಾಹಿನಿ (ರಿ.) ಬೆಳ್ತಂಗಡಿ ಘಟಕ ಪ್ರಕಟಣೆಯ ಮೂಲಕ ಶುಭ ಹಾರೈಸಿದೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಉಜಿರೆ ಎಸ್‌ಡಿಎಂಐಟಿಯಲ್ಲಿ ಅ. 29ರಿಂದ ‘ಸ್ಪರ್ಧಂ-2026’ ಅಂತರಕಾಲೇಜು ಸ್ಪರ್ಧೋತ್ಸವ – ಅ. 30ರಂದು ಸ್ಟಾರ್ ನೈಟ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಮುಂಬೈ : ನೆಪಕ್ಕೆ ರ‍್ಯಾಪಿಡೋ ರೈಡರ್ : ಪ್ರಧಾನಿ ಮೋದಿ ಹತ್ಯೆಗೆ ಜೈಶ್ ಉಗ್ರರೊಂದಿಗೆ ಸಂಚು ರೂಪಿಸುತ್ತಿದ್ದ ಅಖ್ತರ್ ಎಂಬಾತ ಎಟಿಎಸ್ ಬಲೆಗೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಕನ್ಯಾಡಿ : ಅಯೋಧ್ಯೆಯ ಕನ್ಯಾಡಿ ಶ್ರೀರಾಮ ಮಠದ ಯೋಜನೆಗೆ ಮಸ್ಕತ್‌ನ ಶ್ರೀರಾಮ ಭಕ್ತರಿಂದ ₹10 ಲಕ್ಷಕ್ಕೂ ಅಧಿಕ ದೇಣಿಗೆ