ಮೂಡುಬಿದಿರೆ : ತುಳುವರ ಪ್ರೀತಿಯ “ರೀಲ್ಸ್ ಅಜ್ಜಿ” ಕಮಲ ದೊಡ್ಡ ನಿಧನ

Advertisement

ಮೂಡುಬಿದಿರೆ, ಜೂ. 15 : ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಶಿಷ್ಟ ಶೈಲಿಯ ಹಾಸ್ಯಭರಿತ ಮಾತುಗಳು ಹಾಗೂ ಸದಾ ನಗುವ ಮೊಗದ ಮೂಲಕವೇ ಲಕ್ಷಾಂತರ ನೆಟ್ಟಿಗರ ಮನಗೆದ್ದಿದ್ದ, ತುಳುನಾಡಿನ ಹಿರಿಯ ಸಂಸ್ಕೃತಿಯ ಅರಿವು ಮೂಡಿಸುತ್ತಿದ್ದ ಮೂಡುಮಾರ್ನಾಡು ನಿವಾಸಿ ಕಮಲ ದೊಡ್ಡ (85) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಇತ್ತೀಚಿಗೆ ನಿಧನ ಹೊಂದಿದರು.

Advertisement

ಮಾರ್ನಾಡಿನ ದಿವಂಗತ ದೊಡ್ಡಣ್ಣ ಶೆಟ್ಟಿ ಅವರ ಪತ್ನಿ ಹಾಗೂ ಬೊಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀನಿಥ್ ಶೆಟ್ಟಿ ಮಾರ್ನಾಡ್ ಅವರ ಅಜ್ಜಿಯಾಗಿರುವ ಕಮಲ ದೊಡ್ಡ ಅವರಿಗೆ ಕಳೆದ ಶುಕ್ರವಾರವಷ್ಟೇ ಕಾಲಿನ ಶಸ್ತ್ರಚಿಕಿತ್ಸೆಯಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

Advertisement

ಕರಾವಳಿಯ ರೀಲ್ಸ್ ತಾರೆ ; ಸಿನಿಮಾದಲ್ಲೂ ನಟನೆ !

ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ್ದ ಕಮಲ ಅಜ್ಜಿ, ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ರೀಲ್ಸ್ಗಳ ಮೂಲಕ ಕರಾವಳಿ ಮಾತ್ರವಲ್ಲದೆ ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಕರಾವಳಿಯ ಆಚಾರ-ವಿಚಾರ, ಹಳೇ ಕಾಲದ ಜೀವನ ಪದ್ಧತಿಯನ್ನು ಇಂದಿನ ಪೀಳಿಗೆಗೆ ತಮ್ಮದೇ ಶೈಲಿಯಲ್ಲಿ ಉಣಬಡಿಸುತ್ತಿದ್ದರು.

ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ನಟನೆಯ ಇನ್ನಷ್ಟೇ ಬಿಡುಗಡೆಯಾಗಬೇಕಿರುವ ‘ಶಂಕರಾಭರಣ’ ಎಂಬ ಕನ್ನಡ ಸಿನಿಮಾದಲ್ಲೂ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಆದರೆ ಸಿನಿಮಾ ಬೆಳ್ಳಿಪರದೆಗೆ ಬರುವ ಮುನ್ನವೇ ಅಜ್ಜಿ ನೆನಪಾಗಿ ಉಳಿದಿರುವುದು ಕಲಾಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಕಂಬನಿ

“ಸದಾ ಧನಾತ್ಮಕ ಚಿಂತನೆ ಹಾಗೂ ನಗುವನ್ನು ಹಂಚುತ್ತಿದ್ದ ಕಮಲ ಅಜ್ಜಿಯ ಅಗಲಿಕೆ ಕರಾವಳಿ ಇನ್ನು ಯೆನ್ಸರ್ ಲೋಕಕ್ಕೆ ದೊಡ್ಡ ನಷ್ಟ” ಎಂದು ನೆಟ್ಟಿಗರು ಕಂಬನಿ ಮಿಡಿದಿದ್ದಾರೆ. ಕಮಲ ಅಜ್ಜಿಯ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುತ್ತಿರುವ ಸಂತಾಪಗಳೇ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ