ಅನ್ನಭಾಗ್ಯದಂತೆ ‘ಕನ್ಯಾ ಭಾಗ್ಯ’ ನೀಡಿ – ಕಾಂಗ್ರೆಸ್ ಸರ್ಕಾರಕ್ಕೆ ಶಿಕ್ಷಕರಿಂದ ವಿಚಿತ್ರ ಮನವಿ!

ಬೆಂಗಳೂರು, ಜು. 29 : ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಶಿಕ್ಷಕ ಅಭ್ಯರ್ಥಿಗಳು ವಿಚಿತ್ರ ಮನವಿ ನೀಡುವ ಮೂಲಕ, ವಿಭಿನ್ನ ರೀತಿಯಲ್ಲಿ ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ. “ಉದ್ಯೋಗ ಸಿಗುತ್ತಿಲ್ಲ, ಕೆಲಸ ಇಲ್ಲದ ಕಾರಣ ಮದುವೆಯೂ ಆಗುತ್ತಿಲ್ಲ. ಹೀಗಾಗಿ ಕನ್ಯಾ ಭಾಗ್ಯವನ್ನಾದರೂ ನೀಡಿ” ಎಂದು ಸರ್ಕಾರದ ಗಮನ ಸೆಳೆಯುವ ಮೂಲಕ ತಮ್ಮ ಅಳಲು ಹೊರಹಾಕಿದ್ದಾರೆ.

Advertisement

ಡಿ.ಎಡ್. (D.Ed.) ಪೂರ್ಣಗೊಳಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಭ್ಯರ್ಥಿಗಳು, ಶಿಕ್ಷಕರ ನೇಮಕಾತಿಯಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಸುಮಾರು 32 ಸಾವಿರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ, ಶಿಕ್ಷಣ ಇಲಾಖೆ ಕೇವಲ 800 ಹುದ್ದೆಗಳ ನೇಮಕಾತಿಗೆ ಮಾತ್ರ ಅಧಿಸೂಚನೆ ಹೊರಡಿಸಿರುವುದಾಗಿ ಅಭ್ಯರ್ಥಿಗಳು ಆರೋಪಿಸಿದ್ದಾರೆ.

ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 800 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದರಿಂದ, ಉಳಿದ ಅಭ್ಯರ್ಥಿಗಳ ಭವಿಷ್ಯ ಏನಾಗಲಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಹಲವು ವರ್ಷಗಳಿಂದ ನೇಮಕಾತಿಗಾಗಿ ಕಾಯುತ್ತಿರುವ ತಮ್ಮ ವಯಸ್ಸು ಮೀರಿಬರುತ್ತಿದ್ದು, ಉದ್ಯೋಗವಿಲ್ಲದ ಕಾರಣ ಮದುವೆಯೂ ಸಾಧ್ಯವಾಗುತ್ತಿಲ್ಲ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಓದಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಪರೀಕ್ಷೆಗಳನ್ನು ಉತ್ತೀರ್ಣರಾಗಿದ್ದರೂ ಉದ್ಯೋಗ ಸಿಗುತ್ತಿಲ್ಲ. ಕೆಲಸವಿಲ್ಲದ ಕಾರಣ ಕುಟುಂಬಗಳು ಮದುವೆಗೆ ಮುಂದೆ ಬರುತ್ತಿಲ್ಲ. ಉದ್ಯೋಗ ನೀಡಲು ಸಾಧ್ಯವಾಗದಿದ್ದರೆ ಕನ್ಯಾ ಭಾಗ್ಯವನ್ನಾದರೂ ಸರ್ಕಾರವೇ ಕೊಡಲಿ,” ಎಂದು ಅಭ್ಯರ್ಥಿಗಳು ವ್ಯಂಗ್ಯಭರಿತವಾಗಿ ಸರ್ಕಾರವನ್ನು ಟೀಕಿಸಿದ್ದಾರೆ. ಶೀಘ್ರದಲ್ಲೇ ಖಾಲಿ ಇರುವ ಎಲ್ಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ, ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಅಭ್ಯರ್ಥಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಹರೈನ್ ನಿಂದ ಊರಿಗೆ ಬಂದು ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಎದೆನೋವು – ಹೃದಯಾಘಾತದಿಂದ ವ್ಯಕ್ತಿ ಸಾವು !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಜಾರ್ಖಂಡ್‌ : 1 ಕೋಟಿ ಬಹುಮಾನ ಹೊಂದಿದ್ದ ಮೋಸ್ಟ್ ವಾಂಟೆಡ್ ಮಾವೋವಾದಿ ನಾಯಕ ಅರೆಸ್ಟ್ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಶಿವಮೊಗ್ಗ : ಕಾವೇರಿ ನೀರಿಗಾಗಿ ಬಿಜೆಪಿ ಜುಲೈ 31ರಂದು ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ – ರೈತ ಸಂಘಟನೆಗಳ ಬೆಂಬಲ !

⚠️ Contents are protected on this website.