ಕೊರಗ ಸಮುದಾಯದ ಮಹಿಳೆ ಜೀವದ ಜೊತೆ ಚೆಲ್ಲಾಟ – ಮಹಿಳೆಗೆ ನಿಂದಿಸಿದ KSRTC ಅಧಿಕಾರಿಗಳು!

ಬೆಳ್ತಂಗಡಿ, ಏ. 26 : ವಿದ್ಯುತ್ ಆಘಾತಕ್ಕೊಳಗಾಗಿ ಬಿದ್ದು ಗಾಯಗೊಂಡಿದ್ದ ಕೆಎಸ್ ಆರ್ ಟಿಸಿ ಸ್ವಚ್ಛತಾ ವಿಭಾಗದ ಕೊರಗ ಸಮಾಜದ ಮಹಿಳಾ ಸಿಬ್ಬಂದಿಯನ್ನು ಹೀಯಾಳಿಸಿದ ಘಟನೆ ವರದಿಯಾಗಿದೆ.

ಘಟನೆ ವಿವರ :

ಹಾಸನ ಮೂಲದ ಗಣೇಶ್ ಎಂಬ ಹೋಟೆಲ್ ಕಾರ್ಮಿಕ ಮೃತಪಟ್ಟ ವ್ಯಕ್ತಿಯನ್ನು ಅಂಗಡಿಯೊಂದರ ಪಕ್ಕ ನಿಂತು ನೋಡುತ್ತಿದ್ದ ವೇಳೆ ಕೆಎಸ್ ಆರ್ ಟಿಸಿ ಸ್ವಚ್ಛತಾ ಮಹಿಳಾ ಸಿಬ್ಬಂದಿಗೆ ವಿದ್ಯುತ್ ಆಘಾತಕ್ಕೊಳಗಾಗಿ ಕೈಕಾಲು ಮರಗಟ್ಟಿದಂತಾದ ಘಟನೆ ಧರ್ಮಸ್ಥಳ ಕೆಎಸ್ ಆರ್ ಟಿ ಸಿ ಡಿಪೋದಲ್ಲಿ ಗುರುವಾರ ನಡೆದಿದೆ. ಉಜಿರೆ ಗ್ರಾಮದ ಕೊರಗರ ಕಾಲೋನಿಯ ನಿವಾಸಿ, ಧರ್ಮಸ್ಥಳ ಕೆಎಸ್‌ಆರ್ ಟಿ ಸಿ ಡಿಪೋದ ಸ್ವಚ್ಛತಾ ಸಿಬ್ಬಂದಿ ಚಂದ್ರಾವತಿ ಎಂಬವರು ವಿದ್ಯುತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಚ್ಛತಾ ಸಿಬ್ಬಂದಿ ಚಂದ್ರಾವತಿ ಅವರು ಕರ್ತವ್ಯದ ವೇಳೆಯಲ್ಲಿ ವಿದ್ಯುತ್‌ ಆಘಾತಕ್ಕೊಳಗಾಗಿ ಕೈ ಕಾಲುಗಳು ಮರಗಟ್ಟಿದಂತಾಗಿ ಕೆಲಸ ಮಾಡಲು ಆಗದಿದ್ದಾಗ ಕೆ.ಎಸ್.ಆರ್.ಟಿ.ಸಿ ಟಿಸಿಗಳಲ್ಲಿ “ನನಗೆ ಕೈಕಾಲು ಮರಗಟ್ಟಿದಂತಾಗುತ್ತದೆ, ನನಗೆ ಇನ್ನು ಕೆಲಸ ಮಾಡಲು ಆಗುತ್ತಿಲ್ಲ ನಾನು ಆಸ್ಪತ್ರೆಗೆ ಹೋಗುವುದಾಗಿ ಅನುಮತಿ ಕೇಳಿದಾಗ ಸಂಬಂಧಪಟ್ಟ ಧರ್ಮಸ್ಥಳ ಟಿ ಸಿ ಮತ್ತಿತರ ಮೇಲಾಧಿಕಾರಿಗಳಾದ ಗಣೇಶ ಭಟ್ ಮತ್ತು ಜೋಸೆಫ್ ಎಂಬವರು ಸ್ವಚ್ಛತಾ ಸಿಬ್ಬಂದಿ ಚಂದ್ರಾವತಿ ಅವರಿಗೆ ವಿದ್ಯುತ್ ಆಘಾತಕ್ಕೊಳಗಾಗಿ ಮರಗಟ್ಟಿದ ಕೈಕಾಲುಗಳಿಗೆ ಯಾವುದೇ ಚಿಕಿತ್ಸೆ ಕೊಡಿಸದೆ, ತಾವಾಗಿ ಆಸ್ಪತ್ರೆಗೆ ದಾಖಲಿಸದೆ ಇಬ್ಬರು ಅಧಿಕಾರಿಗಳು ಸೇರಿ ಬಾಯಿಗೆ ಬಂದಂತೆ ಹಿಯಾಳಿಸಿ ಬೈಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ವಚ್ಛತಾ ಸಿಬ್ಬಂದಿ ಚಂದ್ರಾವತಿ ಟಿಸಿ ಕಚೇರಿಗೆ ಹೋಗಿ ತನಗಾದ ವಿದ್ಯುತ್ ಆಘಾತದ ಬಗ್ಗೆ ಹೇಳಿ ಆ ಕಡೆ ಯಾರೂ ಹೋಗದಂತೆ ತಿಳಿಸಿದಾಗ ಮೇಲಾಧಿಕಾರಿ ಜೊಸೆಫ್ ಎಂಬವರು ಇನ್ನು ಮುಂದೆ “ಅಣ್ಣಪ್ಪನನ್ನು ఇళిసి ಆ ಜಾಗದಲ್ಲಿ ನಿನ್ನನ್ನು ಕೂರಿಸುತ್ತೇವೆ..” ಎಂದು ವ್ಯಂಗ್ಯವಾಗಿ ಮಾತನಾಡಿ ಕೊರಗ ಸಮುದಾಯದ ಅಮಾಯಕ ಮಹಿಳೆಯನ್ನು ಅವಮಾನಿಸಿದ್ದಾರೆ. ಕೈ ಕಾಲು ನೋವಿದ್ದರೂ ಕೆಲಸಕ್ಕೆ ಬರಲೇಬೇಕೆಂದು ಮತ್ತು ರಜೆ ಮಾಡಲೇ ಬಾರದೆಂದು ಒತ್ತಾಯಿಸಿ, ಪೀಡಿಸಿ ಬಡ ಮಹಿಳೆಯ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ.

ಆಘಾತದ ಪರಿಣಾಮ ಕೈಕಾಲು ಮರಗಟ್ಟಿ ನೋವು ಸಹಿಸಲಾಗದೆ ಚಂದ್ರಾವತಿ ಶುಕ್ರವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ “ನಾನು ಶುಕ್ರವಾರ ಸಂಜೆ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದು, ” ನೀನು ಯಾಕೆ ಆಸ್ಪತ್ರೆಗೆ ದಾಖಲಾಗಿದ್ದಿಯಾ, ಇನ್ನು ನೀನು ಕೆಲಸಕ್ಕೆ ಬರುವುದು ಬೇಡ, ನಿನ್ನನ್ನು ಕೆಲಸದಿಂದ ತೆಗೆಯುತ್ತೇವೆ…” ಎಂದು ಬೆದರಿಸಿದ್ದಾರೆ ಎಂದು ನೊಂದ ಸ್ವಚ್ಛತಾ ಸಿಬ್ಬಂದಿ ಚಂದ್ರಾವತಿ ಆರೋಪಿಸಿದ್ದಾರೆ.

ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ರಾಜ್ಯದ ಶಾಲೆಗಳಲ್ಲಿ ದಿನವೂ 10 ನಿಮಿಷ ಕನ್ನಡ ಪತ್ರಿಕೆ ಓದುವುದು ಕಡ್ಡಾಯ – ಶಿಕ್ಷಣ ಇಲಾಖೆಯ ಹೊಸ ಆದೇಶ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಚಾರ್ಮಾಡಿ : ಯುವಕನೋರ್ವ ಮನೆ ಸಮೀಪದ ಗುಡ್ಡದಲ್ಲಿ ನೇಣು ಬಿಗಿದು ಆತ್ಮಹತ್ಯೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಜಮೀನು ತಕರಾರು – 25ಕ್ಕೂ ಅಧಿಕ ಜನರೊಂದಿಗೆ ಅಕ್ರಮ ಪ್ರವೇಶಗೈದು ಹಲ್ಲೆ ಆರೋಪ

⚠️ Contents are protected on this website.