ರಿಕಲ್ಟನ್ ಹಾಗೂ ರೋಹಿತ್ ಅಬ್ಬರದ ಬ್ಯಾಟಿಂಗ್ – ಲಕ್ನೋ ತಂಡದ ಪ್ಲೇ ಆಫ್ ಕನಸು ಭಾಗಶಃ ಭಗ್ನ

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗಳಿಂದ ಜಯಗಳಿಸಿತು. ಇದು ಮುಂಬೈ ತಂಡಕ್ಕೆ ಈ ಆವೃತ್ತಿಯಲ್ಲಿ ಮೂರನೇ ಗೆಲುವಾದರೆ, ಇತ್ತ ಲಕ್ನೋ ತಂಡಕ್ಕೆ 7ನೇ ಸೋಲು. ಈ ಸೋಲಿನೊಂದಿಗೆ ಲಕ್ನೋ ತಂಡದ ಪ್ಲೇ ಆಫ್ ಕನಸು ಕೂಡ ಭಾಗಶಃ ಭಗ್ನವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 228 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ರಿಕಲ್ಟನ್ ಹಾಗೂ ರೋಹಿತ್ ಅವರ ಅಬ್ಬರದ ಬ್ಯಾಟಿಂಗ್ನಿಂದಾಗಿ ಗೆಲುವು ದಾಖಲಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಮೇ 4ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕಟ್ ನಷ್ಟಕ್ಕೆ 228 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ ತಂಡ ಇನ್ನೂ 8 ಎಸೆತಗಳು ಬಾಕಿ ಉಳಿದಿರುವಂತೆ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮುಂಬೈ ತಂಡ ಇಷ್ಟು ದೊಡ್ಡ ಮೊತ್ತವನ್ನು ಬೆಂಬತ್ತಿ ಗೆದ್ದಿರುವುದು ಇದೇ ಮೊದಲಾಗಿದೆ. ಆಕರ್ಷಕ ಅರ್ಧಶತಕ ಗಳಿಸಿ ರಾನ್ ರಿಕೆಲ್ಟನ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು.

ರಿಕೆಲ್ಟನ್- ರೋಹಿತ್ ಶತಕದ ಜೊತೆಯಾಟ :

ರಾನ್ ರಿಕಲ್ಟನ್(32 ಎಸೆತದಲ್ಲಿ 83 ರನ್) ಮತ್ತು ರೋಹಿತ್ ಶರ್ಮಾ(44 ಎಸೆತದಲ್ಲಿ 84 ರನ್) ಅವರು ಆರಂಭದಿಂದಲೇ ಲಖನೌ ಬೌಲರ್ ಗಳ ಮೇಲೆ ಏರಿ ಹೋದರು. ಪವರ್ ಪ್ಲೇನಲ್ಲಿ 71 ರನ್ ಗಳಿಸಿದ ಬಳಿಕ ಆಟದ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಹೀಗಾಗಿ ಕೇವಲ 8.1 ಓವರ್ ಗಳಲ್ಲಿ 100 ರನ್ ಗಳಿಸಿತು. ಇವರಿಬ್ಬರು ಮೊದಲ ವಿಕೆಟ್ ಗೆ 10.5 ಓವರ್ ಗಳಲ್ಲಿ 143 ರನ್ ಗಳ ಜೊತೆಯಾಟವಾಡಿದ್ದು ಲಖನೌ ಗೆಲುವಿನ ಆಸೆಗೆ ತಣ್ಣೀರೆರಚಿತು. ಆ ಬಳಿಕ ನಮನ್ ಧಿರ್ (12 ಎಸೆತದಲ್ಲಿ 23 ರನ್ ಮತ್ತು ವಿಲ್ ಜಾಕ್ಸ್ (4 ಎಸೆತದಲ್ಲಿ 10 ನಾಟೌಟ್) ಅವರು ಬಾಕಿ ಉಳಿದ ಕೆಲಸವನ್ನು ಮುಗಿಸಿದರು. ಲಖನೌ ಪರ ಮಣಿಮಾರನ್ ಸಿದ್ಧಾರ್ಥ್ ಅವರು 2 ವಿಕೆಟ್, ಮೊಹಮ್ಮದ್ ಶಮಿ ಮತ್ತು ಮೊಹ್ಸಿನ್ ಖಾನ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಮಿಚೆಲ್ ಮಾರ್ಷ್ (25 ಎಸೆತದಲ್ಲಿ 44 ರನ್) ಮತ್ತು ನಿಕೋಲಸ್ ಪೂರನ್(21 ಎಸೆತದಲ್ಲಿ 63 ರನ್) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು. ಐಡನ್ ಮಾರ್ಕಂ(25 ಎಸೆತದಲ್ಲಿ ಅಜೇಯ 31 ರನ್) ಮತ್ತು ಹಿಮ್ಮತ್ ಸಿಂಗ್ (31 ಎಸೆತದಲ್ಲಿ ಅಜೇಯ 40 ರನ್) ಉಪಯುಕ್ತ ಕೊಡುಗೆ ನೀಡಿದರು. ಮುಂಬೈ ಪರವಾಗಿ ಕಾರ್ಬಿನ್ ಬಾಷ್ 2, ವಿಲ್ ಜಾಕ್ಸ್, ಗಝನ್ ಫರ್, ರಘು ಶರ್ಮಾ ತಲಾ 1 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್
ಲಖನೌ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 228/5, ನಿಕೊಲಸ್ ಪೂರನ್ 63(21), ಮಿಚೆಲ್ ಮಾರ್ಷ್ 44(25), ಹಿಮ್ಮತ್ ಸಿಂಗ್ 40(31), ಏಡನ್ ಮಾರ್ಕಂ 31(25), ಕಾರ್ಬಿನ್ ಬಾಷ್ 20ಕ್ಕೆ2, ರಘು ಶರ್ಮಾ 36ಕ್ಕೆ1.
ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 229/4, ರಾನ್ ರಿಕೆಲ್ಟನ್ 83(32), ರೋಹಿತ್ ಶರ್ಮಾ 84(44), ನಮನ್ ಧಿರ್ ಅಜೇಯ 23(12), ವಿಲ್ ಜಾಕ್ಸ್ ನಾಟೌಟ್ 10(4), ಸಿದ್ಧಾರ್ಥ್ 47ಕ್ಕೆ 2, ಮೊಹ್ಸಿನ್ ಖಾನ್ 47ಕ್ಕೆ 1.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

⚠️ Contents are protected on this website.