ಹೊಸದಿಲ್ಲಿ : ನಿತಿನ್ ನವೀನ್ ಅವರೇ ಬಾಸ್, ನಾನು ಪಕ್ಷದ ಕಾರ್ಯಕರ್ತ – ಪ್ರಧಾನಿ ಮೋದಿ

ಹೊಸದಿಲ್ಲಿ, ಜ. 20 : ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ನಿತಿನ್ ನಬಿನ್ ಅವರನ್ನು ಶ್ಲಾಘಿಸಿದ್ದಾರೆ. ನಬೀನ್ ಅವರು ಪಕ್ಷದ ಪರಂಪರೆಯನ್ನು ಮುಂದುವರಿಸುವ ಮಿಲೇನಿಯಲ್ ಎಂದು ಮೋದಿ ಬಣ್ಣಿಸಿದ್ದಾರೆ.

Advertisement

ಪಕ್ಷದ ವಿಚಾರ ಬಂದ್ರೆ ನಿತಿನ್ ನವೀನ್ ಅವರೇ ಬಾಸ್. ನಾನು ಪಕ್ಷದ ಕಾರ್ಯಕರ್ತ ಎಂದು ಪ್ರಧಾನಿ ಹೇಳಿದರು. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ನವೀನ್ ಅವರಿಗೆ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಹೊಗಳಿದರು.

ನಿತಿನ್ ಜಿ ಅವರು ಮಿಲೇನಿಯಲ್

ಇಂದಿನ ಯುವಕರ ಭಾಷೆಯಲ್ಲಿ ಹೇಳುವುದಾದರೆ, ನಿತಿನ್ ಜಿ ಅವರೇ ಒಂದು ರೀತಿಯಲ್ಲಿ ಮಿಲೇನಿಯಲ್. ಅವರು ಭಾರತದಲ್ಲಿನ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಬದಲಾವಣೆಗಳನ್ನು ಕಂಡ ಪೀಳಿಗೆಯವರು. ಬಾಲ್ಯದಲ್ಲಿ ರೇಡಿಯೊದಲ್ಲಿ ಮಾಹಿತಿ ಕೇಳಿ, ಈಗ ಎಐ ಬಳಸುವ ತಂತ್ರಜ್ಞಾನಕ್ಕೆ ಒಗ್ಗಿಕೊಂಡವರು. ನಿತಿನ್ ಜಿ ಅವರಲ್ಲಿ ಯುವಕರ ಉತ್ಸಾಹ ಮತ್ತು ಸಂಘಟನಾತ್ಮಕ ಕೆಲಸದ ಅನುಭವ ಎರಡೂ ಇದೆ. ಇದು ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಬಹಳ ಪ್ರಯೋಜನಕಾರಿ ಎಂದು ಪ್ರಧಾನಿ ಮೋದಿ ಹೇಳಿದರು.

45 ವರ್ಷದ ನವೀನ್ ಅವರು ದಿವಂಗತ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರ. ಅವರು ಬಿಹಾರದ ಬ್ಯಾಂಕಿಪುರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಅಜೇಯರಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1981 ರಿಂದ 1996 ರ ನಡುವೆ ಜನಿಸಿದವರನ್ನು ಮಿಲೇನಿಯಲ್ ಎನ್ನುತ್ತಾರೆ. 1980 ರಲ್ಲಿ ಜನಿಸಿದ ನಬಿನ್ ಅವರು ತಾಂತ್ರಿಕವಾಗಿ ಮಿಲೇನಿಯಲ್ ಪೀಳಿಗೆಯ ಅಂಚಿನಲ್ಲಿದ್ದಾರೆ. ಬಿಜೆಪಿ ಅಧ್ಯಕ್ಷರ ಜವಾಬ್ದಾರಿ ಕೇವಲ ಪಕ್ಷಕ್ಕೆ ಸೀಮಿತವಾಗಿಲ್ಲ, ಎನ್ಡಿಎ ಒಕ್ಕೂಟದೊಳಗೆ ಸಮನ್ವಯ ಸಾಧಿಸುವುದೂ ಅವರ ಕರ್ತವ್ಯ ಎಂದು ಪ್ರಧಾನಿ ಹೇಳಿದರು. ಪಕ್ಷವನ್ನು ಒಂದು ಕುಟುಂಬ ಎಂದು ಕರೆದ ಮೋದಿ, ಬಿಜೆಪಿ ಹೊಸಬರಿಗೆ ವೇದಿಕೆ ಒದಗಿಸುತ್ತದೆ ಎಂದರು.

” ಬಿಜೆಪಿ ಒಂದು ಸಂಸ್ಕೃತಿ . ಬಿಜೆಪಿ ಒಂದು ಕುಟುಂಬ. ಇಲ್ಲಿ, ನಾವು ಕೇವಲ ಸದಸ್ಯತ್ವಕ್ಕಿಂತ ಹೆಚ್ಚಿನ ಸಂಬಂಧಗಳನ್ನು ಹೊಂದಿದ್ದೇವೆ. ಬಿಜೆಪಿ ಒಂದು ಸಂಪ್ರದಾಯವಾಗಿದ್ದು, ಇದು ಸ್ಥಾನದಿಂದಲ್ಲ, ಪ್ರಕ್ರಿಯೆಯಿಂದ ನಡೆಸಲ್ಪಡುತ್ತದೆ. ನಮ್ಮ ಅಧ್ಯಕ್ಷರು ಬದಲಾಗುತ್ತಾರೆ, ಆದರೆ ನಮ್ಮ ಆದರ್ಶಗಳು ಬದಲಾಗುವುದಿಲ್ಲ. ನಾಯಕತ್ವ ಬದಲಾಗುತ್ತದೆ, ಆದರೆ ದಿಕ್ಕು ಒಂದೇ ಇರುತ್ತದೆ. ಬಿಜೆಪಿಯ ಆತ್ಮ ರಾಷ್ಟ್ರೀಯವಾದುದು, ಏಕೆಂದರೆ ನಮ್ಮ ಸಂಪರ್ಕ ಸ್ಥಳೀಯವಾಗಿದೆ. ನಮ್ಮ ಬೇರುಗಳು ಮಣ್ಣಿನಲ್ಲಿ ಆಳವಾಗಿವೆ. ಅದಕ್ಕಾಗಿಯೇ ಬಿಜೆಪಿ ಪ್ರಾದೇಶಿಕ ಆಕಾಂಕ್ಷೆಗಳಿಗೆ ವೇದಿಕೆ ಒದಗಿಸುತ್ತದೆ. ಇದು ರಾಷ್ಟ್ರೀಯ ಮಹತ್ವಾಕಾಂಕ್ಷೆಗಳಿಗೆ ಅಡಿಪಾಯವಾಗಿಸುತ್ತದೆ. ಮತ್ತು ಅದಕ್ಕಾಗಿಯೇ ಇಂದು ದೇಶದ ಮೂಲೆ ಮೂಲೆಗಳಿಂದ ಜನರು ಬಿಜೆಪಿಯೊಂದಿಗೆ ಇದ್ದಾರೆ. ಬಿಜೆಪಿಗೆ ಸೇರುತ್ತಿದ್ದಾರೆ. ಮತ್ತು ಅಷ್ಟೇ ಅಲ್ಲ, ಯಾರಾದರೂ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಲು ಬಯಸಿದರೆ, ಬಿಜೆಪಿಯ ಪ್ರವೇಶವು ಅತ್ಯುತ್ತಮ ಮತ್ತು ಸುರಕ್ಷಿತ ಆಯ್ಕೆಯಾಗಿದೆ” ಎಂದು ಅವರು ಹೇಳಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ರಾಜ್ಯ / ದೇಶ

ಫೆ.26ಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಭಾರತಕ್ಕೆ ಭೇಟಿ

ಕ್ರೀಡೆ, ತಾಲೂಕು, ಬೆಳ್ತಂಗಡಿ

ಬಂಗಾಡಿ : ಯುವ ಸಂಗಮ ಸೇವಾ ಸಮಿತಿ ಬೆಳ್ತಂಗಡಿ ವತಿಯಿಂದ “ಯುವ ಸಂಗಮ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾಟ

ಟಾಪ್ ಸುದ್ದಿಗಳು, ತಾಲೂಕು, ಪುತ್ತೂರು

ಪುತ್ತೂರು : ಏಕಾಏಕಿ ಅಸ್ವಸ್ಥಗೊಂಡ ಪ್ರಯಾಣಿಕ – ಬಸ್ ಅನ್ನು ಆಸ್ಪತ್ರೆಗೆ ಸಾಗಿಸಿ, ಮಾನವೀಯತೆ ಮೆರೆದ ಬಸ್ ಸಿಬ್ಬಂದಿ !

⚠️ Contents are protected on this website.