ಕಲ್ಮಂಜ : ಜಾತ್ರೋತ್ಸವದ ಉಳಿಕೆ ಹಣದಲ್ಲಿ ಕ್ಷೇತ್ರದ ದೈವಗಳಿಗೆ ಆಭರಣ ಸಮರ್ಪಣೆ

ಕಲ್ಮಂಜ, ಅ. 26 : ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರ ಪಜೀರಡ್ಕದಲ್ಲಿ 2026ರ ಫೆಬ್ರವರಿ ತಿಂಗಳಲ್ಲಿ ನಡೆದ ಧ್ವಜಸ್ಥಂಭ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವದ ಖರ್ಚು ವೆಚ್ಚಗಳ ಬಳಿಕ ಉಳಿಕೆಯಾದ ಹಣದಲ್ಲಿ ಕ್ಷೇತ್ರದ ದೈವಗಳಿಗೆ (ಪದ್ದಾಯಿ) ಆಭರಣಗಳನ್ನು ಖರೀದಿಸಿ ದೇವಸ್ಥಾನದ ಆಡಳಿತ ಮಂಡಳಿಯ ಮೂಲಕ ಕ್ಷೇತ್ರಕ್ಕೆ ಸಮರ್ಪಿಸಲಾಯಿತು.

ಜಾತ್ರೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳ ಸಹಕಾರ ಹಾಗೂ ಸಮಿತಿಯ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಉಳಿದ ಹಣವನ್ನು ಕ್ಷೇತ್ರದ ದೈವಗಳ ಆಭರಣ ಖರೀದಿಗೆ ವಿನಿಯೋಗಿಸಿರುವುದು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸುನಿಲ್ ಕನ್ಯಾಡಿ, ಉಪಾಧ್ಯಕ್ಷ ಜಯಂತ್ ರಾವ್ ಕೋತ್ತಳಿಕೆ, ಕಾರ್ಯದರ್ಶಿ ದಿನೇಶ್ ಗೌಡ ಮೂಡಾಯಿಬೆಟ್ಟು, ಕೋಶಾಧಿಕಾರಿ ಮಂಜುನಾಥ ಗುಡಿಗಾರ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಗೌಡ ಹುಂಕ್ರೋಟ್ಟು, ದೇಸಿ ಕೇಂದ್ರ ಧರ್ಮೋತ್ಥಾನ ಟ್ರಸ್ಟ್‌ನ ಅಧ್ಯಕ್ಷ ನವೀನ್ ಪ್ರಕಾಶ್, ಪ್ರದೀಪ್ ಚಿಪ್ಳುಣ್ಕರ್, ಶೇಖರ್ ಟಿ., ಶಶಿಧರ್ ಎಂ. ಕಲ್ಮಂಜ, ಯತೀಶ್ ಲಿಂಗಾಯಿತ, ಅರುಣ್ ಗುತ್ತು ಮನೆ, ಮೋನಪ್ಪ. ಟಿ, ರಮಾನಂದ ಪೂಜಾರಿ ಗಾಡಿಕೊಟ್ಟಿಗೆ, ಯೋಗೀಶ್ ಹುಂಕ್ರೋಟ್ಟು,  ಗೋಪಾಲಕೃಷ್ಣ ಗುತ್ತು ಮನೆ, ಯಶವಂತ ಗುಡಿಗಾರ್, ಚಂದ್ರಶೇಖರ ಗೌಡ ಗುಲ್ಲೋಡಿ, ಸತೀಶ್ ಗುಡಿಗಾರ್, ಸುಂದರೇಶ್ ಪಜೀರಡ್ಕ, ದಿವಾಕರ ಗೌಡ ಕಲ್ಲಲಾಯಿ, ದೇವಸ್ಥಾನದ ಸಿಬ್ಬಂದಿ ಅರುಣಾ  ಪಜೀರಡ್ಕ ಹಾಗೂ ಸುರೇಶ್ ಗೌಡ ಉಪಸ್ಥಿತರಿದ್ದರು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ರಾಧಾಕೃಷ್ಣ ಗೌಡ, ಸದಸ್ಯರಾದ ಗಂಗಾಧರ ಗೌಡ ಕರೀಂಬಿತ್ತಿಲ್, ಪ್ರವೀಣ್ ಪೂಜಾರಿ ಆರ್ಲ, ಮಹಾಲಕ್ಷ್ಮಿ ಹೊಳ್ಳ, ರಘುಚಂದ್ರ ಗುಡಿಗಾರ್, ಅರ್ಚಕರಾದ ರಾಜೇಶ್ ಹೊಳ್ಳ, ಪ್ರಕಾಶ್ ಭಟ್ ಸೇರಿದಂತೆ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.

ಕ್ಷೇತ್ರದ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾತ್ರೋತ್ಸವ ಸಮಿತಿಯ ಈ ಕಾರ್ಯವು ಗಮನಾರ್ಹವಾಗಿದೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ: ವಿಟ್ಲದ ಪಟಾಕಿ ಅಂಗಡಿ ಹಿಂಭಾಗ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕುಪ್ಪೆಟ್ಟಿ – ಉಪ್ಪಿನಂಗಡಿ ರಸ್ತೆ ವಿರುದ್ಧ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ :  ಟೆಂಪೋ ಹಾಗೂ 2 ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ – ಸ್ಕೂಟ‌ರ್ ಸವಾರ ಸಾವು