ವಿಶ್ವಕಪ್ ಹಾಕಿ ಇತಿಹಾಸದಲ್ಲೇ ಪಾಕಿಸ್ಥಾನ ವಿರುದ್ಧ ಅತೀ ದೊಡ್ಡ ಗೆಲುವು ಸಾಧಿಸಿದ ಭಾರತ – ಟೂರ್ನಿಯಿಂದಲೇ ಪಾಕ್ ಔಟ್ !

Advertisement

ಆಮ್ ಸ್ಟೆಲ್ವಿನ್‌, ಆ. 20 : ವಿಶ್ವಕಪ್ ಹಾಕಿ ಇತಿಹಾಸದಲ್ಲೇ ಪಾಕಿಸ್ಥಾನ ವಿರುದ್ಧ ಅತೀ ದೊಡ್ಡ ಗೆಲುವು ಸಾಧಿಸಿದ ಭಾರತ, ಮುಂದಿನ ಸುತ್ತಿಗೆ ತೇರ್ಗಡೆಯಾಗಿದೆ. ಜತೆಗೆ ಪಾಕಿಸ್ಥಾನವನ್ನು ಟೂರ್ನಿಯಿಂದಲೇ ಹೊರದಬ್ಬಿದೆ. ಹೀಗಾಗಿ ಹರ್ಮನ್ ಪ್ರೀತ್ ಸಿಂಗ್ ಬಳಗಕ್ಕೆ ಇದು ಡಬಲ್ ಧಮಾಕಾವಾಗಿದೆ.

Advertisement

ಬುಧವಾರ ಆಮ್ ಸ್ಟೆಲ್ವಿನ್‌ ನಲ್ಲಿ ನಡೆದ ‘ಡಿ’ ವಿಭಾಗದ ಕೊನೆಯ ಲೀಗ್ ಪಂದ್ಯದಲ್ಲಿ ಆರಂಭದಿಂದಲೇ ಪಾಕ್ ಮೇಲೆ ಆಕ್ರಮಣ ಮಾಡಲಾರಂಭಿಸಿದ ಭಾರತ 5-3 ಅಂತರದ ಭರ್ಜರಿ ಜಯ ಸಾಧಿಸಿತು. ನಾಯಕ ಹರ್ಮನ್ ಪ್ರೀತ್ ಸಿಂಗ್ (5ನೇ ಮತ್ತು 21ನೇ ನಿಮಿಷ) ಮತ್ತು ಅಭಿಷೇಕ್ ತಲಾ 2 ಗೋಲು ಬಾರಿಸಿದರೆ (11ನೇ ಮತ್ತು 24ನೇ ನಿಮಿಷ), ಉಪನಾಯಕ ಹಾರ್ದಿಕ್ ಸಿಂಗ್ ಒಂದು ಗೋಲು ಹೊಡೆದರು (35ನೇ ನಿಮಿಷ). ಪಾಕಿಸ್ತಾನ ಪರ ಹನ್ನನ್ ಶಾಹಿದ್ 2 ಗೋಲು (22ನೇ ಮತ್ತು 46ನೇ ನಿಮಿಷ), ಸುಫಿಯಾನ್ ಖಾನ್ ಒಂದು ಗೋಲು ದಾಖಲಿಸಿದರು (24ನೇ ನಿಮಿಷ). ಇದು ವಿಶ್ವಕಪ್ ಹಾಕಿ ಇತಿಹಾಸದಲ್ಲಿ ಪಾಕಿಸ್ಥಾನ ವಿರುದ್ಧ ಆಡಿದ 6 ಪಂದ್ಯಗಳಲ್ಲಿ ಭಾರತ ಸಾಧಿಸಿದ 4ನೇ ಗೆಲುವು. ಸತತವಾಗಿ 2ನೆಯದು. ಪಾಕ್ ಕೊನೆಯ ಸಲ ಭಾರತವನ್ನು ಮಣಿಸಿದ್ದು ಸರಿಯಾಗಿ 40 ವರ್ಷಗಳ ಹಿಂದೆ 1986ರಲ್ಲಿ.

Advertisement

ಭಾರತದ ಬಿರುಸಿನ ಆಟ

ಬಿರುಸಿನಿಂದಲೇ ಆಟ ಆರಂಭಿಸಿದ ಭಾರತ ಯಾವ ಹಂತದಲ್ಲೂ ಪಾಕಿಸ್ಥಾನಕ್ಕೆ ಮುನ್ನಡೆ ಬಿಟ್ಟುಕೊಡಲಿಲ್ಲ. ಮೊದಲ ಕ್ವಾರ್ಟರ್ ನಲ್ಲೇ 2-0 ಮುನ್ನಡೆ ಸಾಧಿಸಿತು. 2ನೇ ಕ್ವಾರ್ಟರ್ ನಲ್ಲಿ ಎರಡೂ ತಂಡಗಳು 2 ಗೋಲು ಸಿಡಿಸಿದವು. ಭಾರತದ ಮುನ್ನಡೆ 4-2ಕ್ಕೆ ಏರಿತು. 3ನೇ ಕ್ವಾರ್ಟರ್ ನಲ್ಲಿ ಭಾರತದಿಂದ ಒಂದು ಗೋಲು ದಾಖಲಾಯಿತು. ಮುನ್ನಡೆ 5-2ಕ್ಕೆ ತಲುಪಿತು. ಕೊನೆಯ ಕ್ವಾರ್ಟರ್ ನ ಮೊದಲ ನಿಮಿಷದಲ್ಲೇ ಪಾಕ್ 3ನೇ ಗೋಲು ಹೊಡೆಯಿತು. ಇದರಿಂದ ಸೋಲಿನ ಅಂತರವಷ್ಟೇ ತಗ್ಗಿತು.

ಇಂಗ್ಲೆಂಡ್ ಅಜೇಯ

ಮೂರೂ ಪಂದ್ಯಗಳನ್ನು ಗೆದ್ದ ಇಂಗ್ಲೆಂಡ್ ‘ಡಿ’ ವಿಭಾಗದ ಅಗ್ರಸ್ಥಾನ ಅಲಂಕರಿಸಿತು (9 ಅಂಕ). ಭಾರತ 2 ಜಯದೊಂದಿಗೆ 2ನೇ ಸ್ಥಾನಿಯಾಯಿತು (6 ಅಂಕ). ಪಾಕಿಸ್ಥಾನ ಮತ್ತು ವೇಲ್ಸ್ ಗೆಲುವಿನ ಮುಖವನ್ನೇ ಕಾಣಲಿಲ್ಲ. 2 ಸೋಲು, ಒಂದು ಡ್ರಾ ಫಲಿತಾಂಶದೊಂದಿಗೆ ಒಂದಂಕವನ್ನಷ್ಟೇ ಪಡೆದವು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ