ಬಂಟ್ವಾಳ, ಅ. 15 : ನೀಲ್ಯ–ಪಣೋಲಿಬೈಲು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಸಂಪರ್ಕ ರಸ್ತೆಯ ಎರಡು ಕಿರು ಸೇತುವೆಗಳ ನಿರ್ಮಾಣ ಹಾಗೂ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಅವರ ಅನುದಾನದಲ್ಲಿ ಸುಮಾರು ₹65 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿವೇಕ್ ಶೆಟ್ಟಿ ನಗ್ರಿಗುತ್ತು ಅವರು, ಸಜೀಪ ಮೂಡ ಗ್ರಾಮದ ಸಮತೋಲಿತ ಅಭಿವೃದ್ಧಿಯ ದೃಷ್ಟಿಯಿಂದ ಈ ಸಂಪರ್ಕ ರಸ್ತೆ ಅತ್ಯಂತ ಮಹತ್ವದ್ದಾಗಿದೆ. ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಅನುದಾನ ಒದಗಿಸಿದ ಶಾಸಕ ಶ್ರೀ ರಾಜೇಶ್ ನಾಯ್ಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಾಮಗಾರಿಯು ಶೀಘ್ರವಾಗಿ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀಕಾಂತ್ ಶೆಟ್ಟಿ ಸಂಕೇಶ, ಇಂಜಿನಿಯರ್ ಶ್ರೀ ರವಿಚಂದ್ರ ಹಾಗೂ ಗುತ್ತಿಗೆದಾರ ಶ್ರೀ ಅಬ್ದುಲ್ ಖಾದರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಚಂದ್ರಶೇಖರ ಶೆಟ್ಟಿ ನೀಲ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಶಿವಪ್ರಸಾದ್ ಶೆಟ್ಟಿ ಕೇವುಲ ಅವರು ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಶ್ರೀ ಜಯರಾಮ ಶೆಟ್ಟಿ ನಗ್ರಿಗುತ್ತು, ಶ್ರೀ ನವೀನ್ ಕುಮಾರ್ ಪಣೋಲಿಬೈಲು–ಭಂಡಾರ ಮನೆ, ಶ್ರೀ ರಮೇಶ್ ಎಂ. ಪಣೋಲಿಬೈಲು–ಭಂಡಾರ ಮನೆ, ಶ್ರೀ ಮೋಹನ್‌ದಾಸ್ ಹೆಗ್ಡೆ ಕುಡ್ವಪಾಲು, ಶ್ರೀ ರತ್ನಾಕರ ಪೂಜಾರಿ ನಾಡಾರು, ಶ್ರೀ ದಯಾನಂದ ಶೆಟ್ಟಿ ನೀಲ್ಯ, ಶ್ರೀ ಪ್ರಶಾಂತ್ ಪೂಜಾರಿ ವಿಟ್ಲುಕೋಡಿ, ಶ್ರೀ ಹೈದರ್ ಕೆ.ಎಚ್. ಬೊಳ್ಳಾಯಿ, ಶ್ರೀ ರೈಮಂಡ್ ಅಂದ್ರಾಡೆ ನೀಲ್ಯ, ಶ್ರೀ ಪುಷ್ಪರಾಜ್ ಗಟ್ಟಿ ಪಣೋಲಿಬೈಲು ಸೇರಿದಂತೆ ಸಂಪರ್ಕ ರಸ್ತೆಯ ಫಲಾನುಭವಿ ಗ್ರಾಮಸ್ಥರು ಉಪಸ್ಥಿತರಿದ್ದರು.

