ನವದೆಹಲಿ : ಬೆಳ್ಳಂಬೆಳಗ್ಗೆ ದೇಶದ ಗ್ರಾಹಕರಿಗೆ ʻತೈಲ ಶಾಕ್ʼ – ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ !

ನವದೆಹಲಿ, ಮೇ 25 : ಕೇಂದ್ರ ಸರ್ಕಾರ ಬೆಳ್ಳಂಬೆಳಗ್ಗೆ ದೇಶದ ಗ್ರಾಹಕರಿಗೆ ʻತೈಲ ಶಾಕ್ʼ‌ ಕೊಟ್ಟಿದೆ. ಸೋಮವಾರ (ಮೇ 25) ಪೆಟ್ರೋಲ್‌ (Petrol Price) ಮೇಲಿನ ಬೆಲೆ ಪ್ರತಿ ಲೀಟರ್‌ಗೆ 2.61 ರೂ. ಮತ್ತು ಡೀಸೆಲ್‌ ಬೆಲೆ (Diesel Price) ಪ್ರತಿ ಲೀಟರ್‌ಗೆ 2.71 ರೂ. ಏರಿಕೆ ಮಾಡಿದೆ. ಇದು ಕಳೆದ 10 ದಿನಗಳಲ್ಲಿ 4ನೇ ಬಾರಿಗೆ ಮಾಡಿದ ದರ ಏರಿಕೆಯಾಗಿದೆ.

ಬೆಂಗಳೂರು ನಗರದಲ್ಲಿ (Bengaluru City) ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 110.89 ರೂ. ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 98.80 ರೂ.ಗೆ ತಲುಪಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆ ಮೇ 15ರಿಂದ ಈಚೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರವನ್ನು ಹೆಚ್ಚಿಸಿವೆ.

ಮೇ 15 ರಂದು ಮೊದಲ ಬಾರಿಗೆ ಏಕಾಏಕಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಬೆಲೆಯನ್ನು 3 ರೂ. ಹೆಚ್ಚಳ ಮಾಡಿತ್ತು. ಬಳಿಕ ಮೇ 23 ರಂದು ಪೆಟ್ರೋಲ್ ದರವನ್ನು 87 ಪೈಸೆ ಮತ್ತು ಡೀಸೆಲ್ 91 ಪೈಸೆ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಪೆಟ್ರೋಲ್‌ ಮೇಲಿನ ಬೆಲೆ 2.61 ರೂ. ಮತ್ತು ಡೀಸೆಲ್ ಮೇಲಿನ ಬೆಲೆ 2.71 ರೂ. ಏರಿಸಿದ್ದು, ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಎರಡೇ ವಾರದಲ್ಲಿ 4ನೇ ಬಾರಿಗೆ ತೈಲ ದರ ಏರಿಕೆ ಮಾಡಲಾಗಿದ್ದು, ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಪದೇ ಪದೇ ದರ ಏರಿಸಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಉಜಿರೆ ಎಸ್‌ಡಿಎಂಐಟಿಯಲ್ಲಿ ಅ. 29ರಿಂದ ‘ಸ್ಪರ್ಧಂ-2026’ ಅಂತರಕಾಲೇಜು ಸ್ಪರ್ಧೋತ್ಸವ – ಅ. 30ರಂದು ಸ್ಟಾರ್ ನೈಟ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಮುಂಬೈ : ನೆಪಕ್ಕೆ ರ‍್ಯಾಪಿಡೋ ರೈಡರ್ : ಪ್ರಧಾನಿ ಮೋದಿ ಹತ್ಯೆಗೆ ಜೈಶ್ ಉಗ್ರರೊಂದಿಗೆ ಸಂಚು ರೂಪಿಸುತ್ತಿದ್ದ ಅಖ್ತರ್ ಎಂಬಾತ ಎಟಿಎಸ್ ಬಲೆಗೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಕನ್ಯಾಡಿ : ಅಯೋಧ್ಯೆಯ ಕನ್ಯಾಡಿ ಶ್ರೀರಾಮ ಮಠದ ಯೋಜನೆಗೆ ಮಸ್ಕತ್‌ನ ಶ್ರೀರಾಮ ಭಕ್ತರಿಂದ ₹10 ಲಕ್ಷಕ್ಕೂ ಅಧಿಕ ದೇಣಿಗೆ