ಇಂಗ್ಲೆಂಡ್ ತಂಡದ ಟೆಸ್ಟ್ ಕೋಚ್ ಆಗಿ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಹೆಸರು ಮುಂಚೂಣಿಯಲ್ಲಿ !

ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-2 ಅಂತರದ ಆಘಾತಕಾರಿ ಸೋಲಿನ ಬೆನ್ನಲ್ಲೇ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರನ್ನು ಟೆಸ್ಟ್ ಕೋಚಿಂಗ್ ಹುದ್ದೆಯಿಂದ ವಜಾಗೊಳಿಸಿದೆ. ಮೆಕಲಮ್ ನಿರ್ಗಮನದಿಂದ ತೆರವಾಗಿರುವ ಈ ಪ್ರತಿಷ್ಠಿತ ಸ್ಥಾನಕ್ಕೆ ಭಾರತೀಯ ಕ್ರಿಕೆಟ್ ದಂತಕಥೆ, ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಹೆಸರು ಮುಂಚೂಣಿಯಲ್ಲಿದೆ.

Advertisement

ಬ್ರಿಟಿಷ್ ಪತ್ರಿಕೆ ದಿ ಡೈಲಿ ಟೆಲಿಗ್ರಾಫ್ ವರದಿಯ ಪ್ರಕಾರ, ಇಂಗ್ಲೆಂಡ್ ಮಂಡಳಿ ಸಿದ್ಧಪಡಿಸಿರುವ ಶಾರ್ಟ್‌ಲಿಸ್ಟ್‌ನಲ್ಲಿ ರಾಹುಲ್ ದ್ರಾವಿಡ್ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಭಾರತೀಯ ಲೆಜೆಂಡ್ ಆಂಗ್ಲರ ಪಡೆಯ ಕೋಚ್ ಆಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ ಎಂದು ತಿಳಿಸಿದೆ. ರಾಹುಲ್ ದ್ರಾವಿಡ್ ಕ್ಲಾಸಿಕ್ ಟೆಸ್ಟ್ ಕ್ರಿಕೆಟಿಗ. ಅಷ್ಟೇ ಅಲ್ಲದೆ ಈ ಹಿಂದೆ ಕೋಚ್ ಆಗಿ ಭಾರತ ತಂಡವನ್ನು ಟೆಸ್ಟ್​ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ ಫೈನಲ್​ಗೆ ಮುನ್ನಡೆಸಿದ್ದರು. ಅವರ ಶಿಸ್ತುಬದ್ಧ ನಡೆ, ಗಂಭೀರ ಯೋಜನೆಗಳು ಮತ್ತು ಯುವ ಆಟಗಾರರನ್ನು ಬೆಳೆಸುವ ಕಲೆ ಇಂಗ್ಲೆಂಡ್ ಮಂಡಳಿಗೆ ಭಾರಿ ಆಕರ್ಷಕವಾಗಿ ಕಂಡಿದ್ದು, ಟೆಸ್ಟ್ ಕೋಚ್ ಆಗಿ ನೇಮಿಸಲು ತುದಿಗಾಲಲ್ಲಿ ನಿಂತಿದೆ.

ಸತತ ಸೋಲಿನಿಂದ ಕಂಗೆಟ್ಟಿರುವ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ರಾಹುಲ್ ದ್ರಾವಿಡ್ ಅವರ ರಕ್ಷಣಾತ್ಮಕ ಮತ್ತು ತಾಂತ್ರಿಕ ಮಾರ್ಗದರ್ಶನ ಅಗತ್ಯವಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಭಾವಿಸಿ, ಕೋಚ್ ಆಗಿ ನೇಮಿಸಲು ನಿರ್ಧರಿಸಿದೆ.

ದ್ರಾವಿಡ್ ಅಂಗಳದಲ್ಲಿ ಚೆಂಡು !

ವರದಿಗಳ ಪ್ರಕಾರ, ಪೂರ್ಣ ಪ್ರಮಾಣದಲ್ಲಿ ಯಾವುದೇ ರಾಷ್ಟ್ರೀಯ ಕೋಚಿಂಗ್ ಜವಾಬ್ದಾರಿ ಒಪ್ಪಿಕೊಳ್ಳಲು ರಾಹುಲ್ ದ್ರಾವಿಡ್ ಅವರಿಗೆ ಇಷ್ಟವಿಲ್ಲ. ಆದರೆ, ಇಂಗ್ಲೆಂಡ್‌ನ ವಿಭಜಿತ ಕೋಚಿಂಗ್ ವ್ಯವಸ್ಥೆ ಅವರಿಗೆ ಸೂಕ್ತವಾಗಬಹುದು ಎನ್ನಲಾಗಿದೆ. ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ವೈಟ್-ಬಾಲ್ (ಏಕದಿನ, ಟಿ20) ತಂಡಕ್ಕೆ ಕೋಚ್ ಆಗಿ ಮುಂದುವರಿಯಲಿದ್ದು, ಕೇವಲ ಟೆಸ್ಟ್ ತಂಡಕ್ಕೆ ಮಾತ್ರ ಹೊಸ ಕೋಚ್ ಹುಡುಕಾಟ ನಡೆಯುತ್ತಿದೆ. ಹೀಗಾಗಿ ರಾಹುಲ್ ದ್ರಾವಿಡ್ ಅವರಿಗೆ ವರ್ಷದ ಬಹುಪಾಲು ಸಮಯ ಮನೆಯಲ್ಲೇ ಕಳೆಯಲು ಮತ್ತು ತಮ್ಮ ನೆಚ್ಚಿನ ಟೆಸ್ಟ್ ಕ್ರಿಕೆಟ್‌ಗೆ ಮಾತ್ರ ಕೊಡುಗೆ ನೀಡಲು ಉತ್ತಮ ಅವಕಾಶ ಸಿಗಲಿದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ನ ಈ ಆಫರ್​ ಅನ್ನು ಒಪ್ಪಿಕೊಂಡರೂ ಅಚ್ಚರಿಪಡಬೇಕಿಲ್ಲ.

ಆ್ಯಶಸ್​ಗೂ ಮುನ್ನ ಹೊಸ ಕೋಚ್

ಮುಂದಿನ ವರ್ಷ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಪ್ರತಿಷ್ಠಿತ ಆ್ಯಶಸ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಶೀಘ್ರದಲ್ಲೇ ಹೊಸ ಕೋಚ್ ಹೆಸರನ್ನು ಅಂತಿಮಗೊಳಿಸಲಿದೆ. ರಾಹುಲ್ ದ್ರಾವಿಡ್ ಈ ಆಫರ್ ಒಪ್ಪಿಕೊಂಡರೆ, ಅದು ವಿಶ್ವ ಕ್ರಿಕೆಟ್‌ನ ಅತ್ಯಂತ ರೋಚಕ ತಿರುವುಗಳಲ್ಲಿ ಒಂದಾಗಲಿದೆ. ಅಲ್ಲದೆ ದ್ರಾವಿಡ್​ ಎಂಟ್ರಿಯಿಂದ ಅತ್ತ ಆ್ಯಶಸ್ ಸರಣಿಗೂ ಮುನ್ನವೇ ಆಸ್ಟ್ರೇಲಿಯಾಗೆ ಚಿಂತೆ ಶುರುವಾಗಲಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ರಧಾನಿಯವರ ಪೋಸ್ಟ್‌ಗೆ ನಿರ್ಬಂಧ ವಿವಾದ – ಫೇಸ್‌ಬುಕ್ ವಿರುದ್ಧ ಬಿಜೆಪಿ ಆಕ್ರೋಶ !

⚠️ Contents are protected on this website.