ಬೆಳ್ತಂಗಡಿ : ಸೇನಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸುತ್ತಿರುವ ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಗೌಡ’ರವರಿಗೆ ನಾಳೆ ಸಂಜೆ ಅಭಿನಂದನಾ ಕಾರ್ಯಕ್ರಮ

ಬಂದಾರು, ಜ. 31 : ರಾಷ್ಟ್ರಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ ವತಿಯಿಂದ ಭೂಸೇನೆಯಲ್ಲಿ 22 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸುತ್ತಿರುವ ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಗೌಡ ಬರೆಮೇಲು ಮುಗೇರಡ್ಕ ಇವರಿಗೆ ಅಭಿನಂದನಾ ಕಾರ್ಯಕ್ರಮವು ನಾಳೆ ಸಂಜೆ (ಫೆ. 01) ನಡೆಯಲಿದೆ.

Advertisement

ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಗೌಡ ಬರೆಮೇಲು ಮುಗೇರಡ್ಕ 22 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ, ಇಂದು ನಿವೃತ್ತಿ ಹೊಂದಿ ಫೆ. 01ರಂದು ಹುಟ್ಟೂರಿಗೆ ಆಗಮಿಸುತ್ತಿದ್ದಾರೆ. ಫೆ. 01ರಂದು ಸಂಜೆ ಸಂಜೆ – 4.30ಕ್ಕೆ ಸರಿಯಾಗಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ಕುಪ್ಪೆಟ್ಟಿ- ಉರುವಾಲು- ಪದ್ಮುಂಜ-ಮೈರೋಳಡ್ಕ – ಅಲೆಕ್ಕಿ ಮೊಗ್ರು – ಮುಗೇರಡ್ಕ ದೈವಸ್ಥಾನ ಬಳಿಯವರೆಗೆ ವೈಭವಪೂರ್ಣ ಮೆರವಣಿಗೆ ಮೂಲಕ ಸಾಗಲಿದೆ. ಸಂಜೆ 5.30ಕ್ಕೆ ಸರಿಯಾಗಿ ಮುಗೇರಡ್ಕ ದೈವಸ್ಥಾನದ ಬಳಿ ಅಭಿನಂದನಾ ಕಾರ್ಯಕ್ರಮವು ನೆರವೇರಲಿದೆ.

ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ- ಬರೆಮೇಲು ಬಾಬು ಗೌಡ ಮತ್ತು ಮೋನಕ್ಕ ದಂಪತಿಗಳ ಪುತ್ರರಾದ ದೇವಪ್ರಸಾದ್ ಗೌಡ ರವರು ಪ್ರಾಥಮಿಕ ಶಿಕ್ಷಣವನ್ನು ಮುಗೇರಡ್ಕ ಮತ್ತು ಬಂದಾರು, ಶಾಲೆ, ಪ್ರೌಢ ಶಿಕ್ಷಣವನ್ನು ಪದ್ಮುಂಜ ಮತ್ತು ಬುಳೇರಿ ಮೊಗ್ರು ಶಾಲೆ, ಪಿಯುಸಿ ವ್ಯಾಸಂಗವನ್ನು ಪದ್ಮುಂಜದಲ್ಲಿ ಉನ್ನತ ಅಂಕದೊಂದಿಗೆ ತೇರ್ಗಡೆ ಹೊಂದಿದ್ದು, ಶಾಲಾ ಜೀವನದಲ್ಲಿ ತಾಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಓಟಗಾರನಾಗಿ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದರು. ಇವರು 2003 ನವೆಂಬರ್ ನಲ್ಲಿ ಮಂಗಳೂರಿನಲ್ಲಿ ಭಾರತ ದೇಶದ ರಕ್ಷಣಾ ವಿಭಾಗದ ಭೂ ಸೇನಾ ವಿಭಾಗದಲ್ಲಿ ಆಯ್ಕೆಯಾಗಿ, 2004 ಜನವರಿಯಲ್ಲಿ ಮಧ್ಯಪ್ರದೇಶದ ಭೂಪಾಲ್ ನಲ್ಲಿ (CORE&E.M.E) ಎಲೆಕ್ಟ್ರಾನಿಕ್ ಮೆಕಾನಿಕಲ್ ಇಂಜಿನಿಯರಿಂಗ್ ಟ್ರೈನಿಂಗ್ ಸೆಂಟರ್ ನಲ್ಲಿ ಸುಮಾರು 1ವರ್ಷ 5 ತಿಂಗಳುಗಳ ಕಾಲ ತರಬೇತಿ ಪಡೆದು ದೇಶದ ವಿವಿಧ ರಾಜ್ಯಗಳಾದ ಪಂಜಾಬ್, ಜಮ್ಮು ಕಾಶ್ಮೀರದ ಲಡಾಕ್, ಉತ್ತರಪ್ರದೇಶ, ಜಮ್ಮು ಕಾಶ್ಮೀರ, ಭೂಪಾಲ್, ಅಸ್ಸಾಂ, ಅರುಣಾಚಲಪ್ರದೇಶ, ಉತ್ತರಖಾoಡ್ ನ I.M.A ಡೆಹ್ರಾಡೊನ್, ಪಠಾಣ್ಕೋಟ್ (ಪಂಜಾಬ್) ಹೀಗೆ ಹಲವಾರು ದೇಶದ ಭಯಾನಕ ಗಡಿ ಪ್ರದೇಶದಲ್ಲಿ ಮೈ ಕೊರೆಯುವ -25 ಡಿಗ್ರಿ ಚಳಿಯಲ್ಲೂ 22 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ್ದಾರೆ. ಸೈನ್ಯದಲ್ಲಿ ಉತ್ತಮ ಶಿಸ್ತಿನ ಸಿಪಾಯಿಯಾಗಿದ್ದು, ತನ್ನ ಕಾರ್ಯದಲ್ಲಿ ಯಾವುದೇ ಕಪ್ಪು ಚುಕ್ಕೆಯನ್ನು ಹೊಂದದೆ. ಸೇನೆಯ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆದುಕೊಂಡಿದ್ದ ಭಾರತ ಮಾತೆಯ ಹೆಮ್ಮೆಯ ಪುತ್ರ ಎ.ಸಿ.ಪಿ ಹವಾಲ್ದಾರ್ ಶ್ರೀ ದೇವಕುಮಾರ್ ಗೌಡ ರವರಿಗೆ ರಾಷ್ಟ್ರ ಭಕ್ತರ ವೇದಿಕೆ ಬಂದಾರು, ಮೊಗ್ರು ಗ್ರಾಮದ ವತಿಯಿಂದ ಗೌರವಪೂರ್ವಕ ಅಭಿವಂದನಾ ಕಾರ್ಯಕ್ರಮವು ಜರುಗಲಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಗರಿಷ್ಠ ತಾಪಮಾನ – ಸೂರ್ಯಾಘಾತಕ್ಕೆ ಒಳಗಾದ ಬಾಲಕನ ದೇಹದಲ್ಲಿ ಸುಟ್ಟ ಗಾಯ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಯಂಗ್ ಬಾಯ್ಸ್ ಸವಣಾಲು ಆಶ್ರಯದಲ್ಲಿ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದ ಪ್ರೌಢಶಾಲೆ ವಿಭಾಗದ ಬಾಲಕರ ಪಂದ್ಯಾಟ ಆರಂಭ

ಕರಾವಳಿ, ಟಾಪ್ ಸುದ್ದಿಗಳು

ಕರಾವಳಿಗೆ ಅಪ್ಪಳಿಸಿದ ಉಷ್ಣ ಅಲೆ – ಮನೆಯಿಂದ ಹೊರ ಬರುವ ಮುನ್ನ ಎಚ್ಚರ ! ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ

⚠️ Contents are protected on this website.