ಬಂಟ್ವಾಳ, ಅ. 09 : ತಾಲೂಕಿನ ಸಜೀಪ ಮೂಡ ರಸ್ತೆಯೂ ತೀವ್ರ ಹದಗೆಟ್ಟಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಎದುರಾಗಿತ್ತು. ಅಲ್ಲದೆ, ಅ. 22ಕ್ಕೆ ಸಜೀಪ ಮೂಡ ನೂರನೇ ವರ್ಷದ ದಸರಾ ಕಾರ್ಯಕ್ರಮದ ಭವ್ಯ ಶೋಭಾ ಯಾತ್ರೆ ಜರುಗಲಿದ್ದು, ಅದಕ್ಕೂ ಸಂಕಷ್ಟ ಎದುರಾಗಿತ್ತು. ಈ ಹಿನ್ನಲೆಯಲ್ಲಿ, ದಸರಾ ಶತಮಾನೋತ್ಸವದ ಅಧ್ಯಕ್ಷರಾದ ವಿವೇಕ್ ಶೆಟ್ಟಿ ನಗ್ರಿಗುತ್ತು ಇವರು ಶಾಸಕ ರಾಜೇಶ್ ನ್ಯಾಕ್ ರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ತಕ್ಷಣವೇ ಸ್ಪಂದಿಸಿದ ಶಾಸಕರು ಅ. 17ರೊಳಗಾಗಿ ರಸ್ತೆ ದುರಸ್ತಿಪಡಿಸುವ ಭರವಸೆಯನ್ನು ನೀಡಿದ್ದಾರೆ.
ಅಕ್ಟೋಬರ್ 16 ರಿಂದ 22 ರವರೆಗೆ ಸಜೀಪ ಮೂಡದಲ್ಲಿ ಅದ್ದೂರಿಯಾಗಿ ನೂರನೇ ವರ್ಷದ ದಸರಾ ಕಾರ್ಯಕ್ರಮ ನೆರವೇರಲಿದೆ. ಅ. 22ಕ್ಕೆ ಭವ್ಯ ಶೋಭಾಯಾತ್ರೆಯು ಸಾಗಿ ಬರಲಿದೆ. ಆದರೆ, ಮೆಲ್ಕಾರ್ ನಿಂದ ಸಜೀಪಕ್ಕೆ ಹೋಗುವ ರಸ್ತೆ ಹೊಂಡ ಗುಂಡಿಗಳಿಂದ ಸಂಪೂರ್ಣವಾಗಿ ಹದಗೆಟ್ಟಿದೆ. ಈ ರಸ್ತೆಯಲ್ಲಿ ಶೋಭ ಯಾತ್ರೆ ನಡೆಸುವುದು ಕಷ್ಟಕರವೇ ಆಗಿತ್ತು. ಈ ಹಿನ್ನಲೆಯಲ್ಲಿ ಸಂಘಟಕರು ಮತ್ತು ಊರಿನವರು ರಸ್ತೆ ಸಮಸ್ಯೆಯ ಬಗ್ಗೆ ಸಜೀಪ ದಸರಾ ಶತಮಾನೋತ್ಸವ ದ ಅಧ್ಯಕ್ಷರಾದ ವಿವೇಕ್ ಶೆಟ್ಟಿ ನಗ್ರಿಗುತ್ತು ಇವರ ಗಮನಕ್ಕೆ ತಂದಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅಧ್ಯಕ್ಷರು, ಶಾಸಕರಾದ ರಾಜೇಶ್ ನಾಯಕ್ ಅವರ ಗಮನಕ್ಕೆ ತಂದು ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ತಕ್ಷಣವೇ ಸ್ಪಂದಿಸಿದ ಶಾಸಕರು PWD ಇಂಜಿನಿಯರ್ ಅವರಿಗೆ ಕಾಮಗಾರಿ ನಡೆಸಲು ಆದೇಶವನ್ನು ನೀಡಿದ್ದಾರೆ. ಅ. 9 ರಂದು ಸ್ಥಳ ಪರಿಶೀಲನೆ ನಡೆಸಿದ ಇಂಜಿನಿಯರ್ ಅ. 17ರ ಮೊದಲು ಕಾಮಗಾರಿ ನೆಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ರಸ್ತೆ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಶಾಸಕ ರಾಜೇಶ್ ನ್ಯಾಕ್ ಹಾಗೂ ಸಜಿಪಮೂಡ ದಸರಾ ಶತಮಾನೋತ್ಸವದ ಅಧ್ಯಕ್ಷರಾದ ವಿವೇಕ್ ಶೆಟ್ಟಿ ನಗ್ರಿಗುತ್ತು ಇವರಿಗೆ ಗ್ರಾಮಸ್ಥರು ಹಾಗೂ ಸುಭಾಷ್ ಯುವಕ ಮಂಡಲದ ಸಂಘಟಕರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

