ಬಂಟ್ವಾಳ : ಅ .17 ರಿಂದ 22ರವರೆಗೆ ಅದ್ದೂರಿ ಸಜೀಪ ದಸರಾ – ವಿವೇಕ್ ಶೆಟ್ಟಿ ನಗ್ರಿ ಗುತ್ತು

ಬಂಟ್ವಾಳ, ಅ. 13 : ಸುಭಾಷ್ ಯುವಕ ಮಂಡಲ (ರಿ.) ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ವತಿಯಿಂದ ನಡೆದುಕೊಂಡು ಬಂದಿರುವ 99 ವರ್ಷಗಳ ಮಹೋತ್ಸವ ಮುಗಿಸಿ ಇದೀಗ 100ನೇ ವರ್ಷದ ಉತ್ಸವ ಸಜೀಪ ದಸರಾ ಎಂಬ ಹೊಸ ಹೆಸರಿನ ನಾಮಕರಣದೊಂದಿಗೆ ಈ ಬಾರಿ ಅ .17 ರಿಂದ 22ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವಿವೇಕ್ ಶೆಟ್ಟಿ ನಗ್ರಿಗುತ್ತು ಹೇಳಿದರು.



ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವಿವೇಕ್ ಶೆಟ್ಟಿ ನಗ್ರಿ ಗುತ್ತು ಮಾತನಾಡಿ, ನಾವು 100 ವರ್ಷದ ಸಂಭ್ರಮಾಚರಣೆಯಲ್ಲಿ ಇದ್ದೇವೆ ನಮ್ಮ ಹಿರಿಯರು ಆರಂಭಿಸಿಕೊಂಡು ಬಂದಂತಹ ಈ ಒಂದು ಕಾರ್ಯಕ್ರಮ 100ನೇ ಹೆಜ್ಜೆಯನ್ನು ಇಡುತ್ತಿದೆ ಅಕ್ಟೋಬರ್ 17ರಿಂದ ನಡೆಯುವಂತಹ ಈ ಸುಂದರ ಕಾರ್ಯಕ್ರಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದರು.

ಅಕ್ಟೋಬರ್ 16ಕ್ಕೆ ಅದ್ದೂರಿ ಹಸಿರುವಾಣಿ ಹೊರೆ ಕಾಣಿಕೆ ನಡೆಯಲಿದೆ ಹಸಿರುವಾಣಿ ಹೊರೆಕಾಣಿಕೆ ನಡೆಯಲಿದೆ.
ಹಾಗೂ ಅಕ್ಟೋಬರ್ 18ರಂದು ನೂತನವಾಗಿ ನಿರ್ಮಾಣಗೊಂಡ ಶಾಲಾ ಕೊಠಡಿಯ ಲೋಕಾರ್ಪಣ ಕಾರ್ಯಕ್ರಮವು ನಡೆಯಲಿದೆ. ಈ ಒಂದು ಸುಂದರ ಕಾರ್ಯಕ್ರಮಕ್ಕೆ ಚಲನಚಿತ್ರ ನಟ ನಟಿಯರು ಆಗಮಿಸಲಿದ್ದಾರೆ. ವೇದಿಕೆಯಲ್ಲಿ ನೂರು ಜನ ಕಲಾವಿದರ ಅದ್ದೂರಿ ಕಾರ್ಯಕ್ರಮ ಒಂದೇ ಸಮಯದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಶಾರದ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಪೂಂಜ, ಸುಭಾಷ್ ಯುವಕ ಮಂಡಲ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಸಂಕೇಶ, ಕೀರ್ತನ್ ಆಳ್ವ, ಸುಜಿತ್ ಬೇಂಕ್ಯ ಇನ್ನಿತರರು ಉಪಸ್ಥಿತರಿದ್ದರು.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ: ವಿಟ್ಲದ ಪಟಾಕಿ ಅಂಗಡಿ ಹಿಂಭಾಗ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕುಪ್ಪೆಟ್ಟಿ – ಉಪ್ಪಿನಂಗಡಿ ರಸ್ತೆ ವಿರುದ್ಧ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ :  ಟೆಂಪೋ ಹಾಗೂ 2 ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ – ಸ್ಕೂಟ‌ರ್ ಸವಾರ ಸಾವು